ರಾಯಚೂರು,ಜ.27-ಮಂತ್ರಾಲಯಕ್ಕೆ ಗುರು ರಾಯರ ದರ್ಶನಕ್ಕೆ ಬರುವ ಭಕ್ತರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ಮೊದಲೇ ರೂಂ ಬುಕ್ ಮಾಡುವ ಭಕ್ತರನ್ನು ಗುರಿಯಾಗಿಸಿಕೊಂಡು ವಂಚಕರು ಹಣ ಲಪಟಾಯಿಸುತ್ತಿದ್ದಾರೆ.
ವಿವಿಧ ಸೇವೆಗಳ ಸೌಲಭ್ಯ ಒದಗಿಸುವ ಹಣ ವಸೂಲಿ ಮಾಡುತ್ತಿರುವುದು ಬಗ್ಗೆ ಭಕ್ತರು ಜಾಗೃತರಾಗಿರಲು ಮಂತ್ರಾಲಯ ರಾಯರ ಮಠದ ಆಡಳಿತ ಮಂಡಳಿ ತಿಳಿಸಿದೆ. .ಫೇಕ್ ಯುಪಿಐ ಐಡಿಗ ಮೂಲಕ ಹಣ ಹಾಕಿಸಿಕೊಂಡು ವಂಚಿಸಲಾಗುತ್ತಿದೆ.ಈ ಬಗ್ಗೆ ಸೈಬರ್ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದೆ.
ಕೊಠಡಿಗಳನ್ನು ಅಧಿಕೃತ ವೆಬ್‌ಸೈಟ್‌ನಿಂದ ಬುಕ್ ಮಾಡುವಂತೆ ಮಠದ ವ್ಯವಸ್ಥಾಪಕರಾದ ವೆಂಕಟೇಶ್ ಜೋಶಿ ಮನವಿ ಮಾಡಿದ್ದಾರೆ.ಇತ್ತೀಚಿಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು,ಆನ್‌ಲೈನ್ ವ್ಯವಹಾರದ ವೇಳೆ ಎಚ್ಚರ ವಹಿಸುವಂತೆ ಭಕ್ತರಿಗೆ ಎಚ್ಚರಿಸಲಾಗಿದೆ.