ಬೆಂಗಳೂರು,ಜು.16-ಹೊಸ ಪೊಲೀಸ್ ಠಾಣೆ ಪ್ರಾರಂಭಿಸಲು ಜನಸಂಖ್ಯೆ 50ರಿಂದ 60 ಸಾವಿರ ಇರಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಅಲ್ಲಮಪ್ರಭು ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ಪೊಲೀಸ್ ಆಯೋಗದ ಮಾರ್ಗಸೂಚಿಯಂತೆ ಪೊಲೀಸ್ ಠಾಣೆ ತೆರೆಯಬೇಕಾಗುತ್ತದೆ.
ಶಾಸಕರು ಕೇಳಿರುವ ಕಲಬರುಗಿ ನಗರದ ಜೇವರ್ಗಿ ರಸ್ತೆಯ ರಾಮಮಂದಿರದ ಬಳಿ ಕೊಟನೂರು ಪೊಲೀಸ್ ಹೊರಠಾಣೆಗೆ ನಿಗದಿತ ಮಾನದಂಡಗಳನ್ನು ಪೂರೈಸದ ಹಿನ್ನಲೆಯಲ್ಲಿ ಪರಿಗಣಿಸಿಲ್ಲ .
ಶಾಸಕರು ಮತ್ತೊಮೆ ಪರಿಶೀಲನೆ ಮಾಡುವಂತೆ ಹೇಳಿದ್ದಾರೆ. ಅದರಂತೆ ಪರಿಶೀಲಿಸಿ ಅಗತ್ಯಬಿದ್ದರೆ ಪರಿಗಣಿಸಲಾಗು ವುದು. ಆದರೆ ಅಕ್ಕಪಕ್ಕದ ಠಾಣೆಗಳನ್ನು ಬಲವರ್ಧನೆ ಮಾಡ ಲಾಗುವುದು ಎಂದು ಹೇಳಿದರು.