Friday, November 22, 2024
Homeರಾಷ್ಟ್ರೀಯ | Nationalಕೇಂದ್ರದಲ್ಲಿ ಮೋದಿ ಹ್ಯಾಟ್ರಿಕ್ ಸರ್ಕಾರ ಗ್ಯಾರಂಟಿ : ಸಮೀಕ್ಷೆ

ಕೇಂದ್ರದಲ್ಲಿ ಮೋದಿ ಹ್ಯಾಟ್ರಿಕ್ ಸರ್ಕಾರ ಗ್ಯಾರಂಟಿ : ಸಮೀಕ್ಷೆ

ನವದೆಹಲಿ,ಡಿ.15- ಇತ್ತೀಚಿನ ಟೈಮ್ಸ್ ನೌ-ಇಟಿಜಿ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿ ಸರ್ಕಾರವು ಮೂರನೇ ಬಾರಿಗೆ ಕೇಂದ್ರದಲ್ಲಿ ಅಕಾರದ ಗದ್ದುಗೆ ಏರಲಿದ್ದು, ಐತಿಹಾಸಿಕ ಸಾಧನೆ ಮೆರೆಯಲಿದೆ. ಸಮೀಕ್ಷೆಯು 2024ರ ಲೋಕಸಭೆ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟವು 323 ಸ್ಥಾನಗಳಲ್ಲಿ ಗೆಲುವು ಸಾಸುವ ಮೂಲಕ ಭರ್ಜರಿ ಬಹುಮತ ಗಳಿಸಲಿದ್ದು, ಮೂರನೇ ಅವಗೆ ಕೇಂದ್ರದಲ್ಲಿ ಅಕಾರ ಹಿಡಿಯಲಿದೆ ಎಂದು ಹೇಳಿದೆ. ಇದೇ ವೇಳೆ ಎನ್‍ಡಿಎ ನಾಗಾಲೋಟಕ್ಕೆ ಅಡ್ಡಗಾಲು ಹಾಕುವ ತುಡಿತಲ್ಲಿರುವ ಇಂಡಿಯಾ ಮೈತ್ರಿಕೂಟವು ಕೇವಲ 163 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಹೀನಾಯ ಸೋಲು ಕಾಣಲಿದೆ ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.

ಇಟಿಜಿ ಸಮೀಕ್ಷೆಯು ಬಿಜೆಪಿ ಏಕಾಂಗಿಯಾಗಿ ಸುಮಾರು 308-328 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿದೆ. ಆದರೆ, ಕಾಂಗ್ರೆಸ್ ಮೂರನೇ ಬಾರಿಗೆ ಹೀನಾಯ ಪ್ರದರ್ಶನ ತೋರಲಿದ್ದು ಕೇವಲ 52-72 ಸ್ಥಾನ ಗಳಿಸಬಹುದು ಎಂದು ತಿಳಿಸಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಸವಾಲೆಸೆಯುವ ಪ್ರಯತ್ನವಾಗಿ 18 ಪಕ್ಷಗಳು ಇಂಡಿಯಾ ಒಕ್ಕೂಟವನ್ನು ರಚಿಸಿಕೊಂಡಿದ್ದರೂ, 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ ಎಂಬುದನ್ನು ಸಮೀಕ್ಷೆಯು ಹೇಳುತ್ತಿದೆ.

ಬಿಜೆಪಿ ಸೀಟು ಗಳಿಕೆ ಇಳಿಕೆ :
2019ಕ್ಕೆ ಹೋಲಿಸಿದರೆ ಎನ್‍ಡಿಎ ಮತ್ತು ಬಿಜೆಪಿಯ ಸ್ಥಾನಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು ಎಂದು ಸಮೀಕ್ಷೆಯು ಸೂಚಿಸಿದೆ. 2019ರಲ್ಲಿ, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಮೈತ್ರಿಕೂಟವು (ಎನ್‍ಡಿಎ) 353 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಶೇ. 37.76ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಒಟ್ಟಾರೆ ಎನ್‍ಡಿಎಯ ಮತ ಗಳಿಕೆಯು ಶೇ.45ರಷ್ಟಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-12-2023)

ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಿಂದಿ ಬೆಲ್ಟ್‍ನಲ್ಲಿ ಬಿಜೆಪಿ ಪ್ರಾಬಲ್ಯ ಸಾಸಿದೆ. ಇದು 2024ರಲ್ಲಿಯೂ ಮುಂದುವರಿಯುವ ನಿರೀಕ್ಷೆಯಿದೆ. ವಿಶೇಷವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳು ಬಿಜೆಪಿಯ ಚುನಾವಣಾ ಬಲಕ್ಕೆ ಗಣನೀಯ ಕೊಡುಗೆ ನೀಡಲಿವೆ.

ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಬಿಜೆಪಿ: 308-328
ಎನ್ಡಿಎ: 319-339
ಕಾಂಗ್ರೆಸ್: 52-72
ಬಿಜೆಡಿ: 13-15
ವೈಎಸ್‍ಆರ್ ಕಾಂಗ್ರೆಸ್: 24-25
ಟಿಎಂಸಿ: 20-24
ಡಿಎಂಕೆ: 20-24
ಎಎಪಿ: 4-7
ಬಿಆರ್‍ಎಸ್: 3-5
ಇತರರು: 66-76

ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಮಹಾರಾಷ್ಟ್ರ
ಬಿಜೆಪಿ: 27-31 (48%)
ಕಾಂಗ್ರೆಸ್: 16-20 (41%)

ಕರ್ನಾಟಕ
ಬಿಜೆಪಿ: 20-22
ಕಾಂಗ್ರೆಸ್: 6-8
ಜೆಡಿಎಸ್: 0

ತಮಿಳುನಾಡು
ಡಿಎಂಕೆ: 20-24
ಕಾಂಗ್ರೆಸ್: 10-12
ಎಐಎಡಿಎಂಕೆ: 3-5

ತೆಲಂಗಾಣ
ಬಿಜೆಪಿ: 3-5
ಕಾಂಗ್ರೆಸ್: 8-10
ಬಿಆರ್‍ಎಸ್: 3-5

ಆಂಧ್ರ ಪ್ರದೇಶ
ವೈಎಸ್‍ಆರ್ ಕಾಂಗ್ರೆಸ್: 24-25
ಟಿಡಿಪಿ: 0-1

ಪಶ್ಚಿಮ ಬಂಗಾಳ
ಬಿಜೆಪಿ: 17-19
ಟಿಎಂಸಿ: 20-24
ಸಿಪಿಐಎಂ: 1-2
ಕಾಂಗ್ರೆಸ್: 1-2

ಪಂಜಾಬ್
ಎನ್‍ಡಿಎ: 3-6
ಇಂಡಿಯಾ: 6-10
ಶಿರೋಮಣಿ ಅಕಾಲಿದಳ: 1-2

ಗುಜರಾತ್
ಎನ್‍ಡಿಎ: 26
ಇಂಡಿಯಾ:0

ರಾಜಸ್ಥಾನ
ಎನ್‍ಡಿಎ: 24-25
ಇಂಡಿಯಾ: 0-1
ಛತ್ತೀಸ್ಗಢ
ಎನ್‍ಡಿಎ: 10-11
ಇಂಡಿಯಾ: 0-1

ಕೇರಳ
ಬಿಜೆಪಿ: 0-1
ಕಾಂಗ್ರೆಸ್: 11-13
ಸಿಪಿಎಂ: 3-5
ಐಯುಎಂಎಲï: 1-2

ಉತ್ತರ ಪ್ರದೇಶ
ಎನ್‍ಡಿಎ: 70-74
ಇಂಡಿಯಾ: 4-8
ಬಿಎಸ್‍ಪಿ: 0-1
ಇತರ: 1-3.

RELATED ARTICLES

Latest News