Thursday, July 31, 2025
Homeರಾಜ್ಯಆ.1ರಿಂದ ಯುಪಿಐ ಬಳಕೆಗೆ ಹೊಸ ನಿಯಮ

ಆ.1ರಿಂದ ಯುಪಿಐ ಬಳಕೆಗೆ ಹೊಸ ನಿಯಮ

New rules for UPI use from August 1

ನವದೆಹಲಿ, ಜು.30– ಯುಪಿಐ ಪೇಮೆಂಟ್‌ನಲ್ಲಿ ಆ.1ರಿಂದ ಕೆಲ ಪ್ರಮುಖ ಬದಲಾವಣೆಯಾಗಲಿದೆ. ಯುನಿಫೈಡ್‌ ಪೇಮೆಂತ್ಸ್ ಇಂಟರ್ಫೇಸ್‌‍ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳ ಜಾರಿಗೆ ತರಲು ನ್ಯಾಷನಲ್‌ ಪೇಮೆಂಟ್ಸ್ ಕಾರ್ಪೊರೇಷನ್‌ ಆಫ್‌ ಇಂಡಿಯಾ ಮುಂದಾಗಿದೆ. ಈ ಹೊಸ ಮಾರ್ಗಸೂಚಿಗಳು ಗೂಗಲ್‌ ಪೇ, ಫೋನ್‌ ಪೇ ಮತ್ತು ಪೇಟಿಎಂನಂತಹ ಡಿಜಿಟಲ್‌ ಪಾವತಿ ಆಪ್‌ಗಳಿಗೆ ಅನ್ವಯವಾಗಲಿವೆ.

ಈ ಬದಲಾವಣೆಗಳು ಬಳಕೆದಾರರ ದೈನಂದಿನ ವಹಿವಾಟುಗಳ ಮೇಲೆ ಅಂತಹ ಬದಲಾವಣೆಗಳನ್ನೇನೂ ತರುವುದಿಲ್ಲವಾದರೂ, ಬ್ಯಾಲೆನ್ಸ್ ಚೆಕ್‌ ಮತ್ತು ಆಟೋ ಡೆಬಿಟ್‌ಗಳಂತಹ ಕೆಲವು ಕಾರ್ಯಗಳಿಗೆ ಮಿತಿಗಳನ್ನು ಹೇರಲಿದೆ. ಹೊಸ ನಿಯಮಗಳ ಪ್ರಕಾರ, ಬಳಕೆದಾರರು ಪ್ರತಿ ಯುಪಿಐ ಅಪ್ಲಿಕೇಶನ್‌ನಲ್ಲಿ ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್‌ ಮಾಡಲು ಅವಕಾಶ ಇರಲಿದೆ. ಅದಲ್ಲದೇ ನಿಮ್ಮ ಮೊಬೈಲ್‌ ಸಂಖ್ಯೆಗೆ ಲಿಂಕ್‌ ಮಾಡಲಾದ ಬ್ಯಾಂಕ್‌ ಖಾತೆಗಳ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ಪಡೆಯಲು ಅವಕಾಶವಿರಲಿದೆ.

ಇನ್ನೂ ಬ್ಯಾಲೆನ್‌್ಸ ಚೆಕ್‌ ಮಾಡುವುದರ ಜೊತೆಗೆ ಓಟಿಟಿ ಸೇರಿದಂತೆ ಮೊಬೈಲ್‌ ರಿಚಾರ್ಜ್‌ಗಳ ಆಟೋ ಪೇಗೆ ಸಮಯ ನಿಗದಿಯಾಗಿದ್ದು, ಆ ಸಮಯ ಸಂಧರ್ಭದಲ್ಲಿ ಮಾತ್ರ ಪಾವತಿಗೆ ಅವಕಾಶ ಇರಲಿದೆ. ಮೂರು ನಿರ್ದಿಷ್ಟ ಸಮಯದ ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಪೀಕ್‌ ಅವರ್‌ಗಳಲ್ಲಿ ಸರ್ವರ್‌ಗಳ ಮೇಲಿನ ಒತ್ತಡ ಕಡಿಮೆ ಮಾಡಲು ಈ ಪಾವತಿಗಳನ್ನು ಬೆಳಗ್ಗೆ 10 ಗಂಟೆಗೂ ಮುನ್ನ, ಮಧ್ಯಾಹ್ನ 1 ರಿಂದ ಸಂಜೆ 5 ಗಂಟೆಯ ನಡುವೆ, ಮತ್ತು ರಾತ್ರಿ 9.30ರ ನಂತರ ಮಾತ್ರ ಆಟೋ ಪೇ ಪ್ರಕ್ರಿಯೆ ನಡೆಯಲಿದೆ.

ಇಷ್ಟೇ ಅಲ್ಲ ವಹಿವಾಟು ಬಾಕಿ ಉಳಿದಿರೋದನ್ನ ಪರಿಶೀಲನೆ ಮಿತಿಯನ್ನು ಮೂರು ಬಾರಿಗೆ ಮಾತ್ರ ಪರಿಶೀಲಿಸಲು ಅವಕಾಶ ನೀಡಲಾಗಿದೆ. ಪ್ರತಿ ಪ್ರಯತ್ನದ ನಡುವೆ ಕಡ್ಡಾಯವಾಗಿ 90 ಸೆಕೆಂಡ್‌ ಅಂತರ ಇರಲೇಬೇಕು. ಈ ನಿಯಮವು ಬಳಕೆದಾರರಿಗೆ ಕೊಂಚ ಅನೂನುಕೂಲ ಉಂಟು ಮಾಡುವ ಸಾಧ್ಯತೆ ಇದೆ. ಒಟ್ಟಾರೆ ಯುಪಿಐ ನಿಯಮಗಳ ಬದಲಾವಣೆ ಬಳಕೆದಾರರ ದೈನಂದಿನ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಲ್ಲ. ಆದರೆ ಸರ್ವರ್‌ ಮೇಲಿನ ಒತ್ತಡ ಕಡಿಮೆ ಮಾಡಲು ಈ ಕ್ರಮಕೈಗೊಳ್ಳಲಾಗಿದೆ.

RELATED ARTICLES

Latest News