Saturday, September 6, 2025
Homeಅಂತಾರಾಷ್ಟ್ರೀಯ | Internationalನೇಪಾಳ : 26 ಸಾಮಾಜಿಕ ಜಾಲತಾಣ ಮಾಧ್ಯಮಗಳಿಗೆ ನಿಷೇಧ

ನೇಪಾಳ : 26 ಸಾಮಾಜಿಕ ಜಾಲತಾಣ ಮಾಧ್ಯಮಗಳಿಗೆ ನಿಷೇಧ

Nepal bans Facebook, Twitter, WhatsApp and 23 other social media platforms,

ಕಠಂಡು,ಸೆ.5 – ನೇಪಾಳದಲ್ಲಿ ಫೇಸ್ಬುಕ್‌, ಎಕ್ಸ್ , ಯೂಟ್ಯೂಬ್‌ ಸೇರಿದಂತೆ 26 ಸಾಮಾಜಿಕ ಜಾಲತಾಣದ ಮಾಧ್ಯಮಗಳಿಗೆ ನಿಷೇಧ ಮಾಡಲಾಗಿದೆ. ನೇಪಾಳದಲ್ಲಿ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ.

ಸ್ಥಳೀಯ ಮಟ್ಟದಲ್ಲಿ ನೋಂದಣಿಯಾಗಿರಲಿಲ್ಲ. ಜಾಹೀರಾತುಗಳ ಮೇಲೆ ಸರ್ಕಾರದ ನಿಯಂತ್ರಣ ಇರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಸ್ಥಳೀಯ ನೋಂದಣಿವರೆಗೂ ಬಳಕೆಗೆ ತಡೆ ಹಾಕುವಂತೆ ಕೋರ್ಟ್‌ ಸೂಚಿಸಿತ್ತು.

ಇದರ ಬೆನ್ನಲ್ಲೇ ಸರ್ಕಾರದಿಂದ ದೂರಸಂಪರ್ಕ ಪ್ರಾಧಿಕಾರಕ್ಕೆ ಪತ್ರ ರವಾನೆಯಾಗಿದೆ. ಈ ಪ್ಲಾಟ್‌‍ಫಾರ್ಮ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಸರ್ಕಾರ ನಿರ್ದೇಶಿಸಿದೆ.

RELATED ARTICLES

Latest News