ಮುಂಬೈ,ಡಿ.9- ಐಸಿಸ್ ಭಯೋತ್ಪಾದನಾ ಘಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಭಯೋತ್ಪಾದನಾ ನಿಗ್ರಹ ದಳ ಇಂದು ಬೆಳಗ್ಗೆ ಮಹಾರಾಷ್ಟ್ರದ 40 ಸ್ಥಳಗಳಲ್ಲಿ ದಾಳಿ ನಡೆಸಿ 13 ಜನರನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಕರ್ನಾಟಕದ ಮತ್ತೊಂದು ಸ್ಥಳದ ಮೇಲೂ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಕಾರಿಗೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ, ಒಂದೇ ಕುಟುಂಬದ ಐವರ ಸಾವು
ಮಹಾರಾಷ್ಟ್ರದಲ್ಲಿ ಥಾಣೆ, ಪುಣೆ, ಮೀರಾ ಭಯಂದರ್ ಸೇರಿದಂತೆ 40 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಸ್ಥಳಗಳಲ್ಲಿ ಹೆಚ್ಚಿನವು ಥಾಣೆ ಗ್ರಾಮಾಂತರ (31) ಮತ್ತು ಥಾಣೆ ನಗರದಲ್ಲಿ (9), ಮುಂಬೈನ ಪಕ್ಕದಲ್ಲಿದೆ. ಪುಣೆಯಲ್ಲಿ, ಎರಡು ಸ್ಥಳಗಳಲ್ಲಿ ಮತ್ತು ಮೀರಾ ಭಯಂದರ್‍ನಲ್ಲಿ ಒಂದು ಸ್ಥಳದ ಮೇಳೆ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸ್ಪೋಟಕಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿರುವ ಶಂಕಿತ ಆರೋಪಿ – ಆಕಿಫ್ ಅತೀಕ್ ನಾಚನ್ – ಕಳೆದ ಆಗಸ್ಟ್‍ನಲ್ಲಿ ಐಸಿಸ್ ಭಯೋತ್ಪಾದನಾ ಘಟಕದ ಪ್ರಕರಣದಲ್ಲಿ ಆರನೇ ಆರೋಪಿಯನ್ನಾಗಿ ಬಂಧಿಸಲಾಗಿತ್ತು.
ಮುಂಬೈನ ತಬಿಶ್ ನಾಸರ್ ಸಿದ್ದಿಕಿ, ಪುಣೆಯ ಜುಬೈರ್ ನೂರ್ ಮೊಹಮ್ಮದ್ ಶೇಖ್ ಅಲಿಯಾಸ್ ಅಬು ನುಸೈಬಾ ಮತ್ತು ಅದ್ನಾನ್ ಸರ್ಕಾರ್ ಮತ್ತು ಥಾಣೆಯ ಶಾರ್ಜೀಲ್ ಶೇಖ್ ಮತ್ತು ಜುಲಿಕರ್ ಅಲಿ ಬರೋಡಾವಾಲಾ ಅವರನ್ನು ಕಳೆದ ತಿಂಗಳು ಏಜೆನ್ಸಿ ಬಂಧಿಸಿತ್ತು. ಕರ್ನಾಟಕದ ಕೆಲ ಸ್ಥಳಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.