Thursday, July 4, 2024
Homeಬೆಂಗಳೂರುಡೆಂಘೀ ನಿಯಂತ್ರಣಕ್ಕೆ ಅಗತ್ಯ ಕ್ರಮ : ತುಷಾರ್ ಗಿರಿನಾಥ್

ಡೆಂಘೀ ನಿಯಂತ್ರಣಕ್ಕೆ ಅಗತ್ಯ ಕ್ರಮ : ತುಷಾರ್ ಗಿರಿನಾಥ್

ಬೆಂಗಳೂರು,ಜು.2- ನಗರದಲ್ಲಿ ಉಲ್ಬಣಿಸಿರುವ ಡೆಂಘೀ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದರು. ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಘೀ ಉಲ್ಬಣ ಕುರಿತಂತೆ ಚರ್ಚಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಂಜೆ ಸಭೆ ಕರೆದಿದ್ದಾರೆ. ಸಭೆಯಲ್ಲಿ ಪಾಲ್ಗೊಂಡು ಅವರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಲಾಗುವುದು ಎಂದರು.

ನಗರದಲ್ಲಿ ಹೆಚ್ಚಿರುವ ಸೋಂಕಿತರ ಅಂಕಿ ಅಂಶಗಳೊಂದಿಗೆ ಸಭೆಗೆ ಹಾಜರಾಗುತ್ತಿದ್ದೇನೆ ಹಾಗೂ ಸೋಂಕು ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವಿವರ ನೀಡುವುದಾಗಿ ಅವರು ಹೇಳಿದರು. ಸೋಂಕು ನಿವಾರಣೆ ಕುರಿತಂತೆ ಆರೋಗ್ಯ ಇಲಾಖೆಯೊಂದಿಗೆ ನಾವು ಸತತ ಸಂಪರ್ಕದಲ್ಲಿದ್ದೇವೆ ಅವರ ನೆರವಿನೊಂದಿಗೆ ಸೋಂಕು ನಿವಾರಣೆ ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರತಿ ವರ್ಷ ಜೂನ್ ನಿಂದ ಆಗಸ್ಟ್ ಸೆಪ್ಟೆಂಬರ್ ವರೆಗೆ ಡೆಂಘೀ ಪ್ರಕರಣಗಳು ದಾಖಲಾಗುತ್ತೆ ಅದು ಪೀಕ್ ಆಗೋದು ಸೆಪ್ಟೆಂಬರ್ ನಲ್ಲಿ ಆದ್ರೇ ಈ ಬಾರಿ ಜೂನ್ ನಲ್ಲೇ ಪೀಕ್ ಗೆ ಹೋಗಿದೆ ಇದರಿಂದ ಸಮಸ್ಯೆ ಉಲ್ಬಣಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ ವರ್ಷ ಜೂನ್ ನಲ್ಲಿ ಕೇವಲ 750 ಪ್ರಕರಣಗಳು ದಾಖಲಾಗಿದ್ದವು ಆದರೆ, ಈ ಬಾರಿ ಅದರ ಸಂಖ್ಯೆ ಎರಡು ಸಾವಿರ ದಾಟಿದೆ ಹಾಗಾಗಿ ನಾವು ತಂಡಗಳನ್ನು ರಚನೆ ಮಾಡಿ ಜನರನ್ನು ಜಾಗತಿಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಕ್ಯಾಂಪೇನಿಂಗ್ ನಡೆಸಲಾಗುತ್ತಿದೆ, ಮನೆ ಮನೆಗೆ ತೆರಳಿ ಕರಪತ್ರ ಹಂಚಿ ತಿಳುವಳಿಕೆ ನೀಡುತ್ತಿದ್ದೇವೆ.ಬಸ್ ಸ್ಟ್ಯಾಂಡ್ ಜಾಹೀರಾತುಗಳನ್ನು ಹಾಕಲಿದ್ದೇವೆ ಎಂದು ಅವರು ತಿಳಿಸಿದರು.

ಫ್ರೆಶ್ ವಾಟರ್ ನಲ್ಲಿ ಉತ್ಪತಿಯಾಗುವ ಸೊಳ್ಳೆಗಳಿಂದ ಡೆಂಘೀ ಸೋಂಕು ಬರುತ್ತೆ ಬಿಬಿಎಂಪಿ ಯಲ್ಲಿ ಆರು ಸಾವಿರ ಟೆಸ್ಟಿಂಗ್ ಕಿಟ್ ಇದೆ ಆದರೂ ಶೇ.95ರಷ್ಟು ಕೇಸ್ ಗಳು ಖಾಸಗಿಯಲ್ಲಿ ರಿಪೋರ್ಟಿಂಗ್ ಆಗ್ತಾ ಇದೆ ಎಂದು ಅವರು ಹೇಳಿದರು.

ಬಿಬಿಎಂಪಿ ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳು ಅತೀ ಹೆಚ್ಚು ಜ್ವರ ಇರುವ ರೋಗಿಗಳಿಗೆ ಡೆಂಘೀ ಟೆಸ್ಟ್ ಮಾಡಲು ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.ಸೋಂಕು ತಗುಲಿದ ವ್ಯಕ್ತಿಯಲ್ಲಿ ಬಿಳಿ ರಕ್ತಕಣಗಳು 20 ಸಾವಿರಕ್ಕಿಂತ ಕಡಿಮೆ ಆದರೆ, ಅಂತಹ ವ್ಯಕ್ತಿಗೆ ಬ್ಲಡ್ ಡೊನೆಟ್ ಅವಶ್ಯಕತೆ ಇದೆ ಉಳಿದಂತೆ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತೆ ಎಂದು ಅವರು ಮಾಹಿತಿ ನೀಡಿದರು.

RELATED ARTICLES

Latest News