Wednesday, December 3, 2025
Homeರಾಷ್ಟ್ರೀಯನವದೆಹಲಿಯಲ್ಲಿ ಎರಡು ದಿನ 'ಸುಜಲಂ ಭಾರತ್ ಮಿಷನ್' ಶೃಂಗಸಭೆ

ನವದೆಹಲಿಯಲ್ಲಿ ಎರಡು ದಿನ ‘ಸುಜಲಂ ಭಾರತ್ ಮಿಷನ್’ ಶೃಂಗಸಭೆ

Two-day 'Sujalam Bharat Mission' summit in New Delhi


ನವದೆಹಲಿ,ಡಿ.3- ಮುಂದಿನ 2028ರ ವೇಳೆಗೆ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಟ್ಯಾಪ್‌(ಕೊಳಾಯಿ) ಮೂಲಕ ಗುಣಮಟ್ಟದ ನೀರು ಒದಗಿಸಲು ಕಾರ್ಯನಿರತರಾಗುವಂತೆ ಪ್ರಧಾನಿ ನರೇಂದ್ರಮೋದಿ, ಅಧಿಕಾರಿಗಳಿಗೆ ಕಟ್ಟನಿಟ್ಟಿನ ಸೂಚನೆ ನೀಡಿದ್ದಾರೆ .
ದೆಹಲಿಯ ಭಾರತ್‌ ಮಂಟಪದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಎರಡು ದಿನಗಳ ಕಾಲ ಆಯೋಜಿಸಿದ್ದ ಸುಜಲಂ ಭಾರತ್‌ ಮಿಷನ್‌ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಜಲ ಜೀವನ್‌ ಮಿಷನ್‌ನಡಿ 15 ಕೋಟಿ ಗ್ರಾಮೀಣ ಮನೆಗಳಿಗೆ ಟ್ಯಾಪ್‌ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ.


ಈ ಮಿಷನ್‌ ಅನ್ನು 2019ರ ಆಗಸ್ಟ್‌ 15ರಂದು ಪ್ರಾರಂಭಿಸಲಾಗಿದೆ. 2028ರ ವೇಳೆಗೆ ಪ್ರತಿ ಗ್ರಾಮೀಣ ಮನೆಗೂ ಕೊಳಾಯಿ ನೀರು ಒದಗಿಸುವ ಗುರಿ ಹೊಂದಿದೆ. ಈ ಗುರಿಯು ದಿನಕ್ಕೆ ಪ್ರತಿ ವ್ಯಕ್ತಿಗೆ 55 ಲೀಟರ್‌ ನೀರನ್ನು ಖಚಿತಪಡಿಸಿಕೊಳ್ಳುವುದನ್ನು ಒಳಗೊಂಡಿದೆ.
ಸುಜಲಂ ಭಾರತ್‌ ಕೇವಲ ಒಂದು ಕಾರ್ಯಕ್ರಮವಲ್ಲ. ಇದು ಸುರಕ್ಷಿತ ನೀರು, ಸಂರಕ್ಷಣೆ ಮತ್ತು ಆರೋಗ್ಯಕರ ಸಮುದಾಯಗಳನ್ನು ಖಚಿತಪಡಿಸಿಕೊಳ್ಳಲು ಒಂದು ರಾಷ್ಟ್ರೀಯ ಪ್ರಯತ್ನವಾಗಿದೆ. ರಾಷ್ಟ್ರೀಯ ಮಟ್ಟದ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ತಳಮಟ್ಟದ ವಿಚಾರಗಳನ್ನು ಸೇರಿಸುವುದು ಮತ್ತು ದೇಶಾದ್ಯಂತ ನೀರಿನ ನಿರ್ವಹಣೆ, ನೈರ್ಮಲ್ಯ ಮತ್ತು ಸುಸ್ಥಿರ ಅಭ್ಯಾಸಗಳನ್ನು ಬಲಪಡಿಸುವುದು ಇದರ ಗುರಿಯಾಗಿದೆ.

ಜಲ ಸಂರಕ್ಷಣೆ, ಸುಸ್ಥಿರತೆ ಮತ್ತು ಸಮುದಾಯದ ಒಳಗೊಳ್ಳುವಿಕೆಗಾಗಿ ಶೃಂಗಸಭೆಯು ರಾಷ್ಟ್ರೀಯ ಕಾರ್ಯಸೂಚಿಯನ್ನು ನಿಗದಿಪಡಿಸಿದೆ. ಭಾರತವು ತ್ವರಿತ ನಗರೀಕರಣ, ಕೈಗಾರಿಕಾ ಬೆಳವಣಿಗೆ, ಬದಲಾಗುತ್ತಿರುವ ಭೂ-ಬಳಕೆ ಮಾದರಿಗಳು ಮತ್ತು ಹವಾಮಾನ ವ್ಯತ್ಯಾಸದಿಂದಾಗಿ ಸವಾಲುಗಳನ್ನು ಎದುರಿಸುತ್ತಿದೆ. ಇದಕ್ಕೆ ಪರಿಹಾರವೆಂದರೆ ಬಲವಾದ ಜಲ ಸಂರಕ್ಷಣಾ ವ್ಯವಸ್ಥೆಗಳನ್ನು ನಿರ್ಮಿಸುವುದು. ಸುಜಲಾಂ ಭಾರತ್‌ ವಿಷನ್‌ ಆರು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ.

ಶುದ್ಧ, ನೀರು-ಸುರಕ್ಷಿತ ಮತ್ತು ಸುಸ್ಥಿರ ರಾಷ್ಟ್ರದ ದೃಷ್ಟಿಕೋನದತ್ತ ವೇಗವಾಗಿ ಸಾಗಲು ಸಹಾಯ ಮಾಡುತ್ತದೆ. ನೀರಿನ ಸುರಕ್ಷತೆಯು ಕೇವಲ ಪರಿಸರ ಅಥವಾ ಆರ್ಥಿಕ ವಿಷಯವಲ್ಲ – ಇದು ಘನತೆ, ಆರೋಗ್ಯ ಮತ್ತು ಸಾಮಾಜಿಕ ಸಮಾನತೆಯ ಬಗ್ಗೆಯೂ ಇದೆ. ಸಮುದಾಯಗಳು ಶುದ್ಧ ನೀರನ್ನು ಪಡೆದಾಗ, ಅದು ಘನತೆ ಮತ್ತು ಸಬಲೀಕರಣಕ್ಕೆ ಕಾರಣವಾಗುತ್ತದೆ.ಮಳೆ ನೀರಿನ ಕೊಯ್ಲು, ದೀರ್ಘಾವಧಿ ನೀರಿನ ಭದ್ರತೆ, ನಿರ್ವಹಣೆ, ಜನರು, ಸ್ಥಳೀಯ ಆಡಳಿತ, ಉದ್ಯಮಗಳಿಗೆ ಪರಿಣಾಮಕಾರಿಯಾಗಿ ಮಳೆನೀರು ಕೊಯ್ಲು ಅಳವಡಿಸುವಂತೆ ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶಗಳಾಗಿವೆ.

ಜಲ ಸಂರಕ್ಷಣೆ ಹಾಗೂ ಮಳೆ ನೀರಿನ ಕೊಯ್ಲಿಗೆ ಆದ್ಯತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಸಂಚಯ ಜನ ಭಾಗಿದಾರಿ ಎಂಬ ವಿಶಿಷ್ಟ ಯೋಜನೆಯನ್ನು ಜಾರಿಗೊಳಿಸಿದೆ. ನೀರು ಸಂರಕ್ಷಣೆಯಲ್ಲಿ ಜನ ಭಾಗಿದಾರಿ (ಜನರ ಪಾಲ್ಗೊಳ್ಳುವಿಕೆ)ಯ ಮಹತ್ವವನ್ನು ಈ ಯೋಜನೆ ಒತ್ತಿಹೇಳುತ್ತದೆ ಮತ್ತು ಎಲ್ಲ ಪಾಲುದಾರರಿಂದ ಒಗ್ಗಟ್ಟಿನ ಕ್ರಮಕ್ಕಾಗಿ ಪ್ರತಿಜ್ಞೆಯನ್ನು ಸಾಕಾರಗೊಳಿಸುತ್ತದೆ.


ಜಲ ಸಂಚಯ ಎಂಬುದು ನೀರನ್ನು ಸಂರಕ್ಷಿಸಲು ಮತ್ತು ಅಂತರ್ಜಲವನ್ನು ಮರುಪೂರಣ ಮಾಡಲು ರಾಷ್ಟ್ರಮಟ್ಟದ, ಸಮುದಾಯ-ಚಾಲಿತ ಅಭಿಯಾನವಾಗಿದೆ. ನೀರಿಗಾಗಿ ಒಂದಾಗಿ, ಪ್ರತಿ ಹನಿಯನ್ನು ಸಂರಕ್ಷಿಸಿ ಎಂಬ ಧ್ಯೇಯವಾಕ್ಯದೊಂದಿಗೆ ಜಲ ಸಂಚಯ ಜನ ಭಾಗಿದಾರಿ 1.0 ಅಭಿಯಾನವು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು, ಮಳೆ ನೀರು ಕೊಯ್ಲು ಮಾಡುವುದು, ನೀರು ಸಂರಕ್ಷಣೆಯ ಸಂಸ್ಕೃತಿಯನ್ನು ಉತ್ತೇಜಿಸುವುದು, ಹವಾಮಾನ ಪರಿಸ್ಥಿತಿಗಳನ್ನು ಸುಧಾರಿಸುವುದು ಮತ್ತು ನೀರಿನ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
2024 ಸೆಪ್ಟೆಂಬರ್‌ 6ರಂದು ಸೂರತ್‌ನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಜಲಶಕ್ತಿ ಸಚಿವಾಲಯ (ಜಲ ಸಂಪನೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ) ಈ ಯೋಜನೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

ಇದರ ಮುಖ್ಯ ಗುರಿಗಳಲ್ಲಿ ಕೃತಕ ಅಂತರ್ಜಲ ಮರುಪೂರಣ ರಚನೆಗಳು/ಬೋರ್ವೆಲ್‌ ರೀಚಾರ್ಜ್‌ ಶಾಫ್ಟ್ ಗಳ ನಿರ್ಮಾಣಕ್ಕೆ ವಿಶೇಷ ಗಮನ ನೀಡುವುದು ಸೇರಿದೆ. ಇದು ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿ, ಅಂತರ್ಜಲ ಮರುಪೂರಣಕ್ಕೆ ಸಹಾಯ ಮಾಡುತ್ತದೆ. ದೇಶದಲ್ಲಿ ನೀರಿನ ಭದ್ರತೆ ಮತ್ತು ಸುಸ್ಥಿರತೆಯನ್ನು ಸಾಧಿಸಲು ಜಲ ಶಕ್ತಿ ಅಭಿಯಾನವನ್ನು ಜಾರಿಗೊಳಿಸಲಾಗಿದೆ.

ನೀರಿನ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ದೇಶದಲ್ಲಿ ಎದುರಾಗುವ ನೀರಿನ ಕೊರತೆಯನ್ನು ನಿವಾರಿಸುವುದು. ಮಳೆ ನೀರನ್ನು ವ್ಯರ್ಥವಾಗಿ ಹರಿಯದಂತೆ ತಡೆಯುವುದು ಹಾಗೂ ತಡೆದ ನೀರನ್ನು ಭೂಮಿಯೊಳಗೆ ಇಂಗಿಸುವುದು. ದೇಶದ ಎಲ್ಲಾ ಜಲಸಂಪನೂಲಗಳನ್ನು ಸಂರಕ್ಷಿಸುವುದು ಮತ್ತು ಅವುಗಳನ್ನು ಮರುಸ್ಥಾಪನೆ ಮಾಡುವುದುಮನೀರಿನ ಪುನರ್ಬಳಕೆ ಮತ್ತು ಮರುಬಳಕೆಗೆ ಉತ್ತೇಜನ ನೀಡುವುದು. ಅಮೃತ್‌ ಸರೋವರಗಳ ರಚನೆ ಮತ್ತು ನವೀಕರಣದ ಮೂಲಕ ನೀರಿನ ಸಂಗ್ರಹಣಾ ಸಾಮಥ್ರ್ಯವನ್ನು ಗಣನೀಯವಾಗಿ ಹೆಚ್ಚಿಸುವುದು.
ಮಳೆ ನೀರು ಕೊಯ್ಲು : ಮಳೆ ನೀರನ್ನು ಸಂಗ್ರಹಿಸುವ ಮತ್ತು ಭೂಮಿಗೆ ಇಂಗಿಸುವ ಕೊಳಗಳ ನಿರ್ಮಾಣದ ಗುರಿ ಹೊಂದಲಾಗಿದೆ.
ಚೆಕ್‌ ಡ್ಯಾಮ್‌ ಕಾಮಗಾರಿ: ಹರಿಯುವ ನೀರನ್ನು ತಡೆದು ಇಂಗಿಸಲು ಮತ್ತು ಸಂಗ್ರಹಿಸಲು ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವುದಾಗಿದೆ.
ಕೊಳವೆಬಾವಿ ಮರುಪೂರಣ: ಕೊಳವೆಬಾವಿಗಳ ಮಟ್ಟವನ್ನು ಹೆಚ್ಚಿಸಲು ಮತ್ತು ಅಂತರ್ಜಲವನ್ನು ವೃದ್ಧಿಸಲು ಈ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ,ಜಲಾನಯನ ಪ್ರದೇಶಗಳಲ್ಲಿ ಕಟ್ಟೆಗಳನ್ನು ನಿರ್ಮಿಸುವುದು. ದೇವಾಲಯದ ಕೆರೆಗಳು ಅಥವಾ ಹಳೆಯ ಕಲ್ಯಾಣಿಗಳನ್ನು ನವೀಕರಿಸುವುದು.

RELATED ARTICLES

Latest News