ವಿಜಯಪುರ, ಮೇ 2-ಮಾರುವೇಶದಲ್ಲಿ ಬಂದು ಸೋದರಳಿಯನೇ ಸ್ವಂತ ಅತ್ತೆಯ ಮೈಮೇಲಿದ್ದ ಚಿನ್ನಾಭರಣ ದರೋಡೆ ಮಾಡಿದ ಘಟನೆ ನಡೆದಿದೆ. ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ನಿಂಬೆಟ್ವಾ ಪೂಜಾರಿ (70) ಎಂಬುವರು ಸೋದರಳಿಯ ನಿಂಗಪ್ಪ ಪೂಜಾರಿಯನ್ನು ಕರೆದುಕೊಂಡು ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡದಲ್ಲಿನ ಸಂಬಂಧಿಕರ ಮನೆಗೆ ಹೋಗಿದ್ದರು.
ಸಾಯಂಕಾಲ ಗುಳೆದಗುಡ್ಡದಿಂದ ನಿಡಗುಂದಿಗೆ ಆಗಮಿಸಿ, ಅಲ್ಲಿಂದ ಝಳಕಿಗೆ ಬಸ್ ಮೂಲಕ ಬಂದಿದ್ದರು. ಝಳಕಿಯಿಂದ ಬೈಕ್‌ನಲ್ಲಿ ಅಳಿಯನ ಜೊತೆಗೆ ಅಂಜುಟಗಿ ಗ್ರಾಮಕ್ಕೆ ನಿಂಬೆವ್‌ಾ ತೆರಳುತ್ತಿದ್ದರು.
ರಾತ್ರಿ 9 ಗಂಟೆ ಸುಮಾರಿಗೆ ಮಾರ್ಗ ಮದ್ಯೆ ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾಗಿದೆ ಪೆಟ್ರೋಲ್ ತರುತ್ತೇನೆಂದು ನಿಂಪ್ಪ ಹೋಗಿದ್ದನು. ಕೆಲ ಸಮಯದ ನಂತರ ನಿಂಗಪ್ಪ ಬಟ್ಟೆಗಳನ್ನು ಬದಲಾಯಿಸಿಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮತ್ತೋರ್ವನೊಂದಿಗೆ ಬಂದು, ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ, ಬಾಯಿಗೆ ಬಟ್ಟೆ ತುರಕಿ ಅವರ ಮೈ ಮೇಲಿದ್ದ 130 ಗ್ರಾಂಗೂ ಆಧಿಕ ಚಿನ್ನಾಭರಣ ಕಿತ್ತುಕೊಂಡು ಓಡಿ ಹೋಗಿದ್ದರು. ಬಳಿಕ, ಬಟ್ಟೆ ಬದಲಾಯಿಸಿಕೊಂಡ ಬಂದ ನಿಂಗಪ್ಪ ನಾಟಕವಾಡಿ ನಂತರ ಅತ್ತೆಯ ಜೊತೆ ಬಂದು ಝಳಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದನು.
ಆರಂಭದಲ್ಲಿ ದರೋಡೆ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ ಈ ವೇಳೆ ನಿಂಬೆವ್ ಅವರ ಹೇಳಿಕೆ ಪಡೆಯುವಾಗ ನಂತರ, ಪೊಲೀಸರು ಘಟನೆ ನಡೆದ ದಿನದ ಮೊಬೈಲ್ ಟವರ್ ಲೊಕೇಷನ್ ಆಧಾರದ ಮೇಲೆ ಆಳಿಯ ನಿಂಗಪ್ಪನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದರೋಡೆ ನಾಟಕ ಬಯಲಾಗಿದೆ.
ಘಟನೆ ನಡೆದ ದಿನ ನಿಂಗಪ್ಪ ಪೂರ್ವ ನಿಯೋಜನೆಯಂತೆ ನಿಂಬೆವ್ ಅವರನ್ನು ಬೈಕ್ ಮೇಲೆ ಹತ್ತಿಸಿಕೊಂಡು ಬಂದು ಬೈಕ್‌ನಲ್ಲಿ ಪೆಟ್ರೋಲ್ .ನಂತರ, ತನ್ನ ಸ್ನೇಹಿತ ಪರಶುರಾಮ ಬಂದಪಟ್ಟಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ನಿಂಗಪ್ಪ ಹಾಗೂ ಪರಶುರಾಮ ಬಂದು ನಿಂಬೆವ್ ಅವರ ಮೈಮೇಲಿದ್ದ ಚಿನ್ನದ ಬಳೆ ಸರ ಹಾಗೂ ಇತರೆ ಆಭರಣ ದರೋಡೆ ಮಾಡಿ ಹೋಗಿದ್ದಾಗಿ ಬಾಯಿ ಬಿಟ್ಟಿದ್ದಾರೆ.
ಆಕೆ ಅಳಿಯನ ಮೇಲೆ ಸಂಶಯವಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದರು
ಖಾಲಿಯಾಗಿದೆ ಎಂದು ನಿಂಬೆವ್ ಪೂಜಾರಿಯನ್ನು ರಸ್ತೆಯಲ್ಲೇ ನಿಲ್ಲಿಸಿ ಹೋಗಿದ್ದನು