Friday, November 22, 2024
Homeಕ್ರೀಡಾ ಸುದ್ದಿ | Sportsಬೆಳ್ಳಿ ಪದಕ ವಿಜೇತ ನೀರಜ್‌ ಚೋಪ್ರಾಗೆ ಅಭಿನಂದನೆಗಳ ಮಹಾಪೂರಾ

ಬೆಳ್ಳಿ ಪದಕ ವಿಜೇತ ನೀರಜ್‌ ಚೋಪ್ರಾಗೆ ಅಭಿನಂದನೆಗಳ ಮಹಾಪೂರಾ

ನವದೆಹಲಿ, ಆ. 9 (ಪಿಟಿಐ) ಪ್ಯಾರಿಸ್‌‍ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ನೀರಜ್‌ ಚೋಪ್ರಾ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಡಿನ ಹಲವಾರು ಗಣ್ಯರು ಚೋಪ್ರಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪ್ಯಾರಿಸ್‌‍ ಕ್ರೀಡಾಕೂಟದಲ್ಲಿ ನೀರಜ್‌ ಚೋಪ್ರಾ ಅವರು ಜಾವೇಲಿನ್‌ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದಿರುವುದು ಭವಿಷ್ಯದ ಪೀಳಿಗೆಗೆ ಉತ್ಕೃಷ್ಟತೆಯ ಅನ್ವೇಷಣೆಯಲ್ಲಿ ಪ್ರೇರೇಪಿಸುವ ಸಾಧನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

ನೀರಜ್‌ ಚೋಪ್ರಾ ಒಬ್ಬ ಶ್ರೇಷ್ಠ ವ್ಯಕ್ತಿ! ಪದೇ ಪದೇ ಅವರು ತಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಅವರು ಮತ್ತೊಂದು ಒಲಿಂಪಿಕ್‌ ಯಶಸ್ಸಿನೊಂದಿಗೆ ಹಿಂತಿರುಗಿದ್ದಾರೆ ಎಂದು ಭಾರತವು ಉತ್ಸುಕವಾಗಿದೆ. ಬೆಳ್ಳಿ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಬರೆದಿದ್ದಾರೆ.

ಅವರು ಲೆಕ್ಕವಿಲ್ಲದಷ್ಟು ಜನರನ್ನು ಪ್ರೇರೇಪಿಸುತ್ತಾರೆ. ಮುಂಬರುವ ಅಥ್ಲೀಟ್‌ಗಳು ತಮ ಕನಸುಗಳನ್ನು ನನಸಾಗಿಸಲು ಮತ್ತು ನಮ ರಾಷ್ಟ್ರವನ್ನು ಹೆಮೆ ಪಡುವಂತೆ ಮಾಡಿದ್ದಾರೆ ಎಂದಿದ್ದಾರೆ.ಚೋಪ್ರಾ ಅವರಿಂದ ಇನ್ನು ಹೆಚ್ಚಿನ ಪದಕಗಳನ್ನು ದೇಶವು ಎದುರು ನೋಡುತ್ತದೆ ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ.

ಪ್ಯಾರಿಸ್‌‍ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಕ್ಕಾಗಿ ನೀರಜ್‌ ಚೋಪ್ರಾ ಅವರಿಗೆ ಹತ್ಪೂರ್ವಕ ಅಭಿನಂದನೆಗಳು. ಅವರು ಸತತ ಎರಡು ಒಲಿಂಪಿಕ್‌ ಕ್ರೀಡಾಕೂಟಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಕವನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್‌ ಆಗಿರುವುದು ದೇಶ ಹೆಮೆಪಡುವಂತಹ ವಿಚಾರ ಎಂದು ಮುರ್ಮು ಹೇಳಿದ್ದಾರೆ.

ಅದೇ ರೀತಿ ಕ್ರೀಡಾ ಸಚಿವ ಮನ್ಸುಖ್‌ ಮಾಂಡವಿಯಾ, ಮಾಜಿ ಕ್ರಿಕೆಟಿಗ ವಿವಿಎಸ್‌‍ ಲಕ್ಷ್ಮಣ್‌ ಸೇರಿದಂತೆ ಹಲವಾರು ಗಣ್ಯರುಗಳು ನೀರಜ್‌ ಅವರ ಸಾಧನೆಯ ಗುಣಗಾನ ಮಾಡಿದ್ದಾರೆ.

RELATED ARTICLES

Latest News