ನವದೆಹಲಿ,ಜೂ.11- ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ವೆಸ್ಟ್ ಇಂಡೀಸ್ ನ ಸ್ಟಾರ್ ಆಟಗಾರ ನಿಕೋಲಸ್ ಪೂರನ್ ಅವರು ಮುಂಬೈ ತಂಡದ ನಾಯಕರಾಗಿ ಆಯ್ಕೆ ಆಗಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್ ನ ಮುಂದಿನ ಸೀಸನ್ ನಲ್ಲಿ ನಿಕೋಲಸ್ ಪೂರನ್ ಅವರು ಮುಂಬೈ ನ್ಯೂಯಾರ್ಕ್ ತಂಡವನ್ನು ಮುನ್ನಡೆಸಲಿದ್ದಾರೆ. ಎಂಎಲ್‌ಸಿಯ ಚೊಚ್ಚಲ ಆವೃತ್ತಿಯಲ್ಲಿ ಮುಂಬೈ ತಂಡವು ಚಾಂಪಿಯನ್ ಪಟ್ಟಅಲಂಕರಿಸುವಲ್ಲಿ ನಿಕೋಲಸ್ ಪೂರನ್ ಮಹತ್ತರ ಪಾತ್ರ ವಹಿಸಿದ್ದರು. ಫೈನಲ್ ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಪೂರನ್ ಅಜೇಯ 137 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು.
ಜೂನ್ 13 ರಿಂದ ಎಂಎಲ್‌ಸಿ ಟೂರ್ನಿಯು ಆರಂಭಿಕ ಪಂದ್ಯದಲ್ಲಿ ಚಾಂಪಿಯನ್ ಮುಂಬೈ ತಂಡವು ಟೆಕ್ಸಸ್ ಸೂಪರ್ ಕಿಂಗ್‌್ಸ ತಂಡದ ಸವಾಲನ್ನು ಎದುರಿಸಲಿದೆ. ನಿಕೋಲಸ್ ಪೂರನ್ ಸಾರಥ್ಯದ ಮುಂಬೈ ನ್ಯೂಯಾರ್ಕ್ ತಂಡದಲ್ಲಿ ಕ್ವಿಂಟನ್ ಡಿ ಕಾಕ್, ಅಜಮತುಲ್ಲ ಒರ್ಮೆಜಯ್, ಕೈರಾನ್ ಪೋಲಾರ್ಡ್, ಟ್ರೆಂಟ್ ಬೌಲ್‌್ಟ , ರಶೀದ್ ಖಾನ್, ನವೀನ್ ಉಲ್ ಹಕ್‌ರಂತಹ ಅಂತಾರಾಷ್ಟ್ರೀಯ ಆಟಗಾರರು ಆಡಲಿದ್ದಾರೆ.
ನಿವೃತ್ತಿ ಘೋಷಣೆಗೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 29 ವರ್ಷದ ಆಟಗಾರ 61 ಏಕದಿನ ಹಾಗೂ 106 ಟಿ-20 ಪಂದ್ಯಗಳನ್ನು ಆಡಿದ್ದಾರೆ.