Monday, February 24, 2025
Homeರಾಷ್ಟ್ರೀಯ | Nationalಪತಿಯ ವಿಕೃತಕಾಮಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡ ನವವಿವಾಹಿತೆ

ಪತಿಯ ವಿಕೃತಕಾಮಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡ ನವವಿವಾಹಿತೆ

Newlywed woman commits suicide due to alleged sexual harassment by porn-addicted husband

ವಿಶಾಖಪಟ್ಟಣ,ಫೆ.15- ಲೈಂಗಿಕ ವೀಡಿಯೋಗಳನ್ನು ತೊರಿಸಿ ಹಿಂಸೆ ನೀಡುತ್ತಿದ್ದ ವಿಕೃತ ಕಾಮಿ ಪತಿಯ ಧೋರಣೆಯಿಂದ ಬೇಸತ್ತು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶಾಖಪಟ್ಟಣಂದ ಗೋಪಾಲಪಟ್ಟಣದ ನಂದಮೂರಿ ಕಾಲೋನಿಯಲ್ಲಿ ನಡೆದಿದೆ.

28 ವರ್ಷದ ವಸಂತ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಪತಿ ತನ್ನ ಲೈಂಗಿಕ ವೀಡಿಯೊಗಳನ್ನು ತೋರಿಸಿ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ ಆತನ ಚಿತ್ರಹಿಂಸೆ ಸಹಿಸಲಾಗದೆ ವಸಂತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿ ನಾಗೇಂದ್ರ ಬಾಬುನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ತನ್ನ ಪತಿ ನಾಗೇಂದ್ರಬಾಬು ಪ್ರತಿದಿನ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಟಾರ್ಚರ್ ಮಾಡುತ್ತಿದ್ದಾನೆ ಎಂದು ಆಕೆ ತನ್ನ ಕುಟುಂಬಸ್ಥರ ಜತೆ ಆಳಲು ತೊಡಿಕೊಂಡಿದ್ದಳು.

ಈ ಕುರಿತಾಗಿ ನಾಗೇಂದ್ರಬಾಬು ಜತೆ ಮಾತನಾಡುವುದಾಗಿ ಹೇಳಿದ್ದರು. ಆದರೆ, ಅಷ್ಟರಲ್ಲೇ ವಸಂತ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ನಾಗೇಂದ್ರ ಬಾಬುನೇ ನಮ್ಮ ಮಗಳಿಗೆ ಟಾರ್ಚರ್ ಕೊಟ್ಟು ಕೊಟ್ಟು ಕೊಲೆ ಮಾಡಿದ್ದಾನೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. 28 ವರ್ಷದ ವಸಂತಾ ಹಲವು ಕನಸು ಇಟ್ಟುಕೊಂಡು 34 ವರ್ಷದ ನಾಗೇಂದ್ರ ಬಾಬು ಎನ್ನುವಾತನನ್ನು ಮದುವೆಯಾಗಿದ್ದಳು. ಆದ್ರೆ, ಮದುವೆಯಾದ ಹೊಸತರಲ್ಲೇ ನಾಗೇಂದ್ರ ಬಾಬುವಿನ ವಿಕೃತ ಮನಸ್ಥಿತಿ ಬಯಲಾಗಿದೆ.

ಗಂಡನ ವಿಕೃತ ಕಾಮಕ್ಕೆ ವಸಂತಾ ಸಹಿಸಿಕೊಂಡು ಬಂದಿದ್ದಾಳೆ. ಈ ಬಗ್ಗೆ ತನ್ನ ಪೋಷಕರಿಗೂ ತನಗಾಗುತ್ತಿರುವ ಕಿರುಕುಳದ ಬಗ್ಗೆ ತಿಳಿಸಿದ್ದಾಳೆ. ಕುಟುಂಬಸ್ಥರು ಸಹ ಈ ಬಗ್ಗೆ ಮಾತನಾಡಿ ಬಗೆಹರಿಸೋಣ ಎಂದು ಸಮಾಧಾನಪಡಿಸಿದ್ದರು.

ಆದ್ರೆ, ನಾಗೇಂದ್ರ ಬಾಬುನ ಅಟ್ಟಹಾಸ ದಿನ ಕಳೆದಂತೆ ಹೆಚ್ಚಾಗುತ್ತಲೇ ಇತ್ತು. ಇದರಿಂದ ಬೇಸತ್ತ ವಸಂತಾ ಎಲ್ಲದಕ್ಕೂ ತಾನೇ ಇರಬಾರದು ಎಂದು ಸಾವಿನ ಹಾದಿ ಹಿಡಿದಿದ್ದಾಳೆ. ಈ ಮೂಲಕ ಹಲವು ಕನಸು ಕಂಡಿದ್ದ ವಸಂತಾ ಸಾವಿನ ಮನೆ ಸೇರುವಂತಾಗಿದೆ.

RELATED ARTICLES

Latest News