ಕೋಲ್ಕತ್ತಾ, ಡಿ.20- ಪಶ್ಚಿಮ ಬಂಗಾಳದ ತಾಹೆರ್‌ಪುರ ಹೆಲಿಪ್ಯಾಡ್‌ನಲ್ಲಿ ದಟ್ಟವಾದ ಮಂಜಿನಿಂದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕಡಿಮೆ ಗೋಚರತೆಯಿಂದಾಗಿ ಇಳಿಯಲು ಸಾಧ್ಯವಾಗದೆ ಹಿಂತಿರುಗಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಹೆಲಿಪ್ಯಾಡ್ ಮೈದಾನದ ಮೇಲೆ ಸ್ವಲ್ಪ ಹೊತ್ತು ಇಳಿಯಲು ಪ್ರಯತ್ನಿಸಿದ ನಂತರ ಹೆಲಿಕಾಪ್ಟರ್ ಯು-ಟರ್ನ್ ತೆಗೆದುಕೊಂಡು ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಮರಳಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿಗಳು ಹವಾಮಾನ ಪರಿಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಮಾನ ನಿಲ್ದಾಣದಲ್ಲಿ ಕೆಲ ಹೊತ್ತು ಕಾಯುತ್ತಿದ್ದರು.ಮೋದಿ ಅವರು ರಸ್ತೆ ಮೂಲಕ ರ್ಯಾಲಿ ನಡೆಯುವ ಜಿಲ್ಲೆಯನ್ನು ಯಾವಾಗ ತಲುಪುತ್ತಾರೆ ಎಂಬುದು ತಿಳಿಯಲಿಲ್ಲ.
ಹವಾಮಾನ ಸ್ಪಷ್ಟವಾಗುವವರೆಗೆ ಕಾದು ಮತ್ತೆ ವೈಮಾನಿಕ ಮಾರ್ಗದ ಮೂಲಕ ತಾಹೆರ್‌ಪುರ ತಲುಪಲು ಪ್ರಯತ್ನ ಮಾಡುತ್ತಾರೆಯೇ ಅತವ ರಸ್ತೆ ಮಾರ್ಗದಲ್ಲಿ ಹೋಗಾತ್ತರೂ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿ ಹೇಳಿದರು.
ಇದಕ್ಕೂ ಮುನ್ನ, ಪ್ರಧಾನಿ ಬೆಳಿಗ್ಗೆ 10.40 ರ ಸುಮಾರಿಗೆ ಕೋಲ್ಕತ್ತಾ ತಲುಪಿದರು ಮತ್ತು ನಾಡಿಯಾ ಜಿಲ್ಲೆಯ ತಾಹೆರ್‌ಪುರಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿದರು, ಅಲ್ಲಿ ಅವರು ಪಶ್ಚಿಮ ಬಂಗಾಳದಲ್ಲಿ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲು ಸರ್ಕಾರಿ ಕಾರ್ಯಕ್ರಮವನ್ನು ಭಾಗವಹಿಸಬೇಕಿತ್ತು. ನಂತರ ಅವರು ಪರಿವರ್ತನ ಸಂಕಲ್ಪ, ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
