Tuesday, September 17, 2024
Homeಕ್ರೀಡಾ ಸುದ್ದಿ | Sportsಪಾಕಿಸ್ತಾನದ ನದೀಮ್‌ ಕೂಡ ನನ್ನ ಮಗನಿದ್ದಂತೆ : ಚೋಪ್ರಾ ತಾಯಿ

ಪಾಕಿಸ್ತಾನದ ನದೀಮ್‌ ಕೂಡ ನನ್ನ ಮಗನಿದ್ದಂತೆ : ಚೋಪ್ರಾ ತಾಯಿ

ನವದೆಹಲಿ, ಆ.9 (ಪಿಟಿಐ)– ತನ್ನ ಮಗನ ಬೆಳ್ಳಿ ಪದಕಕ್ಕೆ ಹರ್ಷ ವ್ಯಕ್ತಪಡಿಸಿರುವ ನೀರಜ್ ಚೋಪ್ರಾ ಅವರ ತಾಯಿ ಸರೋಜ ದೇವಿ ಅವರು ಪ್ಯಾರಿಸ್ನಲ್ಲಿ ಭಾರತದ ಹಾಲಿ ಚಾಂಪಿಯನ್ನನ್ನು ಸೋಲಿಸಿ ಚಿನ್ನ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ನನ್ನ ಮಗನಿದ್ದಂತೆ ಎಂದು ಬಣ್ಣಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಎಷ್ಟೇ ದ್ವೇಷವಿದ್ದರೂ ಉಭಯ ರಾಷ್ಟ್ರಗಳಲ್ಲಿ ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರಿರುವುದು ಅಷ್ಟೆ ಸತ್ಯ ಇದಕ್ಕೆ ಸಾಕ್ಷಿ ಎಂಬಂತೆ ನದೀಮ್ ಮತ್ತು ಚೋಪ್ರಾ ಅತ್ಯುತ್ತಮ ಸ್ನೇಹಿತರಾಗಿರುವುದು.

ನದೀಮ್ 92.97 ಮೀಟರ್ ದೂರ ಜಾವೇಲಿನ್ ಎಸೆದು ಚಿನ್ನ ಗೆದ್ದರೆ ನಂತರ ಚೋಪ್ರಾ 89.45 ಮೀ ಎಸೆಯುವ ಮೂಲಕ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ನಾವು ಬೆಳ್ಳಿಯಿಂದ ತುಂಬಾ ಸಂತೋಷವಾಗಿದ್ದೇವೆ, ಚಿನ್ನ ಗೆದ್ದವರು ನಮ್ಮ ಮಗು ಮತ್ತು ಬೆಳ್ಳಿ ಗೆದ್ದವರು ಕೂಡ ನಮ್ಮ ಮಗು ಎಲ್ಲರೂ ಕ್ರೀಡಾಪಟುಗಳು, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂದು ಸರೋಜದೇವಿ ಅವರು ಪಾಣಿಪತ್ನ ಖಂಡ್ರಾದಲ್ಲಿ ಪಿಟಿಐಗೆ ತಿಳಿಸಿದ್ದಾರೆ.

ನದೀಮ್ ಕೂಡ ಒಳ್ಳೆಯವನು, ಅವನು ಚೆನ್ನಾಗಿ ಆಡುತ್ತಾನೆ, ನೀರಜ್ ಮತ್ತು ನದೀಮ್ ನಡುವೆ ಯಾವುದೇ ವ್ಯತ್ಯಾಸವಿಲ್ಲ, ನಾವು ಚಿನ್ನ ಮತ್ತು ಬೆಳ್ಳಿಯನ್ನು ಪಡೆದುಕೊಂಡಿದ್ದೇವೆ, ನಮಗೆ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ.

RELATED ARTICLES

Latest News