Sunday, October 6, 2024
Homeರಾಜ್ಯಉಗ್ರರ ವಿರುದ್ಧ ಕಾರ್ಯಾಚರಣೆ, 5 ರಾಜ್ಯಗಳ 22 ಕಡೆ ಎನ್‌.ಐ.ಎ. ದಾಳಿ

ಉಗ್ರರ ವಿರುದ್ಧ ಕಾರ್ಯಾಚರಣೆ, 5 ರಾಜ್ಯಗಳ 22 ಕಡೆ ಎನ್‌.ಐ.ಎ. ದಾಳಿ

NIA raids 22 locations across 5 states in connection with Terror-Funding case involving Jaish-e-Mohammad

ಬೆಂಗಳೂರು,ಅ.5- ಭಯೋತ್ಪಾದನಾ ಸಂಘಟನೆ ಗಳಿಗೆ ಸಂಪನೂಲ ಒದಗಿಸುತ್ತಿರುವ ಉಗ್ರರ ವಿರುದ್ಧ ಮಹತ್ವದ ಕಾರ್ಯಾಚರಣೆ ನಡೆಸಿರುವ ಎನ್‌ಐಎ ಜಮು-ಕಾಶೀರ, ಮಹಾರಾಷ್ಟ್ರ ಸೇರಿದಂತೆ 5 ರಾಜ್ಯಗಳ 22 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಹಲವರನ್ನು ಬಂಧಿಸಿದೆ.

ಭಯೋತ್ಪಾದಕ ಸಂಘಟನೆ ಜೈಶ್‌-ಎ ಮಹಮದ್‌ನೊಂದಿಗೆ ಸಂಪರ್ಕ ಹೊಂದಿರುವ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ. ಛತ್ರಪತಿ ಸಂಬಾಜಿ ನಗರದಲ್ಲಿ ಒಬ್ಬನನ್ನು, ಮತ್ತೊಬ್ಬನನ್ನು ಮಾಲೆಂಗಾವ್‌ನಲ್ಲಿ ಮತ್ತು ಜಿಲ್ನಾ ಜಿಲ್ಲೆಯಲ್ಲಿ ಇಬ್ಬರು ಶಂಕಿತರನ್ನು ಎನ್‌ಐಎ ಬಂಧಿಸಿದೆ.

ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಈ ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಸಮರ ಸಾರಿರುವ ಎನ್‌ಐಎ ದೆಹಲಿ, ಉತ್ತರಪ್ರದೇಶ ಮತ್ತು ಅಸ್ಸಾಂನಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಈ ಸಂಘಟನೆಗಳಿಗೆ ಸಂಬಂಧಿಸಿದ ಹಲವರನ್ನು ಬಂಧಿಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಈ ವರ್ಷಾಂತ್ಯದಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ತೀವ್ರ ಕುತೂಹಲ ಪಡೆದುಕೊಂಡಿದೆ. ಬಂಧಿತ ಶಂಕಿತರ ವಿಚಾರಣೆ ತೀವ್ರಗೊಂಡಿದೆ.

ಜಮು-ಕಾಶೀರದಲ್ಲಿ ಈಗಾಗಲೇ ವಿಧಾನಸಭೆ ಚುನಾವಣೆ ನಡೆದಿದ್ದು, ಅ.8 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಬೆನ್ನಲ್ಲೇ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಸಂಪನೂಲ ಒದಗಿಸುವ ಸಂಘಟನೆ ಮೇಲೆ ಎನ್‌ಐಎ ದಾಳಿ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.

RELATED ARTICLES

Latest News