ನವದೆಹಲಿ, ಏ.4- ಭಾರತವು ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಹೊಸ ತಲೆಮಾರಿನ ಬ್ಯಾಲಿಸ್ಟಿಕ್(ಖಂಡಾಂತರ) ಕ್ಷಿಪಣಿ ಅಗ್ನಿ-ಪ್ರೈಮ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ನಿನ್ನೆ ಸಂಜೆ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದ್ದು, ಪರೀಕ್ಷೆಯು ತನ್ನ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸುವ ಎಲ್ಲಾ ಪ್ರಯೋಗದ ಉದ್ದೇಶಗಳನ್ನು ಪೂರೈಸಿದೆ ಎಂದು ಹೇಳಿದೆ. ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ಹಲವಾರು ಶ್ರೇಣಿಯ ಸಂವೇದಕಗಳಿಂದ ಸೆರೆಹಿಡಿಯಲಾದ ಡೇಟಾದಿಂದ ದೃಢೀಕರಿಸಲ್ಪಟ್ಟಿದೆ.
ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್‍ಎಫ್‍ಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ಜೊತೆಗೆ ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಹೊಸ ಪೀಳಿಗೆಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-ಪ್ರೈಮ್‍ನ ಯಶಸ್ವಿ ಹಾರಾಟ ಪರೀಕ್ಷೆಯನ್ನು ಏಪ್ರಿಲ್ 3 ರಂದು ಸುಮಾರು 19.00 ಗಂಟೆಗಳಲ್ಲಿ ನಡೆಸಿತು ಎಂದು ಸಚಿವಾಲಯ ತಿಳಿಸಿದೆ.
ಉಡಾವಣೆಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಮುಖ್ಯಸ್ಥರು ಮತ್ತು ಡಿಆರ್‍ಡಿಒ ಮತ್ತು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು.ಯಶಸ್ವಿ ಪರೀಕ್ಷೆಗಾಗಿ ಡಿಆರ್‍ಡಿಒ, ಎಸ್‍ಎಫ್‍ಸಿ ಮತ್ತು ಸಶಸ್ತ್ರ ಪಡೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದು, ಕ್ಷಿಪಣಿಯ ಯಶಸ್ವಿ ಅಭಿವೃದ್ಧಿ ಮತ್ತು ಇಂಡಕ್ಷನ್(ಸೇರ್ಪಡೆ) ಸಶಸ್ತ್ರ ಪಡೆಗಳಿಗೆ ಅತ್ಯುತ್ತಮ ಬಲ ಗುಣಕವಾಗಲಿದೆ ಎಂದು ಹೇಳಿದ್ದಾರೆ.
ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಚೌಹಾಣ್ ಮತ್ತು ಡಿಆರ್‍ಡಿಒ ಅಧ್ಯಕ್ಷ ಸಮೀರ್ ವಿ ಕಾಮತ್ ಯಶಸ್ವಿ ಹಾರಾಟ ಪರೀಕ್ಷೆಗಾಗಿ ಎಸ್‍ಎಫ್‍ಸಿ ಮತ್ತು ಡಿಆರ್‍ಡಿಒ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.