ಫಿರೋಜಾಬಾದ್, ಜ. 15- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಹತ್ಯೆ ಮಾಡಿ ಆಕೆಯ ದೇಹವನ್ನು ಎರಡು ತುಂಡುಗಳನ್ನಾಗಿ ವಿಂಗಡಿಸಿ ಡ್ರಮ್‌ನಲ್ಲಿ ಅಡಗಿಸಿಟ್ಟಿರುವ ಘಟನೆ ಫಿರೋಜಾಬಾದ್‌ನಲ್ಲಿ ನಡೆದಿದೆ. ಪತ್ನಿ ಲತಾದೇವಿಯನ್ನು ಹತ್ಯೆ ಮಾಡಿದ ಪಾಪಿ ಪತಿಯನ್ನು ಅಶುತೋಷ್ ಎಂದು ಗುರುತಿಸಲಾಗಿದೆ.
ಈತ ತನ್ನ ಮೂವರು ಸಹೋದರರ ಸಹಾಯದಿಂದ ತನ್ನ ಹೆಂಡತಿಯನ್ನು ಕೊಂದು, ಆಕೆಯ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ, ಬಳಿಕ ರುಂಡವನ್ನು ಡ್ರಮ್‌ನಲ್ಲಿರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕುತ್ತಿಗೆಯ ಮೇಲಿನ ಭಾಗವನ್ನು ಡ್ರಮ್‌ನೊಳಗೆ ಬಚ್ಚಿಟ್ಟು, ಮುಂಡವನ್ನು ಮನೆಯೊಳಗೆ ಹಾಸಿಗೆಯ ಮೇಲೆ ಎಸೆಯಲಾಗಿತ್ತು ಎಂದು ಆರೋಪಿಸಲಾಗಿದೆ.ಪೊಲೀಸರು ಕತ್ತರಿಸಿದ ತಲೆಯನ್ನು ಡ್ರಮ್‌ನಿಂದ ಮತ್ತು ಮುಂಡವನ್ನು ಮನೆಯೊಳಗಿನ ಹಾಸಿಗೆಯಲ್ಲಿ ವಶಪಡಿಸಿಕೊಂಡಿದ್ದಾರೆ.
ಮೃತ ಲತಾ ದೇವಿ 26 ವರ್ಷಗಳ ಹಿಂದೆ ಅಶುತೋಷ್ ಅವರನ್ನು ವಿವಾಹವಾಗಿದ್ದರು. ದಂಪತಿ ನಡುವೆ ದೀರ್ಘಕಾಲದಿಂದ ಆಸ್ತಿ ವಿವಾದವಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅಶುತೋಷ್ ಅವರ ಸಹೋದರರು ಈ ಪಿತೂರಿ ನಡೆಸಿ ಈ ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿಸಲಾಗಿದೆ.
ಅಶುತೋಷ್ ಒಬ್ಬ ಸರಳ ವ್ಯಕ್ತಿ ಆತ ಈ ಕೊಲೆ ಮಾಡಿದ್ದಾನೆಂದರೆ ನಂಬಲು ಸಾಧ್ಯವಾಗುತ್ತಿಲ್ಲ, ಆತನ ಸಹೋದರರ ಕೈವಾಡ ಇದರಲ್ಲಿದೆ, ಅವರ ಜತೆ ಸೇರಿಕೊಂಡು ಈತ ಕೂಡ ಈ ಘೋರ ಅಪರಾಧವೆಸಗಿದ್ದಾನೆ ಎಂದು ಮೃತ ಮಹಿಳೆಯ ಸಹೋದರ ತಿಳಿಸಿದ್ದಾರೆ.
ಕೊಲೆ ಮಾಡುವ ನಿರ್ಧಾರವನ್ನು ಏಕೆ ತೆಗೆದುಕೊಂಡರು ಗೊತ್ತಿಲ್ಲವೆಂದು ಮಹಿಳೆಯ ಸಹೋದರ ಸಂಜೀವ್ ದೀಕ್ಷಿತ್ ಹೇಳಿದ್ದಾರೆ.ಮಹಿಳೆಯ ಗಂಟಲು ಸೀಳಲಾಗಿದೆ, ಆ ಸಮಯದಲ್ಲಿ ಅಶುತೋಷ್ ಮತ್ತು ಅವನ ಮೂವರು ಸಹೋದರರು ಇದ್ದರು. ಅವರಲ್ಲಿ ಒಬ್ಬರು ಆಕೆಯ ಕೈಗಳನ್ನು ಹಿಡಿದು ಕುತ್ತಿಗೆ ಕತ್ತರಿಸಿ ಡ್ರಮ್‌ನಲ್ಲಿ ಹಾಕಿದ್ದಾರೆ ಎನ್ನಲಾಗಿದೆ.
