ಈರೋಡ್, ಜ. 15 (ಪಿಟಿಐ) ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎಸ್‌ಟಿಆರ್) ಆನೆಯೊಂದು ರೈತನನ್ನು ತುಳಿದು ಕೊಂದು ಹಾಕಿದೆ. 35 ವರ್ಷದ ರೈತನೊಬ್ಬ ಆನೆಯೊಂದು ತುಳಿದು ಸಾವನ್ನಪ್ಪಿದ್ದಾನೆ ಎಂದು ಅರಣ್ಯ ಅಧಿಕಾರಿಗಳು ಇಂದಿಲ್ಲಿ ತಿಳಿಸಿದ್ದಾರೆ.
ಆನೆ ದಾಳಿಗೆ ಬಲಿಯಾದ ರೈತನನ್ನು ಕಡಂಬೂರು ಅರಣ್ಯ ಪ್ರದೇಶದ ಕಡಗನಳ್ಳಿ ಗ್ರಾಮದ ಸಿದ್ದುರಾಜ್ ಎಂದು ಗುರುತಿಸಲಾಗಿದೆ.
ಈತ ನಿನ್ನೆ ರಾತ್ರಿ ತನ್ನ ಮೆಕ್ಕೆಜೋಳ ಬೆಳೆಯನ್ನು ಪ್ರಾಣಿಗಳಿಂದ ರಕ್ಷಿಸಲು ತನ್ನ ಎರಡು ಎಕರೆ ಭೂಮಿಗೆ ಹೋಗಿದ್ದ. ಅರಣ್ಯ ಪ್ರದೇಶದಿಂದ ಹೊರಬಂದ ಆನೆಯೊಂದು ಆತನ ಮೇಲೆ ದಾಳಿ ಮಾಡಿ ಸ್ಥಳದಲ್ಲೇ ತುಳಿದು ಸಾಯಿಸಿದೆ ಎಂದು ಅವರು ಹೇಳಿದರು.
ಸಮೀಪದ ಭೂ ಮಾಲೀಕರು ಕಡಂಬೂರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದರು. ನಂತರ, ಮೃತದೇಹವನ್ನು ಶವಪರೀಕ್ಷೆಗಾಗಿ ಸತ್ಯಮಂಗಲಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಕದಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.
