Saturday, December 28, 2024
Homeರಾಜ್ಯಉಪಚುನಾವಣೆಯಲ್ಲಿ ಆಯ್ಕೆಯಾದ ನೂತನ ಶಾಸಕರ ಪ್ರಮಾಣವಚನ

ಉಪಚುನಾವಣೆಯಲ್ಲಿ ಆಯ್ಕೆಯಾದ ನೂತನ ಶಾಸಕರ ಪ್ರಮಾಣವಚನ

new MLAs elected in by-elections take Oath in Assembly

ಬೆಳಗಾವಿ,ಡಿ.9– ವಿಧಾನಸಭೆಯ ಉಪಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್‌‍ನ ಮೂವರು ನೂತನ ಸದಸ್ಯರು ಇಂದು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಬೆಳಗಾವಿಯ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಆರಂಭದಲ್ಲಿ ವಂದೇ ಮಾತರಂ ಗಾಯನದ ಮೂಲಕ ಕಲಾಪಕ್ಕೆ ಚಾಲನೆ ನೀಡಲಾಯಿತು. ನಂತರ ಸಭಾಧ್ಯಕ್ಷ ಯು.ಟಿ.ಖಾದರ್‌ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.

ಸದನದ ಎಲ್ಲಾ ಸದಸ್ಯರು ಎದ್ದು ನಿಂತು ಸಭಾಧ್ಯಕ್ಷರ ಜೊತೆ ಪ್ರಸ್ತಾವನೆ ಬೋಧನೆಗೆ ಧ್ವನಿಗೂಡಿಸಿದರು.ಬಳಿಕ ವಿಧಾನಸಭೆ ಉಪಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರ ಪ್ರಮಾಣವಚನಕ್ಕೆ ಅವಕಾಶ ಮಾಡಿಕೊಡಲಾಯಿತು.

ಸಂಡೂರು ಕ್ಷೇತ್ರದಿಂದ ಆಯ್ಕೆಯಾದ ಅನ್ನಪೂರ್ಣ ತುಕಾರಾಂ ಭಗವಂತನ ಹೆಸರಿನಲ್ಲಿ,ಶಿಗ್ಗಾವಿ ಕ್ಷೇತ್ರದಿಂದ ಆಯ್ಕೆಯಾದ ಪಠಾಣ್‌ ಯಾಸೀರ್‌ ಖಾನ್‌ ಅಹಮದ್‌ ಖಾನ್‌ ಭಗವಂತ, ತಂದೆ ತಾಯಿ ಹಾಗೂ ಸಂವಿಧಾನ ಹೆಸರಿನಲ್ಲಿ, ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾದ ಸಿ.ಪಿ.ಯೋಗೇಶ್ವರ್‌ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪಠಾಣ್‌ ಅವರು ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ಪ್ರಮಾಣವಚನ ಸ್ವೀಕರಿಸುವ ಮೂಲಕ ಗಮನ ಸೆಳೆದರು.

ನೂತನ ಸದಸ್ಯರಿಗೆ ಸಭಾಧ್ಯಕ್ಷರು ಸಣ್ಣ ಉಡುಗೊರೆ ನೀಡಿ ಅಭಿನಂದಿಸಿದರು. ಸದನದಲ್ಲಿ ಬಹಳಷ್ಟು ಹಿರಿಯ ಸದಸ್ಯರು ಆತೀಯವಾಗಿ ಅಭಿನಂದಿಸಿದ್ದಲ್ಲದೆ, ಮೇಜು ಕುಟ್ಟಿ ಸ್ವಾಗತಿಸಿದರು.

ಸಭಾಧ್ಯಕ್ಷರ ಮನವಿ :
ವಿಧಾನಸಭೆಯ ಚುನಾವಣೆ ಮುಗಿದಿದೆ. ಟಿವಿ ಚಾನಲ್‌ ಬದಲಾಯಿಸುವಂತೆ ಇನ್ನು ಮುಂದೆ ನಾವು ರಾಜಕೀಯ ಚಾನಲ್‌ ಬದಲಾಯಿಸಿ ಅಭಿವೃದ್ಧಿಯತ್ತ ಗಮನ ಹರಿಸೋಣ ಎಂದು ಕರೆ ನೀಡಿದ್ದಲ್ಲದೆ ಎಲ್ಲಾ ಸದಸ್ಯರೂ ತಪ್ಪದೇ ಕಲಾಪದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

RELATED ARTICLES

Latest News