Saturday, January 24, 2026
Homeರಾಷ್ಟ್ರೀಯದೆಹಲಿ : ಪಾದಚಾರಿಗಳ ಮೇಲೆ ಹರಿದ ಐಷಾರಾಮಿ ಕಾರು, ಒಬ್ಬ ಸಾವು

ದೆಹಲಿ : ಪಾದಚಾರಿಗಳ ಮೇಲೆ ಹರಿದ ಐಷಾರಾಮಿ ಕಾರು, ಒಬ್ಬ ಸಾವು

Mercedes car kills 1, injures 2 in Delhi's Vasant Kunj; driver detained | India News

ನವದೆಹಲಿ, ನ.30-ದೆಹಲಿಯ ವಸಂತ್‌ ಕುಂಜ್‌ ಪ್ರದೇಶದ ನೆಲ್ಸನ್‌ ಮಂಡೇಲಾ ಮಾರ್ಗದ ಮಾಲ್‌ ಬಳಿ ಇಂದು ಮುಂಜಾನೆ ಮರ್ಸಿಡಿಸ್‌‍ ಐಷಾರಾಮಿ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಸಂತ್‌ ಕುಂಜ್‌ ಉತ್ತರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಆಂಬಿಯನ್‌್ಸಮಾಲ್‌ ಬಳಿ 2.33 ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಿಂದ ಕಾರು ಜಖಂಗೊಂಡಿದೆ ಎಂದು ಪೊಲೀಸ್‌‍ ಉಪ ಆಯುಕ್ತ (ನೈಋತ್ಯ) ಅಮಿತ್‌ ಗೋಯಲ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಪಘಾತದಿಂದ ರಸ್ತೆ ಪಕ್ಕ ಗಾಯಗೊಂಡು ಬಿದ್ದಿದ್ದ ಮೂವರು ಯುವಕರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಉತ್ತರಾಖಂಡದ ಚಮೋಲಿ ನಿವಾಸಿ ರೋಹಿತ್‌ (23) ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಇತರ ಇಬ್ಬರು ಚಿಕಿತ್ಸೆಪಡೆಯುತ್ತಿದ್ದಾರೆ ಎಂದು ಹೇಳಿದರು.
ಕರೋಲ್‌ ಬಾಗ್‌ ನಿವಾಸಿ ಶಿವಂ (29) ಎಂಬ ವಾಹನದ ಚಾಲಕನನ್ನು ಬಂಧಿಸಲಾಗಿದೆ. ಅಪಘಾತದ ಸಮಯದಲ್ಲಿ ಅವರು ಮದುವೆಯಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದರು ಮತ್ತು ಅವರ ಪತ್ನಿ ಮತ್ತು ಅಣ್ಣನೊಂದಿಗೆ ಇದ್ದರು ಎಂದು ತಿಳಿದುಬಂದಿದೆ.

ಪ್ರಾಥಮಿಕ ವಿಚಾರಣೆಯ ಪ್ರಕಾರ, ರಸ್ತೆ ತಿರುವು ನಂತರ ವಾಹನವು ಸಮತೋಲನ ಕಳೆದುಕೊಂಡು ಆಟೋ ನಿಲ್ದಾಣದ ಕಡೆಗೆ ತಿರುಗಿ ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದಿದೆ.

ಕಾರನ್ನು ಆರೋಪಿಯ ಸ್ನೇಹಿತ ಅಭಿಷೇಕ್‌ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಅಧಿಕಾರಿ ಹೇಳಿದರು.ಪ್ರಕರಣ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News