Thursday, November 21, 2024
Homeರಾಷ್ಟ್ರೀಯ | National2 ಕೋಟಿ ಮೌಲ್ಯದ ಡ್ರಗ್ಸ್ ಪ್ರಕರಣದಲ್ಲಿ ನೈಜಿರಿಯನ್ ಮಹಿಳೆ ಬಂಧನ

2 ಕೋಟಿ ಮೌಲ್ಯದ ಡ್ರಗ್ಸ್ ಪ್ರಕರಣದಲ್ಲಿ ನೈಜಿರಿಯನ್ ಮಹಿಳೆ ಬಂಧನ

ಥಾಣೆ, ಜು 20 (ಪಿಟಿಐ) ನಲವತ್ತು ವರ್ಷದ ನೈಜೀರಿಯಾ ಮಹಿಳೆಯ ಬಂಧನದೊಂದಿಗೆ, ನವಿ ಮುಂಬೈನಿಂದ 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮೆಫೆಡ್ರೋನ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜುಲೈ 16 ರಂದು, ಪೊಲೀಸರು ನವಿ ಮುಂಬೈನ ವಾಶಿಯಿಂದ ಇಬ್ಬರನ್ನು ಬಂಧಿಸಿ 1.04 ಕಿಲೋಗ್ರಾಂಗಳಷ್ಟು ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದ್ದರು ಅವರ ವಿರುದ್ಧ ನಾರ್ಕೋಟಿಕ್ ಡ್ರಗ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟೆನ್ಸಸ್ (ಎನ್‍ಡಿಪಿಎಸ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ನವಿ ಮುಂಬೈ ಪೊಲೀಸ್ ಅಪರಾಧ ವಿಭಾಗದ ಆಂಟಿ ನಾರ್ಕೋಟಿಕ್ ಸೆಲ್ (ಎಎನ್‍ಸಿ) ಹಿರಿಯ ಇನ್ಸ್‍ಪೆಕ್ಟರ್ ನೀರಜ್ ಚೌಧರಿ ತಿಳಿಸಿದ್ದಾರೆ.

ಪಾಲ್ಘರ್ ಜಿಲ್ಲೆಯ ನೈಗಾಂವ್‍ನಲ್ಲಿ ನೆಲೆಸಿರುವ ನೈಜೀರಿಯಾದ ಮಹಿಳೆಯೊಬ್ಬರಿಂದ ಕಳ್ಳಸಾಗಾಣಿಕೆಯನ್ನು ಸಂಗ್ರಹಿಸಿರುವುದಾಗಿ ಆರೋಪಿಗಳಿಬ್ಬರು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾರೆ. ನಂತರ ಎಎನ್‍ಸಿ ತಂಡ ಅಲ್ಲಿ ಬಲೆ ಬೀಸಿ ಮಹಿಳೆಯನ್ನು ಬಂಧಿಸಿ ಆಕೆಯಿಂದ 86.40 ಲಕ್ಷ ಮೌಲ್ಯದ 432 ಗ್ರಾಂ ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಮೂವರಿಂದ ವಶಪಡಿಸಿಕೊಂಡ ಒಟ್ಟು ಮೆಫಿಡ್ರೋನ್ ಮೌಲ್ಯ 2.87 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News