Monday, January 5, 2026
Homeರಾಷ್ಟ್ರೀಯವಿಶಾಖಪಟ್ಟಣ : ಚಲಿಸುವ ರೈಲಿನ ಮುಂದೆ ಹಾರಿ ನಿವೃತ್ತ ಯೋಧ ಆತ್ಮಹತ್ಯೆ

ವಿಶಾಖಪಟ್ಟಣ : ಚಲಿಸುವ ರೈಲಿನ ಮುಂದೆ ಹಾರಿ ನಿವೃತ್ತ ಯೋಧ ಆತ್ಮಹತ್ಯೆ

Visakhapatnam: Retired soldier commits suicide

ವಿಶಾಖಪಟ್ಟಣ, ಜ.4- ನಿವೃತ್ತ ಸೇನೆ ಯೋಧರೊಬ್ಬರು ಚಲಿಸುವ ರೈಲಿನ ಸಿಕ್ಕಿ ಆತಹತ್ಯೆ ಮಾಡಿಕೊಂಡಿರುವ ಗಟನೆ ಇಲ್ಲಿ ನಡೆದಿದೆ.ಮೃತರನ್ನು ಎನ್‌ ವೆಂಕಟರಮಣ (64)ಎಂದು ಗುರುತಿಸಿದ್ದಾರೆ, ಅವರು ಸೇನೆಯಿಂದ ನಿವೃತ್ತಿಯ ನಂತರ ವಿಶಾಖಪಟ್ಟಣ ಉಕ್ಕು ಸ್ಥಾವರ (ವಿಎಸ್‌‍ಪಿ) ಸೇವೆ ಸಲ್ಲಿಸಿದ್ದರು ಮತ್ತು ನಂತರ ಗಾಜುವಾಕದಲ್ಲಿ ಸೂಪರ್‌ ಮಾರ್ಕೆಟ್‌ ನಡೆಸುತ್ತಿದ್ದರು.

ವಾಲ್ಟೇರ್‌ ವಿಭಾಗದ ದುವ್‌ವಾಡ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಹಳಿಯ ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.ಬೆಂಗಳೂರು ಕಡೆಗೆ ಹೋಗುವ ರೈಲು ಸಮೀಪಿಸುತ್ತಿದ್ದಂತೆ ರಮಣ ಪ್ಲಾಟ್‌ಫಾರ್ಮ್‌ನ ನಿಂದ ಇಳಿದು ಹಳಿಯ ಮೇಲೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲು ಅವರ ಮೇಲೆ ಹರಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.

ಸಾಲ ಮತ್ತು ಕುಟುಂಬ ಸಂಬಂಧಿತ ಸಮಸ್ಯೆಗಳಿಂದಾಗಿ ರಮಣ ತೀವ್ರ ಆರ್ಥಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ,

ಅಧಿಕಾರಿಯ ಪ್ರಕಾರ, ರಮಣ ಅವರ ಒಬ್ಬ ಪುತ್ರಿ ಪ್ರಸ್ತುತ ಜೈಲಿನಲ್ಲಿದ್ದಾರೆ, ಆದರೆ ಇನ್ನೊಬ್ಬ ಪುತ್ರಿ ತನ್ನ ತಂದೆ ಸೂಪರ್‌ ಮಾರ್ಕೆಟ್‌ ಸ್ಥಾಪಿಸಿದಾಗಿನಿಂದ ಆರ್ಥಿಕವಾಗಿ ಹೊರೆ ಅನುಭವಿಸಿದ್ದರು ವ್ಯಾಪಾರ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News