ನವದೆಹಲಿ,ಫೆ.1- ಹಿಂದಿನ ವರ್ಷಗಳಂತೆಯೇ 2025-26 ರ ಪೂರ್ಣ ಬಜೆಟ್‌ನ್ನು ಕಾಗದರಹಿತ ರೂಪದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. ಸಾಮಾನ್ಯವಾಗಿ ಈ ಹಿಂದೆ ಹಣಕಾಸು ಸಚಿವರು ಬಜೆಟ್ ಪುಸ್ತಕವನ್ನು ತಂದು ಓದುತ್ತಿದ್ದರು. 2019ರಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದ್ದ ಸೀತಾರಾಮನ್ ಬ್ರೀಫ್ಕೇಸ್ ಬಜೆಟ್ ಸಾಂಪ್ರದಾಯಕ್ಕೆ ಗುಡ್ ಬೈ ಹೇಳಿದ್ದರು.
2021ರಲ್ಲಿ ಕೋವಿಡ್ ಬಳಿಕ ಮೊದಲ ಬಾರಿ ಕಾಗದ ಪತ್ರಗಳನ್ನು ಬಿಟ್ಟು ಡಿಜಿಟಲ್ ಟ್ಯಾಬ್ ಲೆಟ್ ನಲ್ಲಿ ಬಜೆಟ್ ಮಂಡಿಸಿದ್ದರು. ಈ ಬಾರಿಯೂ ಬಜೆಟ್ ಭಾಷಣವನ್ನು ಪುಸ್ತಕದ ಬದಲಾಗಿ ಟ್ಯಾಬ್ ಲೆಟ್ ಹಿಡಿದುಕೊಂಡೆ ಮಂಡಿಸಿದ್ದರು.ಬೆಳಗ್ಗೆ ಸಂಸತ್ತಿನ ಹಣಕಾಸು ಸಚಿವಾಲಯ ಆವರಣದಲ್ಲಿ ನಿರ್ಮಲಾ ಸೀತಾರಾಮನ್ ಮತ್ತೊಮೆ ಸಾಂಪ್ರದಾಯಿಕ ಬಾಹಿ-ಖಾತಾ ಶೈಲಿಯ ಪೌಚ್‌ನಲ್ಲಿ ಸುತ್ತಿದ ಡಿಜಿಟಲ್ ಟ್ಯಾಬ್ಲೆಟ್‌ನ್ನು ಪ್ರದರ್ಶಿಸಿದರು.
ಬಿಳಿ ಬಣ್ಣದ ಒಡಿಶಾ ಪಟ್ಟಚಿತ್ರ ರೇಷೆ ಸೀರೆಯನ್ನು ಧರಿಸಿ, ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಹೋಗುವ ಮುನ್ನ ಅವರು ತಮ ಅಧಿಕಾರಿಗಳ ತಂಡದೊಂದಿಗೆ ತಮ ಕಚೇರಿಯ ಹೊರಗೆ ಸಾಂಪ್ರದಾಯಿಕ ಬ್ರೀಫ್ ಕೇಸ್ ನೊಂದಿಗೆ ಮಾಧ್ಯಮ ಪ್ರತಿನಿಧಿಗಳಿಗೆ ಪೋಸ್ ನೀಡಿದರು. ಬ್ರೀಫ್ಕೇಸ್ ನಂತರ ಬದಲಿಗೆ ಚಿನ್ನದ ಬಣ್ಣದ ರಾಷ್ಟ್ರೀಯ ಲಾಂಛನವನ್ನು ಹೊಂದಿರುವ ಕೆಂಪು ಕವರ್ ನೊಳಗೆ ಟ್ಯಾಬ್ಲೆಟ್ ನ್ನು ಭದ್ರತೆಯಿಂದ ಇರಿಸಲಾಗಿತ್ತು.
ಭಾರತದ ಮೊದಲ ಪೂರ್ಣ ಅವಧಿಯ ಮಹಿಳಾ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಜುಲೈ 2019 ರಲ್ಲಿ ಕೇಂದ್ರ ಬಜೆಟ್ ಪ್ರತಿಗಳನ್ನು ಸಾಗಿಸಲು ಬ್ರಿಟಿಷರ ಕಾಲದ ಬ್ರೀಫ್ ಕೇಸ್ ಗೆ ಬದಲು ಸಾಂಪ್ರದಾಯಿಕ ಬಹಿ-ಖಾತಾಕ್ಕೆ ವರ್ಗಾಯಿಸಿದ್ದರು. ನಂತರ 2021ರಲ್ಲಿ ತಮ ಭಾಷಣ ಮತ್ತು ಇತರ ಬಜೆಟ್ ದಾಖಲೆಗಳನ್ನು ಸಾಗಿಸಲು ಸಾಂಪ್ರದಾಯಿಕ ಪತ್ರಿಕೆಗಳನ್ನು ಡಿಜಿಟಲ್ ಟ್ಯಾಬ್ಲೆಟ್ನೊಂದಿಗೆ ಬದಲಾಯಿಸಿದರು. ಆ ಸಂಪ್ರದಾಯ ಇಂದಿಗೂ ಮುಂದುವರೆದಿದೆ.