Wednesday, July 16, 2025
Homeಅಂತಾರಾಷ್ಟ್ರೀಯ | Internationalರಷ್ಯಾದೊಂದಿಗೆ ವ್ಯವಹಾರ ಮಾಡಿದರೆ ಹುಷಾರ್ : ಬ್ರೆಜಿಲ್‌, ಚೀನಾ ಮತ್ತು ಭಾರತಕ್ಕೆ ನ್ಯಾಟೋ ಎಚ್ಚರಿಕೆ

ರಷ್ಯಾದೊಂದಿಗೆ ವ್ಯವಹಾರ ಮಾಡಿದರೆ ಹುಷಾರ್ : ಬ್ರೆಜಿಲ್‌, ಚೀನಾ ಮತ್ತು ಭಾರತಕ್ಕೆ ನ್ಯಾಟೋ ಎಚ್ಚರಿಕೆ

NATO Chief Warns China, India and Brazil Over Russia Links

ನ್ಯೂಯಾರ್ಕ್‌(ಅಮೆರಿಕ),ಜು.16- ರಷ್ಯಾ ದೊಂದಿಗೆ ವ್ಯವಹಾರ ಮುಂದುವರಿಸಿದರೆ ತೀವ್ರ ಆರ್ಥಿಕ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಬ್ರೆಜಿಲ್‌, ಚೀನಾ ಮತ್ತು ಭಾರತಕ್ಕೆ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್‌ ರುಟ್ಟೆ ಅವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಉಕ್ರೇನ್‌ಗೆ ಹೊಸ ಮಿಲಿಟರಿ ಬೆಂಬಲವನ್ನು ಘೋಷಿಸಿದ ಮತ್ತು ರಷ್ಯಾ ಮತ್ತು ಅದರ ವ್ಯಾಪಾರ ಪಾಲುದಾರರ ಮೇಲೆ ವ್ಯಾಪಕ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ ಒಂದು ದಿನದ ನಂತರ ರುಟ್ಟೆ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಚೀನಾ, ಭಾರತ, ಬ್ರೆಜಿಲ್‌ ಮತ್ತು ಇತರ ದೇಶಗಳು ರಷ್ಯಾದಿಂದ ಅಗ್ಗದ ತೈಲ ಮತ್ತು ಅನಿಲವನ್ನು ಖರೀದಿಸುತ್ತಿವೆ. ಈ ದೇಶಗಳು ರಷ್ಯಾ- ಉಕ್ರೇನ್‌ ಯುದ್ಧದ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿವೆ. ರಷ್ಯಾಕ್ಕೆ ಸಹಾಯ ಮಾಡುವ ದೇಶಗಳ ಮೇಲೆ ನಾವು ಶೇಕಡಾ 500 ರಷ್ಟು ಸುಂಕಗಳನ್ನು ವಿಧಿಸಬೇಕು. ರಷ್ಯಾ-ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸಲು ಕೊನೆಯ ಅವಕಾಶವೆಂದರೆ ಚೀನಾ, ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳ ಮೇಲೆ ಸುಂಕ ವಿಧಿಸುವುದು ಎಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈ ಮೂರು ದೇಶಗಳಿಗೆ ನನ್ನ ಪ್ರೋತ್ಸಾಹ, ವಿಶೇಷವಾಗಿ ನೀವು ಈಗ ಬೀಜಿಂಗ್‌ನಲ್ಲಿ ಅಥವಾ ದೆಹಲಿಯಲ್ಲಿ ವಾಸಿಸುತ್ತಿದ್ದರೆ ಅಥವಾ ನೀವು ಬ್ರೆಜಿಲ್‌ ಅಧ್ಯಕ್ಷರಾಗಿದ್ದರೆ, ನೀವು ಇದನ್ನು ಪರಿಶೀಲಿಸಲು ಬಯಸಬಹುದು, ಏಕೆಂದರೆ ಇದು ನಿಮಗೆ ತುಂಬಾ ಪರಿಣಾಮ ಬೀರಬಹುದು. ಶಾಂತಿ ಮಾತುಕತೆಗೆ ಬದ್ಧರಾಗುವಂತೆ ಪುಟಿನ್‌ ಅವರನ್ನು ನೇರವಾಗಿ ಒತ್ತಾಯಿಸುವಂತೆ ರುಟ್ಟೆ ಮೂರು ರಾಷ್ಟ್ರಗಳ ನಾಯಕರಿಗೆ ಕರೆ ನೀಡಿದ್ದಾರೆ.

ದಯವಿಟ್ಟು ವ್ಲಾಡಿಮಿರ್‌ ಪುಟಿನ್‌ ಅವರಿಗೆ ಫೋನ್‌ ಕರೆ ಮಾಡಿ ಶಾಂತಿ ಮಾತುಕತೆಗಳ ಬಗ್ಗೆ ಅವರು ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿ, ಇಲ್ಲದಿದ್ದರೆ ಇದು ಬ್ರೆಜಿಲ್‌, ಭಾರತ ಮತ್ತು ಚೀನಾದ ಮೇಲೆ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ. ರಷ್ಯಾದ ವಾಯು ದಾಳಿಯನ್ನು ಎದುರಿಸಲು ಕೈವ್‌ ಪ್ರಮುಖವೆಂದು ಪರಿಗಣಿಸುವ ಪೇಟ್ರಿಯಾಟ್‌ ಕ್ಷಿಪಣಿ ವ್ಯವಸ್ಥೆಗಳಂತಹ ಸುಧಾರಿತ ಶಸಾ್ತ್ರಸ್ತ್ರಗಳನ್ನು ಕಳುಹಿಸುವುದು ಟ್ರಂಪ್‌ ಅವರ ಯೋಜನೆಯಲ್ಲಿ ಸೇರಿದೆ.

ಡೊನಾಲ್ಡ್ ಟ್ರಂಪ್‌ ರಷ್ಯಾದ ರಫ್ತುಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದಾರೆ ಮತ್ತು 50 ದಿನಗಳಲ್ಲಿ ಉಕ್ರೇನ್‌ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳದಿದ್ದರೆ ರಷ್ಯಾದ ತೈಲ ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುವ ಯೋಜನೆಗಳನ್ನು ಸೂಚಿಸಿದ್ದಾರೆ.50 ದಿನಗಳ ಕೊನೆಯಲ್ಲಿ ನಾವು ಒಪ್ಪಂದ ಮಾಡಿಕೊಳ್ಳದಿದ್ದರೆ, ಅದು ತುಂಬಾ ಕೆಟ್ಟದಾಗಿರುತ್ತದೆ. ಸುಂಕಗಳು ಮುಂದುವರಿಯುತ್ತವೆ ಮತ್ತು ಇತರ ನಿರ್ಬಂಧಗಳು ಮುಂದುವರಿಯುತ್ತವೆ ಎಂದು ಟ್ರಂಪ್‌ ಹೇಳಿದ್ದರು.

ಕಾಂಗ್ರೆಸ್‌‍ನಿಂದ ಹೊಸ ಅನುಮೋದನೆಯ ಅಗತ್ಯವಿಲ್ಲದೆಯೇ ದ್ವಿತೀಯ ಸುಂಕಗಳನ್ನು ಜಾರಿಗೊಳಿಸಬಹುದು. ನಾವು ದ್ವಿತೀಯಕ ಕೆಲಸಗಳನ್ನು ಮಾಡಬಹುದು. ಸೆನೆಟ್‌ ಇಲ್ಲದೆ, ಸದನವಿಲ್ಲದೆ ನಾವು ದ್ವಿತೀಯ ಸುಂಕಗಳನ್ನು ಮಾಡಬಹುದು, ಆದರೆ ಅವರು ರಚಿಸುತ್ತಿರುವುದು ಸಹ ತುಂಬಾ ಉತ್ತಮವಾಗಿರುತ್ತದೆ ಎಂದು ಟ್ರಂಪ್‌ ಈ ಹಿಂದೆ ಹೇಳಿದ್ದರು.

ಅಮೆರಿಕದ ಬಹುಪಾಲು ಸೆನೆಟರ್‌ಗಳು ಪೈಕಿ 100ರಲ್ಲಿ 85 ರಷ್ಯಾಕ್ಕೆ ಸಹಾಯ ಮಾಡುವ ರಾಷ್ಟ್ರಗಳ ಮೇಲೆ ಶೇಕಡಾ 500 ರಷ್ಟು ಸುಂಕವನ್ನು ವಿಧಿಸಲು ಟ್ರಂಪ್‌ಗೆ ಅಧಿಕಾರ ನೀಡುವ ಶಾಸನವನ್ನು ಬೆಂಬಲಿಸಿದ್ದಾರೆ. ಭಾರತ, ಚೀನಾ ಮತ್ತು ಟರ್ಕಿ ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಖರೀದಿದಾರರಲ್ಲಿ ಸೇರಿವೆ ಮತ್ತು ಟ್ರಂಪ್‌ ನಿರ್ಬಂಧಗಳನ್ನು ವಿಧಿಸಿದರೆ, ಈ ದೇಶಗಳು – ವಿಶೇಷವಾಗಿ ಭಾರತ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಜಾಗತಿಕ ಬೆಲೆಗಳು ಈಗಾಗಲೇ ಅಸ್ಥಿರವಾಗಿರುವ ಸಮಯದಲ್ಲಿ ಈ ಕ್ರಮವು ಇಂಧನ ಪೂರೈಕೆಗೆ ಅಡ್ಡಿಪಡಿಸಬಹುದು ಮತ್ತು ವೆಚ್ಚವನ್ನು ಹೆಚ್ಚಿಸಬಹುದು.

ಟ್ರಂಪ್‌ ಅವರ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ, ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆಯ್‌ ರಿಯಾಬ್ಕೋವ್‌, ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರೊಂದಿಗೆ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ, ಆದರೆ ಅಂತಿಮ ಎಚ್ಚರಿಕೆಗಳು ಸ್ವೀಕಾರಾರ್ಹವಲ್ಲ ಮತ್ತು ಯಾವುದೇ ಫಲಿತಾಂಶಗಳನ್ನು ತರುವುದಿಲ್ಲ ಎಂದು ರುಟ್ಟೆ ಹೇಳಿದ್ದಾರೆ.

ಜೈಶಂಕರ್‌ ಹೇಳಿದ್ದೇನು?:
ಇತ್ತೀಚೆಗೆ ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸುವ ಅಮೆರಿಕದ ಮಸೂದೆಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ರಾಯಭಾರ ಕಚೇರಿ ಸೆನೆಟರ್‌ ಗ್ರಹಾಂ ಅವರೊಂದಿಗೆ ಚರ್ಚೆ ನಡೆಸಿದೆ. ಇಂಧನ ಮತ್ತು ಭದ್ರತೆಯ ಬಗ್ಗೆ ಭಾರತದ ಬದ್ಧತೆ ಮತ್ತು ಹಿತಾಸಕ್ತಿಗಳನ್ನು ವಿವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಸೆನೆಟರ್‌ ಲಿಂಡ್ಸೆ ಗ್ರಹಾಂ ಅವರು ಮಂಡಿಸಿದ ಮಸೂದೆಯು ಭಾರತದ ಹಿತಾಸಕ್ತಿಗಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುತ್ತದೆಯೇ ಎಂದು ನಾವು ಪರಿಶೀಲಿಸುತ್ತೇವೆ. ಸೆನೆಟರ್‌ ಜೊತೆಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಜೈಶಂಕರ್‌ ತಿಳಿಸಿದ್ದಾರೆ.

RELATED ARTICLES

Latest News