ನವದೆಹಲಿ, ಡಿ.20- ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ( 2025) ಮಸೂದೆ, 2025 ಮಧ್ಯರಾತ್ರಿ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ.
ತಡರಾತ್ರಿ 12:15ರ ಸುಮಾರಿಗೆ ಧ್ವನಿ ಮತ ದ ಮೂಲಕ ಮಸೂದೆಯನ್ನ ಅಂಗೀಕರಿಸಲಾಯಿತು. ರಾತ್ರಿವರೆಗೆ ನಡೆದ ಚರ್ಚೆಯಲ್ಲಿ ಮಹಾತಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ (ಮನರೆಗಾ) ಹೆಸರು ಬದಲಿಸಿ ಪರಿಚಯಿಸಲಾದ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.
ಗದ್ದಲ ಕೋಲಾಹಲ ಏರ್ಪಟ್ಟಿತು. ಮಸೂದೆಯ ಪ್ರತಿ ಹರಿದು ವಿಪಕ್ಷಗಳ ಆಕ್ರೋಶ ಕೊನೆಗೆ ಮಸೂದೆಯನ್ನ ವಿರೋಧಿಸಿ ವಿಪಕ್ಷಗಳು ಸಭಾತ್ಯಾಗ ನಡೆಸಿದವು. ಇದರ ನಡುವೆಯೇ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಸೂದೆಗೆ ಅಂಗೀಕಾರ ಪಡೆದುಕೊಂಡರು. ಬೆಳಗ್ಗಿನ ಜಾವದವರೆಗೂ ಧರಣಿಜಿ ರಾಮ್ ಜಿ ವಿಧೇಯಕವನ್ನ ವಿರೋಧಿ ವಿಪಕ್ಷ ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸದಸ್ಯರು ಸಂಸತ್ತಿನಲ್ಲೇ ರಾತ್ರಿ ಕಳೆದರು.
