Saturday, December 13, 2025
Homeರಾಷ್ಟ್ರೀಯಸ್ಥಳೀಯ ಸಂಸ್ಥೆ ಚುನಾವಣೆ ಯುಡಿಎಫ್‌ ಮುನ್ನಡೆ

ಸ್ಥಳೀಯ ಸಂಸ್ಥೆ ಚುನಾವಣೆ ಯುಡಿಎಫ್‌ ಮುನ್ನಡೆ

Kerala local body election results 2025 : UDF sweeps corporations, municipalities

ತಿರುವನಂತಪುರಂ, ಡಿ.13- ಕೇರಳದ 1,199 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದ್ದು ವಿಪಕ್ಷ ಯುಡಿಎಫ್‌ ಮಧ್ಯಾಹ್ನದ ಮಾಹಿತಿ ಪ್ರಕಾರ ಹೆಚ್ಚು ಗ್ರಾಮ ಮತ್ತು ಪಂಚಾಯತ್‌ಗಳು, ಪುರಸಭೆಗಳು ಮತ್ತು ಪಾಲಿಕೆಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.

ರಾಜ್ಯ ಚುನಾವಣಾ ಆಯೋಗದ ಪ್ರಕಾರ, ಬೆಳಿಗ್ಗೆ 11.05 ಕ್ಕೆ ಆಡಳಿತಾರೂಢ ಎಲ್‌ಡಿಎಫ್‌‍ 371 ಮತ್ತು ವಿರೋಧ ಪಕ್ಷ ಯುಡಿಎಫ್‌ 389 ಗ್ರಾಮ ಪಂಚಾಯತ್‌ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಯುಡಿಎಫ್‌ 55 ಪುರಸಭೆಗಳು, 8 ಜಿಲ್ಲಾ ಪಂಚಾಯತ್‌ಗಳು, 76 ತಾಲೂಕು ಪಂಚಾಯತ್‌ಗಳು ಮತ್ತು 4 ಪಾಲಿಕೆಸ್ಥಾನಗಳಲ್ಲಿಮುಂದಿದ್ದರೆ, ಎಲ್‌ಡಿಎಫ್‌‍ 29 ಪುರಸಭೆಗಳು, 6 ಜಿಲ್ಲಾ ಪಂಚಾಯತ್‌ಗಳು, 64 ತಾಲೂಕು ಪಂಚಾಯತ್‌ಗಳು ಮತ್ತು ಒಂದು ಪಾಲಿಕೆಯಲ್ಲಿನಮುನ್ನಡೆ ಸಾಧಿಸಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ 28 ಗ್ರಾಮ ಪಂಚಾಯತ್‌ಗಳು, ಒಂದು ತಾಲೂಕು ಪಂಚಾಯತ್‌ ಮತ್ತು ಒಂದು ಪಾಲಿಕೆಯಲ್ಲಿ ಮುಂದಿದೆ.ಆದಾಗ್ಯೂ, ಕಳೆದ 45 ವರ್ಷಗಳಿಂದ ಎಡರಂಗದ ಹಿಡಿತದಲ್ಲಿದ್ದ ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಎನ್‌ಡಿಎ ಹೆಚ್ಚು ಮುನ್ನಡೆ ಸಾಧಿಸಿದೆ. ಕಳೆದ ಬಾರಿ ಗೆದ್ದಿದ್ದ ಕೊಲ್ಲಂ, ಕೊಚ್ಚಿ ಮತ್ತು ತ್ರಿಶೂರ್‌ ಕಾರ್ಪೊರೇಷನ್‌ಗಳಲ್ಲಿ ಎಲ್‌ಡಿಎಫ್‌ ಹಿನ್ನಡೆ ಅನುಭವಿಸುವ ಸಾಧ್ಯತೆ ಹೆಚ್ಚಿತ್ತು.

ಬೆಳಿಗ್ಗೆ 11.05 ರವರೆಗಿನ ಟ್ರೆಂಡ್‌ಗಳ ಪ್ರಕಾರ, ಯುಡಿಎಫ್‌ ಕಣ್ಣೂರು ಕಾರ್ಪೊರೇಷನ್‌ ಅನ್ನು ಉಳಿಸಿಕೊಳ್ಳಲಿದೆ ಮತ್ತು ಕೋಝಿಕ್ಕೋಡ್‌ ಕಾರ್ಪೊರೇಷನ್‌ ಎಲ್‌ಡಿಎಫ್‌ನಲ್ಲೇ ಉಳಿಯುವ ಸಾಧ್ಯತೆಯಿದೆ. ಬಿಜೆಪಿ ಹಿಡಿತದಲ್ಲಿರುವ ಪಾಲಕ್ಕಾಡ್‌ ಪುರಸಭೆಯಲ್ಲಿಯೂ ಯುಡಿಎಫ್‌ ಮುನ್ನಡೆಯಲ್ಲಿದೆ.

244 ಕೇಂದ್ರಗಳು ಮತ್ತು 14 ಜಿಲ್ಲಾ ಕಲೆಕ್ಟರೇಟ್‌ಗಳಲ್ಲಿ ಎಣಿಕೆ ನಡೆಯುತ್ತಿದೆ. ತಿರುವನಂತಪುರಂ, ಪಾಲಕ್ಕಾಡ್‌ ಮತ್ತು ವಡಕರ ಸೇರಿದಂತೆ ಕೆಲವು ಎಣಿಕೆ ಕೇಂದ್ರಗಳಲ್ಲಿ ಬೂತ್‌ ಏಜೆಂಟ್‌ಗಳು ಮತ್ತು ಅಭ್ಯರ್ಥಿಗಳಿಗೆ ಪ್ರವೇಶ ನೀಡುವ ಬಗ್ಗೆ ಬೆಳಿಗ್ಗೆ ಕೆಲವು ಸಮಸ್ಯೆ ಉಂಟಾಗಿತ್ತು.

ಈ ಫಲಿತಾಂಶಗಳು 2026 ರಲ್ಲಿ ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಜ್ಯದ ರಾಜಕೀಯ ಪಕ್ಷಗಳು ಮತ್ತು ರಂಗಗಳ ಭವಿಷ್ಯದ ಹಾದಿಯನ್ನು ನಿರ್ಧರಿಸುವ ನಿರೀಕ್ಷೆಯಿದೆ.ಚುನಾಯಿತ ಪಂಚಾಯತ್‌ ಸದಸ್ಯರು ಮತ್ತು ಪುರಸಭೆಯ ಕೌನ್ಸಿಲರ್‌ಗಳ ಪ್ರಮಾಣ ವಚನ ಡಿಸೆಂಬರ್‌ 21 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

RELATED ARTICLES

Latest News