Wednesday, July 9, 2025
Homeರಾಜ್ಯಉಗ್ರರಿಗೆ ಸಿಮ್‌ ನೀಡಿದ್ದ ಯುವಕನಿಗೆ ಎನ್‌ಐಎ ನೋಟೀಸ್‌‍

ಉಗ್ರರಿಗೆ ಸಿಮ್‌ ನೀಡಿದ್ದ ಯುವಕನಿಗೆ ಎನ್‌ಐಎ ನೋಟೀಸ್‌‍

NIA notice to youth who gave SIM

ಕೋಲಾರ, ಜು. 9- ಉಗ್ರರಿಗೆ ಮೊಬೈಲ್‌ ಜತೆಗೆ ನೆರವು ನೀಡಿದ ಮೂವರನ್ನು ವಶಕ್ಕೆ ಪಡೆದ ಎನ್‌ಐಎ ಈಗ ಸಿಮ್‌ ನೀಡಿದ್ದ ಕೋಲಾರ ಮೂಲದ ಯುವಕನಿಗೆ ನೋಟೀಸ್‌‍ ಜಾರಿ ಮಾಡಿದೆ.
ಬೆಂಗಳೂರಿನ ವೈಟ್‌ಫೀಲ್‌್ಡನ ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂಲತಃ ಕೋಲಾರದ ಭಟ್ರಹಳ್ಳಿ ಗ್ರಾಮದ ಸತೀಶ್‌ಗೆ ಈಗ ಸಂಕಷ್ಟ ಎದುರಾಗಿದೆ.

ಕಳೆದ ರಾತ್ರಿ ಎನ್‌ಐಎ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿದ್ದು, ಸತೀಶ್‌ ಇಲ್ಲದ ಕಾರಣ ಅವರ ಮನೆಯವರಿಗೆ ನೋಟಿಸ್‌‍ ನೀಡಲಾಗಿದೆ.ಇಂದು ಬೆಳಗ್ಗೆ 10 ಗಂಟೆಯೊಳಗೆ ಬೆಂಗಳೂರಿನ ಎನ್‌ಐಎ ಕಚೇರಿಗೆ ಹಾಜರಾಗಬೇಕೆಂದು ತಿಳಿಸಲಾಗಿತ್ತು. ಆದರೆ, ಈವರೆಗೂ ಆತನ ಸುಳಿವಿಲ್ಲ ಎಂದು ಮೂಲಗಳು ತಿಳಿಸಿವೆ.

ಘಟನೆ ಚುರುಕು ಪಡೆಯುತ್ತಿದ್ದಂತೆ ಸರಿಯಾದ ದಾಖಲೆ ಪಡೆಯದೆ ಸಿಮ್‌ ನೀಡಿದವರಿಗೂ ಸಂಕಷ್ಟ ಎದುರಾಗಿದ್ದು, ಪ್ರಸ್ತುತ ಸತೀಶ್‌ನ ಹುಡುಕಾಟ ನಡೆಸಲಾಗಿದೆ. ಸತೀಶ್‌ ಭಟ್ರಹಳ್ಳಿಯ ಅತ್ತೆ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ.

RELATED ARTICLES

Latest News