Saturday, January 24, 2026
Homeರಾಷ್ಟ್ರೀಯಭೋಪಾಲ್‌‍ : ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರ ಸಾವು

ಭೋಪಾಲ್‌‍ : ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರ ಸಾವು

Tragic Collision in Bhopal: Four Dead in SUV Crash

ಭೋಪಾಲ್‌‍, ನ.30-ಮಧ್ಯಪ್ರದೇಶದ ಭೋಪಾಲ್‌ ಜಿಲ್ಲೆಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಇಲ್ಲಿಂದ 60 ಕಿ.ಮೀ ದೂರದಲ್ಲಿರುವ ಬೆರಾಸಿಯಾ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಕಾರೊಂದರಲ್ಲಿ ಶಿಯೋಪುರ್‌ ಜಿಲ್ಲೆಯ ಐವರು ಭೋಪಾಲ್‌ನಿಂದ ಹಿಂತಿರುಗುತ್ತಿದ್ದರು ಎಂದು ಬೆರಾಸಿಯಾ ಪೊಲೀಸ್‌‍ ಠಾಣೆ ಅಧಿಕಾರಿ ವೀರೇಂದ್ರ ಕುಮಾರ್‌ ಸೇನ್‌ ತಿಳಿಸಿದ್ದಾರೆ.

ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಒಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಮತ್ತೊಂದು ಕಾರಿನಲ್ಲಿದ್ದರು ಇಬ್ಬರು ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ

RELATED ARTICLES

Latest News