Thursday, August 21, 2025
Homeರಾಜ್ಯಮಾಜಿ ಪ್ರಧಾನಿ ಹೆಚ್‌ಡಿಡಿ ನಿವಾಸಕ್ಕೆ ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್‌ ಭೇಟಿ

ಮಾಜಿ ಪ್ರಧಾನಿ ಹೆಚ್‌ಡಿಡಿ ನಿವಾಸಕ್ಕೆ ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್‌ ಭೇಟಿ

NDA Vice Presidential Candidate Radhakrishnan Visits Former Prime Minister HD Deve Gowda's Residence

ನವದೆಹಲಿ,ಆ.21– ಎನ್‌ಡಿಎ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್‌ ಅವರು ಮಾಜಿ ಪ್ರಧಾನಮಂತ್ರಿ ಹೆಚ್‌.ಡಿ.ದೇವೇಗೌಡ ಅವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದರು.

ಮಾಜಿ ಪ್ರಧಾನಿಗಳ ನಿವಾಸಕ್ಕೆ ಆಗಮಿಸಿದ ರಾಧಾಕೃಷ್ಣನ್‌ ಅವರನ್ನು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆಗಳ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಗೌರವಪೂರ್ವಕವಾಗಿ ಬರಮಾಡಿಕೊಂಡರು.

ತಮ ಹಾಗೂ ಪ್ರಧಾನಿಗಳ ನಡುವಿನ ಬಾಂಧವ್ಯವನ್ನು ಸರಿಸಿದ ರಾಧಾಕೃಷ್ಣನ್‌ ಅವರು, ಎನ್‌ಡಿಎ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ಆಗಿರುವ ತಮಗೆ ಬೆಂಬಲ ನೀಡಿದ್ದಾಗಿ ಅಭ್ಯರ್ಥಿಯಾಗಿ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದರಾದ ಮಲ್ಲೇಶ್‌ ಬಾಬು ಮತ್ತು ಡಾ. ಸಿ.ಎನ್‌.ಮಂಜುನಾಥ್‌, ಜೆಡಿಎಸ್‌‍ ಪಕ್ಷದ ಹಿರಿಯ ನಾಯಕ ವೆಂಕಟರಾವ್‌ ನಾಡಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿನೋದ್‌ ತಾವಡೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.ಈ ವೇಳೆ ಮಾಜಿ ಪ್ರಧಾನಿಗಳು ಹಾಗೂ ಕೇಂದ್ರ ಸಚಿವರು ಸಿ.ಪಿ.ರಾಧಾಕೃಷ್ಣನ್‌ ಅವರಿಗೆ ಶುಭ ಹಾರೈಸಿದರು.

RELATED ARTICLES

Latest News