ಚಂಡೀಗಢ, ಡಿ.13- ಮುಖ್ಯಮಂತ್ರಿ ಕುರ್ಚಿಗೆ 500 ಕೋಟಿ ರೂ. ನೀಡಬೇಕು ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಮತ್ತು ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ನವಜೋತ್ ಕೌರ್ ಸಿಧು ಈಗ ಮುಖ್ಯಮಂತ್ರಿ ಭಗವಂತ್ ಮಾನ್‌ಗೆ ಭದ್ರತೆ ಕೋರಿ ಮನವಿ ಸಲ್ಲಿಸಿದ್ದಾರೆ.
ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಮುಂದೆಯೂ ಮುಖ್ಯಮಂತ್ರಿಯ ಮೌನವನ್ನು ಸಿಧು ಪ್ರಶ್ನಿಸಿದ್ದಾರೆ. ಮದ್ಯ ಮತ್ತು ಅಕ್ರಮ ಗಣಿಗಾರಿಕೆ ಮಾಫಿಯಾಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನವಜೋತ್ ಕೌರ್ ಪಂಜಾಬ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮತ್ತು ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಪತ್ನಿಯಾಗಿದ್ದು ಮುಖ್ಯಮಂತ್ರಿ ಕುರ್ಚಿಗೆ 500 ಕೋಟಿ ರೂ ಎಂಬ ಹೇಳಿಕೆಯ ರಾಜಕೀಯ ಪಾಳಯದಲ್ಲಿ ಸಂಚಲನ ಸೃಷ್ಠಿಸಿತ್ತು.ಮುಚುಗರಕ್ಕೆ ಒಳಗಾದ ಪಂಜಾಬ್ ಕಾಂಗ್ರೆಸ್ ಅವರನ್ನು ತನ್ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿತ್ತು.
ಮುಖ್ಯಮಂತ್ರಿ ಭಗವಂತ್ ಮಾನ್ ಜಿ, ನನಗೆ ಈಗ ಸ್ವಲ್ಪ ಭದ್ರತೆ ಬೇಕು ಇಲ್ಲದಿದ್ದರೆ ನನಗೆ ತೊಂದರೆಯ್ದಾರೆ ನೀವೇ ಜವಾಬ್ದಾರರಾಗಿರುತ್ತೀರಿ ಎಂದು ಹೇಳಿದ್ದಾರೆ.ಪಂಜಾಬ್‌ನ ರಾಜ್ಯಪಾಲರ ಮುಂದೆ ನಾನು ಎತ್ತಿರುವ ಸಮಸ್ಯೆಗಳಿಗೆ ನಿಮ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಏಕೆ ಇಲ್ಲ ಎಂದು ದಯವಿಟ್ಟು ಉತ್ತರಿಸಿ? ನೀವು ಮದ್ಯ ಮತ್ತು ಗಣಿಗಾರಿಕೆ ಮಾಫಿಯಾವನ್ನು ಏಕೆ ಬೆಂಬಲಿಸುತ್ತಿದ್ದೀರಿ?ಎಂದು ಪ್ರಶ್ನಿಸಿದ್ದಾರೆ.
ತಮ್ಮ ಇತ್ತೀಚಿನ ಸಭೆಯಲ್ಲಿ ಪಂಜಾಬ್ ರಾಜ್ಯಪಾಲರೊಂದಿಗೆ ಎತ್ತಿರುವ ಸಮಸ್ಯೆಗಳನ್ನು ಉಲ್ಲೇಖಿಸುವ ಜ್ಞಾಪಕ ಪತ್ರದ ಪ್ರತಿಯನ್ನು ಸಹ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಶಿವಾಲಿಕ್ ಬೆಟ್ಟಗಳ ಸುತ್ತಲಿನ ಸಂರಕ್ಷಿತ ಅರಣ್ಯ ಭೂಮಿಯಲ್ಲಿ ಕೆಲವು ದೊಡ್ಡವರು ವಶಪಡಿಸಿಕೊಂಡಿದ್ದಾರೆ ಮತ್ತು ಸಿಎಂ ಅದನ್ನು ಕ್ರಮಬದ್ಧಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.
