Friday, December 20, 2024
Homeರಾಜ್ಯಬಿ.ಎಲ್‌‍.ಸಂತೋಷ್‌ ಭೇಟಿ ಮಾಡಿದ ನಿಖಿಲ್‌ ಕುಮಾರಸ್ವಾಮಿ

ಬಿ.ಎಲ್‌‍.ಸಂತೋಷ್‌ ಭೇಟಿ ಮಾಡಿದ ನಿಖಿಲ್‌ ಕುಮಾರಸ್ವಾಮಿ

Nikhil Kumaraswamy Meet BL Santosh

ನವದೆಹಲಿ, ಡಿ.6- ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ನಂತರ ನವದೆಹಲಿಗೆ ಭೇಟಿ ನೀಡಿರುವ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್‌ ಕುಮಾರಸ್ವಾಮಿ ಅವರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌‍.ಸಂತೋಷ್‌ ಜೀ ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಸಂತೋಷ್‌ ಜೀ ಅವರಿಗೆ ಮಾಜಿ ಪ್ರಧಾನಮಂತ್ರಿ ಹೆಚ್‌.ಡಿ.ದೇವೇಗೌಡ ಅವರ ಜೀವನ – ಸಾಧನೆ ಕುರಿತ Furrows in a Field: The Unexplored Life of H.D. Deve Gowda (ಕನ್ನಡಲ್ಲಿ: ನೇಗಿಲ ಗೆರೆಗಳು) ಗ್ರಂಥ ನೀಡಿ ಆಶೀರ್ವಾದ ಪಡೆದುಕೊಂಡ ನಿಖಿಲ್‌ ಅವರು, ಉಪಚುನಾವಣೆ, ಆ ನಂತರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಹಲವು ಅಂಶಗಳನ್ನು ಅವರ ಗಮನಕ್ಕೆ ತಂದರು.

ಅಲ್ಲದೆ, ಚನ್ನಪಟ್ಟಣ ಚುನಾವಣೆಯ ಬಗ್ಗೆ ಸಂತೋಷ್‌ ಜೀ ಅವರು ಕೆಲ ಮಾಹಿತಿಗಳನ್ನು ನಿಖಿಲ್‌ ಅವರಿಂದ ಪಡೆದುಕೊಂಡರು ಹಾಗೂ ಮುಂದಿನ ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ನಿಖಿಲ್‌ ಅವರಿಗೆ ಮಹತ್ವದ ಸಲಹೆ ಸೂಚನೆ ಮಾರ್ಗದರ್ಶನ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿರುವ ನಿಖಿಲ್‌ ಕುಮಾರಸ್ವಾಮಿ ಅವರು, ದೆಹಲಿ ಭೇಟಿ ವೇಳೆ ಸಂತೋಷ್‌ ಜೀ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೆ. ಚನ್ನಪಟ್ಟಣ ಚುನಾವಣೆ ಕುರಿತಂತೆ ಕೆಲ ಮಾಹಿತಿ ಕೇಳಿ ಪಡೆದುಕೊಂಡರು. ನನ್ನ ರಾಜಕೀಯ ಬೆಳವಣಿಗೆ ಹಾಗೂ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಬಲಗೊಳಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರು ಎಂಬುದಾಗಿ ತಿಳಿಸಿದ್ದಾರೆ.

RELATED ARTICLES

Latest News