Monday, October 28, 2024
Homeರಾಷ್ಟ್ರೀಯ | Nationalಶ್ರೀನಗರ ವಿಮಾನ ನಿಲ್ದಾಣದಲ್ಲಿ ಶಾಸಕನ ಬ್ಯಾಗ್‌ನಲ್ಲಿ ಶಸ್ತ್ರಾಸ್ತ್ರ ಪತ್ತೆ

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶಾಸಕನ ಬ್ಯಾಗ್‌ನಲ್ಲಿ ಶಸ್ತ್ರಾಸ್ತ್ರ ಪತ್ತೆ

NC MLA detained, released after he shows license of pistol at Srinagar Airport

ಶ್ರೀನಗರ, ಅ.28-ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಡಳಿತಾರೂಢ ನ್ಯಾಷನಲ್‌ ಕಾನ್ಫರೆನ್ಸ್ ನ ಶಾಸಕ ಬಶೀರ್‌ ಅಹದ್‌ ವೀರಿ ಅವರ ಬ್ಯಾಗ್‌ನಲ್ಲಿ ಮದ್ದುಗುಂಡು, ಪರವಾನಗಿ ಪಡೆದ ಶಸ್ತ್ರಾಸ್ತ್ರಗಳು ಪತ್ತೆಯಾಗಿದೆ.

ಇಂಡಿಗೋ ವಿಮಾನದಲ್ಲಿ ಜಮುಗೆ ಪ್ರಯಾಣಿಸುತ್ತಿದ್ದ ಶಾಸಕನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.ನನ್ನ ಬಳಿ ಪರವಾನಗಿ ಪಡೆದ ಆಯುಧವಿದೆ. ತಪ್ಪಾಗಿ ಸಾಮಾನು ಸರಂಜಾಮುಗಳಲ್ಲಿ ಕಾರ್ಟ್ರಿಡ್ಜ್ ಗಳು ಇವೆ ಎಂದು ವೀರಿ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ.

ಆದಾಗ್ಯೂ, ಇನ್ನೊಂದು ಮೂಲಗಳ ಪ್ರಕಾರ ಶ್ರೀಗುಫ್ವಾರಾ-ಬಿಜ್ಬೆಹರಾ ಕ್ಷೇತ್ರದ ಶಾಸಕರನ್ನು ಬಂಧಿಸಲಾಗಿಲ್ಲ ಮತ್ತು ವಿಮಾನ ನಿಲ್ದಾಣದ ಭದ್ರತೆ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು ಮಾತ್ರ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.

ಯಾವುದೇ ಬಂಧನವಿಲ್ಲ, ನಾನು ಅಲ್ಲಿ ಸೌಹಾರ್ದಯುತವಾಗಿ ಕುಳಿತಿದ್ದೆ ಎಂದು ವೀರಿ ಹೇಳಿದ್ದು,ಘಟನೆಯಿಂದಾಗಿ ಜಮುವಿಗೆ ತೆರಳುವ ವಿಮಾನವನ್ನು ಕಳೆದುಕೊಂಡಿದ್ದು, ಈಗ ರಸ್ತೆ ಮೂಲಕ ಪ್ರಯಾಣಿಸುವುದಾಗಿ ವೀರಿ ಹೇಳಿದ್ದಾರೆ.

RELATED ARTICLES

Latest News