ಬೆಂಗಳೂರು,ಅ.6- ರಾಜಧಾನಿ ಬೆಂಗಳೂರಿನ ನಮ ಮೆಟ್ರೋ ರೈಲು ನಿಲ್ದಾಣಕ್ಕೆ ಬಸವಣ್ಣನವರ ಹೆಸರು ನಾಮಕರಣ ಮಾಡುವ ಬದಲು ಹೆಚ್ಚಿಸಿರುವ ದರವನ್ನು ಇಳಿಕೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ವೀರಶೈವ ಲಿಂಗಾಯಿತ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯನವರು, ಸಮುದಾಯದ ಬೇಡಿಕೆಯಂತೆ ನಮ ಮೆಟ್ರೋ ರೈಲು ನಿಲ್ದಾಣಕ್ಕೆ ಬಸವಣ್ಣನವರ ಹೆಸರನ್ನು ನಾಮಕರಣ ಮಾಡುತ್ತೇವೆ. ಇದು ನಮ ಕೈಯಲ್ಲಿ ಇಲ್ಲ. ಒಂದು ವೇಳೆ ಇದ್ದಿದ್ದರೆ ಇಂದೇ ಘೋಷಣೆ ಮಾಡುತ್ತಿದೆ ಎಂದು ಹೇಳಿದ್ದರು.
ಆದರೂ ಸಮುದಾಯದ ಕೋರಿಕೆಯಂತೆ ಮೆಟ್ರೋ ರೈಲು ನಿಲ್ದಾಣಕ್ಕೆ ಬಸವಣ್ಣನವರ ಹೆಸರು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದ್ದರು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದನ್ನು ಸ್ವಾಗತಿಸಿದ್ದರೆ, ಇನ್ನು ಕೆಲವರು ದರ ಹೆಚ್ಚಳ ಮಾಡಿರುವುದಕ್ಕೆ ವಿರೋಧಿಸಿ ಅಸಮತಿ ಸೂಚಿಸಿದ್ದಾರೆ.
ಸಿದ್ದರಾಮಯ್ಯನವರೇ ಮೊದಲು ಬೆಂಗಳೂರಿನ ಗುಂಡಿ ಮುಚ್ಚಿ. ಮೆಟ್ರೋಗೆ ಹೆಸರು ಇಡುವುದು ಮುಖ್ಯವಲ್ಲ. ದರ ಇಳಿಸುವುದು ಮುಖ್ಯ. ಭಾರತದ ಯಾವ ಮೆಟ್ರೋದಲ್ಲಿ ಏರಿಸದಷ್ಟು ದರವನ್ನು ಬೆಂಗಳೂರಿನಲ್ಲಿ ಏರಿಸಿದ್ದೀರಿ. ಮೊದಲು ಆ ದರವನ್ನು ಇಳಿಕೆ ಮಾಡಿ ಎಂದು ನೆಟ್ಟಿಗರಿಂದ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ಕೆಲವರು ನಮ ಮೆಟ್ರೋ ಈಗಾಗಲೇ ಜನಜನಿತವಾಗಿದೆ. ಹೊರರಾಜ್ಯದಿಂದ ಬಂದವರು ನಮ ಮೆಟ್ರೋ ಎಂದು ಕರೆಯುತ್ತಿದ್ದಾರೆ. ಬಸವಣ್ಣನ ಬಗ್ಗೆ ನಿಮಗೆ ಇಷ್ಟ ಇದ್ದರೆ ನಿಮ ಯಾವುದಾದರು ಯೋಜನೆ ಇಡಿ. ಬೇಕಿದ್ದರೆ ಇಂದಿರಾ ಕ್ಯಾಂಟೀನ್ ಬದಲು ಬಸವ ಕ್ಯಾಂಟೀನ್ ಎಂದು ಬದಲಾಯಿಸಿ ಎಂದು ಕಮೆಂಟ್ ಮಾಡುತ್ತಿದ್ದಾರೆ.ಇನ್ನು ಕೆಲವರು ಸಿದ್ದರಾಮಯ್ಯನವರ ನಿರ್ಧಾರ ಸರಿಯಾಗಿದೆ. ಕಾಯಕಯೋಗಿ ಬಸವಣ್ಣ ಎಲ್ಲರಿಗೂ ಆದರ್ಶ. ಬಸವ ಮೆಟ್ರೋ ಇಡುವ ನಿರ್ಧಾರ ಸರಿಯಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.