Friday, January 2, 2026
Homeರಾಷ್ಟ್ರೀಯಅತ್ಯಾಚಾರಕ್ಕೆ ಯತ್ನಿಸಿದವನನ್ನು ಕೊಂದ ಯುವತಿ

ಅತ್ಯಾಚಾರಕ್ಕೆ ಯತ್ನಿಸಿದವನನ್ನು ಕೊಂದ ಯುವತಿ

Woman kills man who tried to rape her

ಬಂದಾ,ಜ.2- ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ವ್ಯಕ್ತಿಯನ್ನು ಹರಿತವಾದ ಆಯುಧದಿಂದ ಯುವತಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮುರ್ವಾಲ್‌ ಗ್ರಾಮದಲ್ಲಿ ನಡೆದಿದೆ.ಘಟನೆಗೆ ಸಂಭಂದಿಸಿದಂತೆ 18 ವರ್ಷದ ಯುವತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಸುಖರಾಜ್‌ ಪ್ರಜಾಪತಿ (50) ಎಂಬಾತನನ್ನು ಆಯುಧದಿಂದ ಇರಿದು ಕೊಲೆ ಮಾಡಲಾಗಿತ್ತು. ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ, ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಫರ್ಸಾ (18) ಎಂಬ ಯುವತಿಯನ್ನು ಆಯುಧದೊಂದಿಗೆ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿ ರಾಜೇಂದ್ರ ಸಿಂಗ್‌ ರಾಜವತ್‌ ಹೇಳಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಆ ವ್ಯಕ್ತಿ ತನ್ನ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾಳೆ.ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ಮನೆಯಲ್ಲಿ ಇರಿಸಲಾಗಿದ್ದ ಫರ್ಸಾದಿಂದ ಆತನಿಗೆ ಹೊಡೆದೆ ಎಂದು ಆಕೆ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ಹೇಳಿದರು. ಆರೋಪಿಯನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News