ಕಠಂಡು, ಜ.23-ನೇಪಾಳ ಸರ್ಕಾರ ಮೌಂಟ್ ಎವರೆಸ್ಟ್ ಶಿಖರವನ್ನು ಏರಲು ಪರವಾನಗಿ ಶುಲ್ಕವನ್ನು ಶೇಕಡಾ 36 ರಷ್ಟು ಹೆಚ್ಚಿಸಿದೆ.ವಿಶ್ವದ ಅತಿ ಎತ್ತರದ ಶಿಖರದಲ್ಲಿ ಕಸ ಮಾಲಿನ್ಯವನ್ನು ನಿಯಂತ್ರಿಸುವ ಗುರಿಯಡಿ ಹಲವಾರು ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದ್ದು ,ಪ್ರಸ್ತುತ ಪರಿಷ್ಕೃತ ಪರ್ವತಾರೋಹಣ ನಿಯಮಗಳ ಅಡಿಯಲ್ಲಿ, ವಸಂತ ಋತುವಿನಲ್ಲಿ (ಮಾರ್ಚ್-ಮೇ) ಸಾಮಾನ್ಯ ದಕ್ಷಿಣ ಮಾರ್ಗದಿಂದ ಎವರೆಸ್ಟ್ ಏರುವ ವಿದೇಶಿಯರಿಗೆ ರಾಯಲ್ಟಿ ಶುಲ್ಕವನ್ನು ಪ್ರಸ್ತುತ ಪ್ರತಿ ವ್ಯಕ್ತಿ 11,000 ರಿಂದ 15,000 ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೀತಕಾಲದ (ಸೆಪ್ಟೆಂಬರ್-ನವೆಂಬರ್)ಲ್ಲೂ ಈಗಿರುವ ಶುಲ್ಕದ 5,500 ರಿಂದ 7,500 ಗೆ ಏರಿದೆ. ಅದೇ ಸಮಯದಲ್ಲಿ, ಚಳಿಗಾಲ (ಡಿಸೆಂಬರ್-ಫೆಬ್ರವರಿ) ಮತ್ತು ಮಾನ್ಸೂನ್ (ಜೂನ್-ಆಗಸ್ಟ್) ಋತುಗಳಲ್ಲಿ ಪ್ರತಿ ವ್ಯಕ್ತಿಯ ಪರವಾನಗಿ ವೆಚ್ಚವು 2,750 ರಿಂದ 3,750 ಕ್ಕೆ ಏರಿದೆ.
ಈ ಕುರಿತು ಈಗಾಗಲೇ ಸಂಪುಟ ನಿರ್ಧಾರ ತೆಗೆದುಕೊಳ್ಳಲಾಗಿದೆ, ಆದರೆ ಅಧಿಕೃತ ಘೋಷಣೆ ಇನ್ನೂ ಬರಬೇಕಿದೆ ಎಂದು ಪ್ರವಾಸೋದ್ಯಮ ಮಂಡಳಿಯ ನಿರ್ದೇಶಕಿ ಆರತಿ ನ್ಯೂಪಾನೆ ಹೇಳಿದ್ದಾರೆ.
8848.86 ಮೀಟರ್ ಎತ್ತರದ ಶಿಖರವನ್ನು ಏರಲು ಹೊಸ ಶುಲ್ಕಗಳು ಸೆಪ್ಟೆಂಬರ್ 1, 2025 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದರು.ನೇಪಾಳ ಗೆಜೆಟ್‌ನಲ್ಲಿ ಪ್ರಕಟವಾದ ನಂತರ ಸಂಪುಟವು ಅನುಮೋದಿಸಿದ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿವೆ.ಆದಾಗ್ಯೂ, ಎವರೆಸ್ಟ್ ಏರಲು ಬಯಸುವ ನೇಪಾಳಿ ಪರ್ವತಾರೋಹಿಗಳಿಗೆ ಶರತ್ಕಾಲದಲ್ಲಿ ಪ್ರಸ್ತುತ ರೂ. 75,000 ರಿಂದ ರೂ. 150,000 ಕ್ಕೆ ರಾಯಧನವನ್ನು ಎರಡು ಪಟ್ಟು ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.
ಕಳೆದ 2015 ರಂದು ಕೊನೆಯ ರಾಯಲ್ಟಿ ಶುಲ್ಕ ಪರಿಷ್ಕರಣೆಯನ್ನು ಮಾಡಲಾಗಿತ್ತು ಆಗ ಸರ್ಕಾರವು ಸಾಮಾನ್ಯ ಮಾರ್ಗದಿಂದ ವಸಂತ ಋತುವಿಗೆ ಪ್ರತಿ ಪರ್ವತಾರೋಹಿಗಳಿಗೆ 11,000 ಏಕರೂಪದ ಶುಲ್ಕಕ್ಕೆ ಬದಲಾಯಿಸಿತು.ಈ ಹಿಂದೆ 75 ದಿನಗಳವರೆಗೆ ಮಾನ್ಯವಾಗಿದ್ದ ಕ್ಲೈಂಬಿಂಗ್ ಪರವಾನಗಿಗಳು ಈಗ 55 ದಿನಗಳಿಗೆ ಸೀಮಿತವಾಗಿರುತ್ತದೆ. ಕ್ಲೈಂಬಿಂಗ್ ಚಟುವಟಿಕೆಗಳನ್ನು ಸುಗಮಗೊಳಿಸುವ ಗುರಿಯನ್ನು ಕಡಿಮೆ ಮಾಡಲಾಗಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.ಮಲಿನ ಮುಕ್ಕಕೂ ಕ್ರಮಕೈಗೊಳ್ಳಲಾಗಿದೆ .
ಹೊಸ ನಿಯಮಗಳ ಪ್ರಕಾರ, ಮುಂಬರುವ ವಸಂತ ಋತುವಿನಿಂದ, ಎವರೆಸ್ಟ್ ಪರ್ವತಾರೋಹಿಗಳು ತಮ ಮಲವನ್ನು ಸರಿಯಾದ ವಿಲೇವಾರಿಗಾಗಿ ಬೇಸ್ ಕ್ಯಾಂಪ್‌ಗೆ ತರಬೇಕಾಗುತ್ತದೆ. ಪರ್ವತಾರೋಹಿಗಳು ಮೇಲ್ಭಾಗದ ಪ್ರದೇಶಗಳಲ್ಲಿ ತ್ಯಾಜ್ಯವನ್ನು ಸಂಗ್ರಹಿಸಲು ಜೈವಿಕ ವಿಘಟನೀಯ ಚೀಲಗಳನ್ನು ಒಯ್ಯಬೇಕು.ಕೆಲವೇ ಪರ್ವತಾರೋಹಿಗಳು ಶಿಖರದಿಂದ ತ್ಯಾಜ್ಯವನ್ನು ಸಾಗಿಸಲು ಜೈವಿಕ ವಿಘಟನೀಯ ಚೀಲಗಳನ್ನು ಬಳಸುತ್ತಾರೆ ಎಂದು ವರದಿ ಸೇರಿಸಲಾಗಿದೆ.
ಇಂತಹ ಅಭ್ಯಾಸಗಳು ಪ್ರದೇಶದ ನೈಸರ್ಗಿಕ ಸೌಂದರ್ಯವನ್ನು ಹಾಳು ಮಾಡಿವೆ ಮತ್ತು ಸ್ಥಳೀಯ ಸಮುದಾಯಗಳಿಗೆ ಆರೋಗ್ಯದ ಅಪಾಯಗಳನ್ನು ಸೃಷ್ಟಿಸಿವೆ.ಹೊಸ ನಿಯಮಗಳ ಪ್ರಕಾರ, ಪ್ರವಾಸೋದ್ಯಮ ಇಲಾಖೆ ನೀಡಿದ ಪರವಾನಗಿ ದಾಖಲೆಯಲ್ಲಿ ಪಟ್ಟಿ ಮಾಡದ ವಸ್ತುಗಳನ್ನು ಆರೋಹಿಗಳು ಸಾಗಿಸುವುದನ್ನು ನಿಷೇಧಿಸಲಾಗಿದೆ.