ನವದೆಹಲಿ, ಏ.2- ವಕ್ಫ್ ತಿದ್ದುಪಡಿ ಮಸೂದೆ ಪಾಸ್ ಮಾಡಿಕೊಳ್ಳುವಷ್ಟು ಬಹುಮತ ಎನ್‌ಡಿಎ ಹೊಂದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮಸೂದೆ ಅಂಗೀಕಾರಕ್ಕೆ 272 ಮತಗಳ ಅವಶ್ಯಕತೆ ಇದ್ದು, ಈಗಾಗಲೇ ಎನ್‌ಡಿಎಯ 296 ಸಂಸದರು ವಕ್ಷೆ ತಿದ್ದುಪಡಿ ಪರ ಒಲವು ತೋರಿದ್ದಾರೆ ಎನ್ನಲಾಗಿದೆ.
ಪಕ್ಷವಾರು ವಿಂಗಡಣೆ ಇಲ್ಲಿದೆ:
ಭಾರತೀಯ ಜನತಾ ಪಕ್ಷ (ಬಿಜೆಪಿ) 240 ಸಂಸದರು,ತೆಲುಗು ದೇಶಂ ಪಕ್ಷ (ಟಿಡಿಪಿ 16 ಸಂಸದರು, ಜೆಡಿಯು 12 ಸಂಸದರು, ಶಿವಸೇನೆ (ಶಿಂಧೆ ಬಣ) 7 ಸಂಸದರು, ಲೋಕ ಜನಶಕ್ತಿ ಪಕ್ಷ (ಎಲ್ವೆಪಿ) 5 ಸಂಸದರು, ರಾಷ್ಟ್ರೀಯ ಲೋಕ ದಳದ ಇಬ್ಬರು ಸಂಸದರು, ಜನಸೇನಾ ಪಕ್ಷದ ಇಬ್ಬರು, ಜೆಡಿಎಸ್‌ನ 2 ಸಂಸದರು, ಯುನೈಟೆಡ್ ಪೀಪಲ್ ಪಾರ್ಟಿ ಲಿಬರಲ್ (ಯುಪಿಪಿಎಲ್)ನ ಒಬ್ಬರು, ಅಸ್ಸಾಂ ಜಾತೀಯ ಪರಿಷತ್ (ಎಜೆಪಿ)ನ ಓರ್ವ, ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ (ಮೇಘಾಲಯ), ಅಪ್ಪಾ ದಳ, ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್.ಎಎಂ), ಆಲ್ ಜಾರ್ಖಂಡ್ ಸ್ಪೂಡೆಂಟ್ಸ್ ಯೂನಿಯನ್, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಸಿಪಿ), ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಹಾಗೂ ರಾಂ ಪೀಪಲ್ಸ್ ಮೂಡ್ಮಿಂಟ್ ಓರ್ವ ಸದಸ್ಯರು ಎನ್‌ಡಿಎ ಪರ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.