ನವದೆಹಲಿ,ಜು.1- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ್ದ ನೀಟ್- ಯುಜಿ 2024ರ ಮರು ಪರೀಕ್ಷೆಯ ನಂತರ ಪರಿಷ್ಕೃತ ಫಲಿತಾಂಶ ಪ್ರಕಟಗೊಂಡಿದೆ.ಮೇ 5ರಂದು ನಡೆದ ಪ್ರಮುಖ ವಿಷಯಗಳ ಪರೀಕ್ಷೆಯಲ್ಲಿ 1563 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಜೂನ್ 28ರಂದು ನಡೆದ ಮರು ಪರೀಕ್ಷೆಯಲ್ಲಿ 813 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದು, ಶೇ.47ರಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ನೀಟ್-ಯುಜಿ ಮರು ಪರೀಕ್ಷೆಯ ಕೀ ಉತ್ತರಗಳು, ಓಎಂಆರ್ ಶೀಟ್ ಸ್ಕ್ಯಾನಿಂಗ್ ಪ್ರಕಟಿಸುವ ಮೂಲಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇಂದು (ಜುಲೈ 1) ಪರಿಷ್ಕೃತ ಫಲಿತಾಂಶ ಪ್ರಕಟಿಸಿದೆ.ಪರೀಕ್ಷೆ ಬರೆದಿದ್ದ ಎಲ್ಲಾ ಅಭ್ಯರ್ಥಿಗಳ ರ್ಯಾಂಕಿಂಗ್ ಬದಲಾಗಿದೆ. ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.
ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ಮೂಲಕ ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗಿತ್ತು. ಅಲ್ಲದೇ ಆಂಧ್ರಪ್ರದೇಶ ಮುಂತಾದ ದಕ್ಷಿಣ ಭಾರತದ ರಾಜ್ಯಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರಿಂದ ಅಕ್ರಮ ನಡೆದಿದೆ ಎನ್ನಲಾದ ಕೇಂದ್ರಗಳಲ್ಲಿ ನೀಟ್ ಮರು ಪರೀಕ್ಷೆಯನ್ನು ನಡೆಸಲಾಗಿತ್ತು.