Friday, October 31, 2025
Homeರಾಜ್ಯಸುಹಾಸ್‌‍ ಶೆಟ್ಟಿ ಹತ್ಯೆ ಪ್ರಕರಣ ದೋಷಾರೋಪಪಟ್ಟಿ ಸಲ್ಲಿಸಿದ ಎನ್‌ಐಎ

ಸುಹಾಸ್‌‍ ಶೆಟ್ಟಿ ಹತ್ಯೆ ಪ್ರಕರಣ ದೋಷಾರೋಪಪಟ್ಟಿ ಸಲ್ಲಿಸಿದ ಎನ್‌ಐಎ

NIA files chargesheet in Suhas Shetty murder case

ಬೆಂಗಳೂರು,ಅ.31– ಬರ್ಬರವಾಗಿ ಕೊಲೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಜರಂಗದಳದ ಕಾರ್ಯಕರ್ತ ಸುಹಾಸ್‌‍ ಶೆಟ್ಟಿ ಹತ್ಯೆಯು ಪೂರ್ವ ನಿಯೋಜಿತ ಕೃತ್ಯ ಎಂದು ರಾಷ್ಟ್ರೀಯ ತನಿಖಾ ದಳ( ಎನ್‌ ಐಎ) ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ (ಚಾರ್ಚ್‌ಶೀಟ್‌) ಸಲ್ಲಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ 1967, ಭಾರತೀಯ ನ್ಯಾಯಸಂಹಿತಾ 2023 ಮತ್ತು ಶಸಾ್ತ್ರಸ್ತ್ರ ಕಾಯಿದೆ, 1959ರ ವಿವಿಧ ವಿಭಾಗಗಳಡಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. 2025ರ ಮೇ ತಿಂಗಳಿನಲ್ಲಿ ಸುಹಾಸ್‌‍ ಶೆಟ್ಟಿಯನ್ನು ಮಾರಕಾಯುಧಗಳಿಂದ ಶಸ್ತ್ರಸಜ್ಜಿತವಾದ ಏಳು ಮಂದಿ ಬರ್ಭರವಾಗಿ ಹತ್ಯೆ ಮಾಡಿದ್ದರು. ಇದೊಂದು ವ್ಯವಸ್ಥಿತ ಹಾಗೂ ಪೂರ್ವ ನಿಯೋಜಿತ ಕೊಲೆಯಾಗಿದ್ದು, ಸುಹಾಸ್‌‍ ಶೆಟ್ಟಿಯನ್ನು ಹತ್ಯೆ ಮಾಡಲು , ಮೊದಲೇ ದುಷ್ಕರ್ಮಿಗಳು ಸಂಚು ರೂಪಿಸಿದ್ದರು. ಆತನನ್ನು ಅಟ್ಟಾಡಿಸಿಕೊಂಡು ಹತ್ಯೆ ಮಾಡಲಾಗಿದೆ.

- Advertisement -

ಹಲ್ಲೆ ನಡೆಸಿದಾಗ ಸುಹಾಸ್‌‍ ಶೆಟ್ಟಿ ಪ್ರಾಣ ಉಳಿಸಿಕೊಳ್ಳಲು ಓಡಿದ್ದರು. ಈ ವೇಳೆ ಅವರನ್ನು ಅಟ್ಟಾಡಿಸಿಕೊಂಡರೂ ಕೊಲೆಗಾರರು ಯಾವುದೇ ದಯೆ ತೋರಿಲ್ಲ ಎಂದು ದಾಖಲೆಗಳು ಹೇಳುತ್ತವೆ. ಆರೋಪಿಗಳು ಉದ್ದೇಶಪೂರ್ವಕವಾಗಿ ಸುಹಾಸ್‌‍ ಶೆಟ್ಟಿ ಚಲಾಯಿಸುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂಬುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಂಗಳೂರು ಮೂಲದ ಸುಹಾಸ್‌‍ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿಸಲಾದ 11 ಆರೋಪಿಗಳ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಬಜರಂಗದಳದ ಸದಸ್ಯ ಶೆಟ್ಟಿ ಅವರನ್ನು ಈ ವರ್ಷದ ಮೇ 1ರಂದು ಏಳು ಜನರು ಹತ್ಯೆಗೈದಿದ್ದರು. ಸಮಾಜದಲ್ಲಿ ಭೀತಿ ಹುಟ್ಟಿಸಲು ಮತ್ತು ಭಯೋತ್ಪಾದನೆಯನ್ನು ಹರಡಲು ಗುರಿಯಿಟ್ಟು ಈ ಹತ್ಯೆ ಮಾಡಲಾಗಿದೆ ಎಂದು ಎನ್‌ಐಎ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಪ್ರಕರಣವನ್ನು ಕೈಗೆತ್ತಿಕೊಂಡ ಸಂಸ್ಥೆ, ಹತ್ಯೆ ಹಿಂದೆ ದೊಡ್ಡ ಪಿತೂರಿಯಿದೆ. ಸುಹಾಸ್‌‍ ಶೆಟ್ಟಿ ಅವರ ಚಟುವಟಿಕೆ, ಚಲನವಲನಗಳನ್ನು ಹಲವಾರು ತಿಂಗಳುಗಳ ಕಾಲ ಸೂಕ್ಷ್ಮವಾಗಿ ಪತ್ತೆಹಚ್ಚಿ ಈ ಏಳು ಆರೋಪಿಗಳು, ಅವರ ಟೊಯೋಟಾ ಇನ್ನೋವಾ ಕಾರನ್ನು ಎರಡು ಕಾರುಗಳಲ್ಲಿ ಹಿಂಬಾಲಿಸಿ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಮಾಜಿ ಸದಸ್ಯನಾಗಿರುವ ಆರೋಪಿ ಅಬ್ದುಲ್‌ ಸಫ್ವಾನ್‌ ಅಲಿಯಾಸ್‌‍ ಕಲವಾರು ಸಫ್ವಾನ್‌ ಅಲಿಯಾಸ್‌‍ ಚೋಪು ಸಫ್ವಾನ್‌, ನಿಯಾಜ್‌ ಅಲಿಯಾಸ್‌‍ ನಿಯಾ, ಮೊಹಮದ್‌ ಮುಸಮಿರ್‌ ಅಲಿಯಾಸ್‌‍ ಮೊಹಮದ್‌ ಅಲಿಯಾಸ್‌‍ ಮುಜಮಿಲಸ್ತ್‌ ನೊವಾಸ್‌‍ ಅಲಿಯಾಸ್‌‍ ನೊವಾಸ್‌‍ಅಲಿಸ್ತ್‌, ವಮನದ್‌ ಅಲಿಯಾಸ್‌‍ ನೊವಾಸ್‌‍ ಅಲಿಸ್ತ್‌, ನೌಶಾದ್‌ ಅಲಿಯಾಸ್‌‍ ಚೋಟು ಎಂಬಾತನೊಂದಿಗೆ ಭಯೋತ್ಪಾದನಾ ಸಂಚು ರೂಪಿಸಿದ್ದನು.

ಅಬ್ದುಲ್‌ ಸಫ್ವಾನ್‌ ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ ಮತ್ತು ಪಿಎಫ್‌ಐನ ಮಾಜಿ ಸದಸ್ಯನಾಗಿದ್ದಾನೆ. ಆರೋಪಿ ಆದಿಲ್‌ ಮಹರೂಫ್‌ ಅಲಿಯಾಸ್‌‍ ಆದಿಲ್‌ ಹಣ ಪಾವತಿಸುವ ಭರವಸೆ ಮೇಲೆ ಇತರ ಆರೋಪಿಗಳನ್ನು ನೇಮಿಸಿಕೊಳ್ಳಲು ಹಣ ನೀಡಿದ್ದ ಎಂದು ಎನ್‌ಐಎ ಹೇಳಿದೆ.

ಕಲಂದರ್‌ ಶಫಿ ಅಲಿಯಾಸ್‌‍ ಮಂದೆ ಶಫಿ, ಎಂ.ನಾಗರಾಜ ಅಲಿಯಾಸ್‌‍ ನಾಗ ಅಲಿಯಾಸ್‌‍ ಅಪ್ಪು, ರಂಜಿತ್‌, ಮಹಮದ್‌ ರಿಜ್ವಾನ್‌ ಅಲಿಯಾಸ್‌‍ ರಿಜ್ಜು, ಅಜರುದ್ದೀನ್‌ ಅಲಿಯಾಸ್‌‍ ಅಜರ್‌ ಅಲಿಯಾಸ್‌‍ ಅಜ್ಜು ಮತ್ತು ಅಬ್ದುಲ್‌ ಖಾದರ್‌ ಅಲಿಯಾಸ್‌‍ ನೌಫಲ್‌ ಸೇರಿದಂತೆ ಐವರು ಆರೋಪಿಗಳನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಬಂಧಿತ ಮತ್ತೊಬ್ಬ ಆರೋಪಿ ಅಬ್ದುಲ್‌ ರಜಾಕ್‌ ವಿರುದ್ಧ ತನಿಖೆ ನಡೆಯುತ್ತಿದೆ.

ದಕ್ಷಿಣ ಕನ್ನಡದ ಬಜ್ಪೆಯ ಕಿನ್ನಿಪದವು ಜಂಕ್ಷನ್‌ ಬಳಿ 2025ರ ಮೇ 1ರಂದು ಸುಹಾಸ್‌‍ ಶೆಟ್ಟಿ ಹತ್ಯೆಯಾಗಿತ್ತು. ಹಿಂದೂ ಕಾರ್ಯಕರ್ತ, ಬಜರಂಗ ದಳದ ಸದಸ್ಯ ಸುಹಾಸ್‌‍ ಶೆಟ್ಟಿ ಕಾರನ್ನು ಪಿಕಪ್‌ ಟ್ರಕ್‌ನಿಂದ ಹೊಡೆದು ಅಟ್ಟಿಸಿಕೊಂಡು ಹೋದ ದುಷ್ಕರ್ಮಿಗಳು, ಚೂರಿ, ಕತ್ತಿ ಸಹಿತ ಬರ್ಬರವಾಗಿ ಕೊಂದಿದ್ದರು. ಇತರೇ 5 ಸಹಚರರಲ್ಲಿ ಒಬ್ಬರು ಗಾಯಗೊಂಡಿದ್ದರು.

ಬಜರಂಗ ದಳದ ಜಾತ್ಯತೀತ ಕಾರ್ಯಕರ್ತರಾಗಿ ಗೋರಕ್ಷಣೆ, ಲವ್‌ ಜಿಹಾದ ವಿರುದ್ಧ ಹೋರಾಗಳನ್ನು ಮಾಡಿಕೊಂಡ ಸುಹಾಸ್‌‍, 2022ರ ಜುಲೈ 28ರಂದು ಸುರತ್ಕಲ್‌ನಲ್ಲಿ ಮೊಹಮದ್‌ ಫಝಿಲ್‌ ಕೊಲೆಯ ಮುಖ್ಯ ಆರೋಪಿಯಾಗಿ ಜೈಲಿನಿಂದ ಬೇಲ್‌ ಮೇಲೆ ಬಿಡುಗಡೆಯಾಗಿದ್ದರು. ಫಝಿಲ್‌ ಕೊಲೆಯು ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್‌ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿತ್ತು. ಈ ಸುದೀರ್ಘ ಸಂಘರ್ಷದಲ್ಲಿ ಗುರಿಯಾಗಿದ್ದು ಸುಹಾಸ್‌‍.
ಈ ಪ್ರಕರಣ ಸಂಬಂಧ ಎನ್‌ಐಎ ಈವರೆಗೂ ಅಬ್ದುಲ್‌ ಸಫ್ವಾನ್‌, ನಿಯಾಜ್‌, ಮೊಹಮದ್‌ ಮುಝಮಿಲ್‌, ಕಲಂದರ್‌ ಶಾಫಿ, ಮೊಹಮದ್‌ ರಿಜ್ವಾನ್‌, ರಂಜಿತ್‌ ಹಾಗೂ ನಾಗರಾಜ್ನನ್ನ ಬಂಧಿಸಿದ್ದಾರೆ. ಈ ವೇಳೆ ಸುಹಾಸ್‌‍ ಕೊಲೆಯಲ್ಲಿ ಒಂಬತ್ತು ಜನ ಶಾಮೀಲಾಗಿರುವುದು ಗೊತ್ತಾಗಿದೆ.

ತನಿಖೆ ಆರಂಭಿಸಿದ ಪೊಲೀಸರಿಗೆ 2023ರ ಪ್ರಕರಣವೊಂದರ ಲಿಂಕ್‌ ಇರುವುದು ಗೊತ್ತಾಗಿತ್ತು. ಅದುವೇ ಸಫ್ವಾನ್‌ ಹಾಗೂ ಸುಹಾಸ್‌‍ ಶೆಟ್ಟಿಯ ಆಪ್ತನ ನಡುವಿನ ಗಲಾಟೆ. ಸಫ್ವಾನ್‌ ಎಂಬಾತನ ಜತೆಗೆ ಸುಹಾಸ್‌‍ ಶೆಟ್ಟಿ ಆಪ್ತ ಪ್ರಶಾಂತ್‌ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ವಿಚಾರಕ್ಕೆ ಮಾತುಕತೆ ನಡೆಸೋದಕ್ಕೆ ಸಫ್ವಾನ್ನನ್ನು ಕರೆದಿದ್ದ. ಮಾತಾನಾಡುವುದಕ್ಕೆ ಎಂದು ಕರೆದ ಪ್ರಶಾಂತ್‌ ಹಾಗೂ ಗ್ಯಾಂಗ್‌ 2023ರ ಸೆಪ್ಟೆಂಬರ್ನಲ್ಲಿ ಸಫ್ವಾನ್ಗೆ ಡ್ರ್ಯಾಗನರ್ನಿಂದ ಇರಿದಿತ್ತು. ಬಳಿಕ ಚೂರಿ ಇರಿತಕ್ಕೆ ಒಳಗಾದ ಸಫ್ವಾನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಚೂರಿ ಇರಿತ ಪ್ರಕರಣ ಬಳಿಕ ಸಫ್ವಾನ್‌ ಹಾಗೂ ಪ್ರಶಾಂತ್‌ ನಡುವೆ ದ್ವೇಷ ಹುಟ್ಟಿಸಿತ್ತು.

ಪ್ರಶಾಂತ್‌ ಬದಲು ಸುಹಾಸ್‌‍ ಹತ್ಯೆ!
ಹಲ್ಲೆಗೆ ಪ್ರತಿಯಾಗಿ ಪ್ರಶಾಂತ್‌ ಮೇಲೆ ದಾಳಿ ಮಾಡುವುದಕ್ಕೆ ಸಫ್ವಾನ್‌ ಅನೇಕ ಬಾರಿ ಸಂಚು ಹೂಡಿದ್ದ. ಈ ವೇಳೆ ಪ್ರಶಾಂತ್ಗೆ ಬೆಂಬಲವಾಗಿ ನಿಂತಿದ್ದು ಸುಹಾಸ್‌‍ ಶೆಟ್ಟಿ. ಇದೇ ವಿಚಾರಕ್ಕೆ ಪ್ರಶಾಂತ್‌ ಮೇಲಿನ ಸಫ್ವಾನ್‌ ಸಂಘರ್ಷ, ಸುಹಾಸ್‌‍ ಶೆಟ್ಟಿ ಕಡೆಗೆ ತಿರುಗಿತ್ತು. ಹೀಗಾಗಿಯೇ ಪ್ರಶಾಂತ್ನನ್ನು ಬಿಟ್ಟ ಸಫ್ವಾನ್‌, ಸುಹಾಸ್‌‍ ಹತ್ಯೆಗೆ ಸ್ಕೆಚ್‌ ಹಾಕಿದ್ದ. ಒಂದಷ್ಟು ಕ್ರಿಮಿನಲ್‌ಗಳ ಜೊತೆ ಸೇರಿ ಸಂಚು ರೂಪಿಸಿದ್ದ. ಅದರಂತೆ ಮಿನಿ ಕಂಟೇನರ್‌ ಚಲಾಯಿಸಿದ್ದ ಸಫ್ವಾನ್‌, ಸುಹಾಸ್‌‍ ಕಾರಿಗೆ ಗುದ್ದಿದ್ದ. ಬಲಿಕ ಮುಝಮಿಲ್‌ ಎಂಬಾತ ಚಲಾಯಿಸಿಕೊಂಡು ಬಂದ ಸ್ವಿಫ್ಟ್ ಕಾರಿನಲ್ಲಿದ್ದ ಹಂತಕರು, ನಟ್ಟ ನಡುರಸ್ತೆಯಲ್ಲೇ ಸುಹಾಸ್‌‍ನನ್ನು ಕೊ ೆಮಾಡಿದ್ದರು.

- Advertisement -
RELATED ARTICLES

Latest News