ಬೆಂಗಳೂರು,ಜು.6- ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕೈಪಿಡಿ ಆಪ್ಗಳನ್ನು ಬಿಡುಗಡೆ ಮಾಡಿದರು. ನೂತನ ಕ್ರಿಮಿನಲ್ ಕಾನೂನುಗಳ ಸಂಚಯ ಎಂಬ ಮೊಬೈಲ್ ಆಪ್, ವಿಧಿವಿಜ್ಞಾನ ಇಲಾಖೆಯಿಂದ ಸೀನ್ ಆಫ್ ಕ್ರೈಂ ಕೈಪಿಡಿ, ಹೊಯ್ಸಳ ವಾಹನಗಳ ರಿಯಲ್ ಟೈಮ್ ಟ್ರಾಕಿಂಗ್ ಪ್ರಾತ್ಯಕ್ಷಿಕೆ, ಸೇಫ್ ಕನೆಕ್ಟ್ ತಂತ್ರಾಂಶ ಬಿಡುಗಡೆ, ಆಡಿಯೋ-ವಿಡಿಯೋ ಸಂಪರ್ಕ ಮಾಡುವ ಟೆಕ್ನಾಲಜಿ, ಡಿಜಿಟಲ್ಅರೆಸ್ಟ್ ಸ್ಕ್ಯಾಮ್ ತನಿಖಾ ಕೈಪಿಡಿ, ಆನ್ಲೈನ್ ವಂಚನೆ ಪ್ರಕರಣಗಳ ತನಿಖೆ ಮಾಡುವ ಕೈಪಿಡಿ ಹಾಗೂ ತೊಂದರೆಯಲ್ಲಿರುವ ವ್ಯಕ್ತಿ ಕಮಾಂಡ್ ಸೆಂಟರ್ ಸಿಬ್ಬಂದಿ ಯೊಂದಿಗೆ ಸಂಪರ್ಕಿಸುವ ತಂತ್ರಜ್ಞಾನವನ್ನು ಇಂದು ಬಿಡುಗಡೆ ಮಾಡಲಾಯಿತು.
ಪೊಲೀಸ್ ಪ್ರಧಾನ ಕಛೇರಿಯ ಸಮೇಳನ ಸಭಾಂಗಣದಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಪಾಲ್ಗೊಂಡಿದ್ದರು.
ಹೊಸ ಕಾನೂನು ಮಾಹಿತಿಗೆ ಸಂಚಯ ಆಪ್:
ಹೊಸದಾಗಿ ಜಾರಿಗೆ ಬಂದಿರುವ ಮೂರು ಕ್ರಿಮಿನಲ್ ಕಾನೂನುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಸಮಗ್ರ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಲು ಮೊಬೈಲ್ ಅಪ್ಲಿಕೇಷನ್ ಸಂಚಯವನ್ನು ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್ ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯಾ ಅಧಿನಿಯಮಗಳ ಸಂಕಲನವಾಗಿದೆ.
ಸಂಚಯ ಆಪ್ ಕ್ರಿಮಿನಲ್ ಕಾನೂನುಗಳ ಸಂಪನೂಲದ ಕೇಂದ್ರಬಿಂದುವಾಗಿ ಹೊರ ಹೊಮಲಿದ್ದು, ಸಂಬಂಧಿತ ಪಾಲುದಾರರಾದ ನ್ಯಾಯಾಂಗ ಅಭಿಯೋಜಕರು, ವಕೀಲರು, ಕಾನೂನು ವಿದ್ಯಾರ್ಥಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಇತ್ತೀಚಿನ ಕ್ರಿಮಿನಲ್ ಕಾನೂನುಗಳ ಮಾರ್ಪಾಡಿನ ಬಗ್ಗೆ ಮಾಹಿತಿ ನೀಡುವ ಮೂಲಕ ಅರಿವು ಹೆಚ್ಚಿಸಲಿದೆ.
ಮುಖ್ಯಾಂಶಗಳು:
*ಕಾನೂನು ಸಂಬಂಧಿತ ಪಾಲುದಾರರಾದ ನ್ಯಾಯಾಂಗ ಅಭಿಯೋಜಕರು, ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಇತ್ತೀಚಿನ ಕ್ರಿಮಿನಲ್ ಕಾನೂನುಗಳ ಮಾರ್ಪಾಡಿನ ಬಗ್ಗೆ ಸಿದ್ದ ಮಾರ್ಗದರ್ಶಿ.
*ಆಫ್‌ಲೈನ್ ಮತ್ತು ಆನ್‌ಲೈನ್ ಎರಡೂ ವಿಧದಲ್ಲಿ ಬಳಕೆ ಮಾಡಬಹುದಾಗಿರುತ್ತದೆ.
*ಕಾನೂನುಗಳ ಮಾರ್ಪಾಡಿನ ಬಗ್ಗೆ ಹಳೆಯ ಹಾಗೂ ಹೊಸ ಕಾನೂನುಗಳ ತುಲನಾ ಅವಕಾಶ.
*ಬದಲಾದ ಕಾನೂನುಗಳ ಸುಲಭ ಮತ್ತು ಶೀಘ್ರ ಅರ್ಥೈಸುವಿಕೆ
*ಕಾನೂನಿನ ಎಲ್ಲಾ ಅಧ್ಯಾಯಗಳ ಮತ್ತು ಭಾಗಗಳ ಲಿಂಕ್ ಸೌಲಭ್ಯ
*ನಿರ್ಧಿಷ್ಟ ಮಾಹಿತಿಯ ಪತ್ತೆಹಚ್ಚುವ ಕಾರ್ಯನಿರತೆ
*ಕರ್ನಾಟಕ ಪೊಲೀಸ್ ಅಕಾಡೆಮಿಯಿಂದ ಪ್ರಕಟಿಸಲಾಗಿರುವ ನ್ಯೂ ಕ್ರಿಮಿನಲ್ ಲಾ ಕನ್ನಡ ಕೈಪಿಡಿಯನ್ನು ಆಪ್‌ನಲ್ಲಿ ಅಳವಡಿಸಲಾಗಿದೆ.