ಬೆಂಗಳೂರು,ಡಿ.31- ಹೊಸ ವರ್ಷಾಚರಣೆಯ ಸಂಭ್ರಮದ ಬೆನ್ನಲ್ಲೇ ಹೊಸ ವರ್ಷದಲ್ಲಿ ಕೊರೊನಾ ಸೋಂಕು ಹೆಚ್ಚಳದ ಆತಂಕ ಶುರುವಾಗಿದೆ. ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 800ರ ಗಡಿ ದಾಟಿರುವುದರಿಂದ ಆತಂಕ ಹೆಚ್ಚಾಗಿದ್ದು, ಹೊಸ ವರ್ಷಾಚರಣೆ ನಂತರ ಮಹಾಮಾರಿ ಕಾಟ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
ರಾಜ್ಯದಲ್ಲಿ ಕೇವಲ ಒಂದೇ ದಿನದಲ್ಲಿ 201 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಟೆಸ್ಟಿಂಗ್ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದು ಪತ್ತೆಯಾಗಿದೆ.
ರಾಜ್ಯದಲ್ಲಿ ಸದ್ಯ ಪ್ರತಿದಿನ 7,000 ಕ್ಕೂ ಹೆಚ್ಚು ಕೊವಿಡ್ ಟೆಸ್ಟ್‍ಗಳನ್ನ ಮಾಡಲಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಕೊರೊನಾ ಸೋಂಕಿನ ಹಾಟ್‍ಸ್ಪಾಟ್ ಆಗಿ ಬದಲಾಗುತ್ತಿದೆಯ ಎಂಬ ಅನುಮಾನ ಮೂಡಿಸುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ 495 ಕೊವಿಡ್ ಪ್ರಕರಣಗಳಿದ್ದು, ಕೇವಲ 24 ಗಂಟೆಯಲ್ಲಿ 69 ಪ್ರಕರಣಗಳು ಬೆಳಕಿಗೆ ಬಂದಿವೆ.
ಆಸ್ಕರ್ ಪ್ರಶಸ್ತಿ ಗೆದ್ದ ನಾಟು ನಾಟು ಸಾಂಗ್ ಮತ್ತು ಸಾಕ್ಷ್ಯಚಿತ್ರಕ್ಕೆ ಮೋದಿ ಮೆಚ್ಚುಗೆ
ಬಳ್ಳಾರಿಯಲ್ಲಿ 18,ಬೆಂಗಳೂರು ಗ್ರಾಮಾಂತರ-19, ಬೆಳಗಾವಿ -5, ಬೀದರ್- 3, ಚಾಮರಾಜನಗರ 21,ಚಿಕ್ಕಬಳ್ಳಾಪುರ-18, ಚಿಕ್ಕಮಗಳೂರಿನಲ್ಲಿ 8, ಚಿತ್ರದುರ್ಗ-9, ದಕ್ಷಿಣ ಕನ್ನಡ 32, ದಾವಣಗೆರೆ 4, ಧಾರವಾಡ-7, ಗದಗ-8, ಹಾಸನ 21, ಹಾವೇರಿ-1, ಕಲಬುರಗಿ 3, ಕೊಡಗು 3, ಕೋಲಾರ 5, ಕೊಪ್ಪಳ 1, ಮೈಸೂರಿನಲ್ಲಿ 60, ಮಂಡ್ಯ 26,ರಾಯಚೂರು- 1, ರಾಮನಗರದಲ್ಲಿ 11, ಶಿವಮೊಗ್ಗ 14, ತುಮಕೂರು 9, ಉಡುಪಿ- 1, ಉತ್ತರ ಕನ್ನಡ 2, ವಿಜಯನಗರದಲ್ಲಿ 22 ಪ್ರಕರಣಗಳು ವರದಿಯಾಗಿವೆ.