ನವದೆಹಲಿ, ಡಿ.19- ಸಂಸತ್ತಿನ ಚಳಿಗಾಲದ ಅಧಿವೇಶನದ ಮುಕ್ತಾಯಗೊಂಡಿದೆ. ರಾಜ್ಯಸಭೆಯಲ್ಲಿ ಸಭಾಪತಿ ಹಾಗು ಉಪರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ಅವರು 15 ದಿನಗಳ ಅಧಿವೇಶನದಲ್ಲಿ ನಡೆದ ಚರ್ಚೆ,ಕಾಯ್ದೆಗಳ ಬಗ್ಗೆ ಪ್ರಸ್ತಾಪಿಸಿ ಗ್ರಾಮೀಣ ಉದ್ಯೋಗ ಖಾತರಿ ಮಸೂದೆ ಅಂಗೀಕಾರದ ಸಮಯದಲ್ಲಿ ವಿರೋಧ ಪಕ್ಷದ ಸದಸ್ಯರು ಅಡ್ಡಿಪಡಿಸಿದ್ದದರ ಬಗ್ಗೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು, ಈ ನಡವಳಿಕೆಯನ್ನು ಸಂಸತ್ ಸದಸ್ಯರಿಗೆ ತಕ್ಕುದಲ್ಲ ಮತ್ತು ಇದರ ಬಗ್ಗೆ ಆತಾವಲೋಕನ ಮಾಡಿಕೊಳ್ಳಿ ಮತ್ತು ಭವಿಷ್ಯದಲ್ಲಿ ಅಂತಹ ನಡವಳಿಕೆಯಿಂದ ದೂರವಿರಿ ಎಂದು ಸಲಹೆ ನೀಡಿದರು.
ಮೇಲನೆಯ 269 ನೇ ಅಧಿವೇಶನದಲ್ಲಿ ಸುಮಾರು 92 ಗಂಟೆಗಳ ಕಾಲ ನಡೆದ ಕಲಾಪದಲ್ಲಿ ಹಲವು ಮಸೂದೆ ಅಂಗೀಕಾರಗೊಂಡಿದೆ.ಪ್ರಧಾನಿ ನರೇಂದ್ರ ಮೋದಿ, ಸದನದ ನಾಯಕ ಜೆ. ಪಿ. ನಡ್ಡಾ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನೆಗಳಿಗೆ ಸಭಾಪತಿ ಅವರು ಧನ್ಯವಾದ ಅರ್ಪಿಸಿದರು.
ಅಧಿಕಾರ ವಹಿಸಿಕೊಂಡ ನಂತರ ಸದನದ ಅಧ್ಯಕ್ಷತೆ ವಹಿಸಿದ ಮೊದಲ ಅವಧಿ ಚಳಿಗಾಲದ ಅಧಿವೇಶನವು ಮಹತ್ವದ್ದಾಗಿತ್ತು ಎಂದು ಹೇಳಿದರು.ನಂತರ ರಾಷ್ಟ್ರಗೀತೆ ನುಡಿಸಲಾಯಿತು, ನಂತರ ಅಧ್ಯಕ್ಷರು ರಾಜ್ಯಸಭೆಯ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಅಧಿವೇಶದ ಸಮಯದಲ್ಲಿ, ರಾಜ್ಯಸಭೆಯು ಎಂಟು ಮಸೂದೆಗಳನ್ನು ಅಂಗೀಕರಿಸಿತು
ಇನ್ನು ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಸದಸ್ಯರಿಗೆ ಧನ್ಯವಾದ ತಿಳಿಸಿ ಮಹತ್ವದ ಚರ್ಚೆ ಮತ್ತು ಮಸೂದೆ ಅಂಗೀಕಾರಗೊಂಡಿದೆ ಎಂದು ತಿಳಿಸಿದರು. ನಂತರ ಕಾಲಾಪವನ್ನು ್ನ ಅನಿರ್ದಿಷ್ಟಾವಧಿಗೆ ಮುಂದೂಡಿದರು. ಸಂಸತ್ತಿನ ಚಳಿಗಾಲದ ಅಧಿವೇಶನವು ಡಿ.1 ರಂದು ಪ್ರಾರಂಭವಾಗಿತ್ತು.
