ನವದೆಹಲಿ : ಪ್ರಧಾನಿ ನರೇಂದ್ರ ಮೋಧಿ ನೇತೈತ್ವದ ಎನ್ ಡಿಎ ಸರ್ಕಾರದ 2025-26 ನೇ ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸತತ ಎಂಟನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಈ ಹಿಂದೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಒಂಬತ್ತು ಬಾರಿ ಬಜೆಟ್ ಮಂಡಿಸಿದ್ದರು. ಹಾಗೆಯೇ ಪ್ರಣಬ್ ಮುಖರ್ಜಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಎಂಟು ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದರು. ಆದರೆ, ಇವರ್ಯಾರೂ ಸತತ ಎಂಟು ಬಾರಿ ಬಜೆಟ್ ಮಂಡಿಸಲಿರಲಿಲ್ಲ. ಇದೀಗ ಆ ದಾಖಲೆ ನಿರ್ಮಲಾ ಸೀತಾರಾಮನ್ ಪಾಲಾಗಿದೆ.
ಈ ಹಿಂದೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು ಒಟ್ಟು 10 ಬಾರಿ ಬಜೆಟ್ ಮಂಡಿಸಿದ್ದರು.ಮೊರಾರ್ಜಿ ದೇಸಾಯಿ ಹಣಕಾಸು ಸಚಿವರಾಗಿದ್ದಾಗ, 1959ರಿಂದ 1964ರವರೆಗೆ ಸತತ ಆರು ಬಾರಿ ಮತ್ತು 1967ರಿಂದ 1969ರ ಅವಧಿಯಲ್ಲಿ ನಾಲ್ಕು ಬಾರಿ ಬಜೆಟ್ ಮಂಡಿಸಿದ್ದರು.
ನಿರ್ಮಲಾ ಸೀತಾರಾಮನ್ 2020ರಲ್ಲಿ 2 ಗಂಟೆ 42 ನಿಮಿಷ ಬಜೆಟ್ ಓದಿ ಅತಿ ಹೆಚ್ಚು ಸಮಯದ ಬಜೆಟ್ ಮಂಡಿಸಿದ ದಾಖಲೆಯನ್ನೂ ಬರೆದಿದ್ದರು.2019ರಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ದೇಶದ ಮೊದಲ ಹಣಸಾಸು ಸಚಿವೆ ಎಂಬ ದಾಖಲೆ ಬರೆದರು.
2019ರಲ್ಲಿ ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾದ ಸಂದರ್ಭದಲ್ಲಿ 2019ರಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ದೇಶದ ಮೊದಲ ಪೂರ್ಣ ಪ್ರಮಾಣದ ಮಹಿಳಾ ವಿತ್ತ ಸಚಿವೆಯನ್ನಾಗಿ ನೇಮಕ ಮಾಡಿದ್ದರು. 2024ರಲ್ಲಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ ನಂತರವೂ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆಯಾಗಿ ಮುಂದುವರಿದಿದ್ದಾರೆ. ನಿರ್ಮಲಾ ಸೀತಾರಾಮನ್ ಈವರೆಗೆ ಒಟ್ಟು 7 ಪೂರ್ಣಪ್ರಮಾಣದ ಬಜೆಟ್ ಮಂಡಿಸಿದ್ದು, 2024ರ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಿದ್ದರು.
ಬಜೆಟ್ ಕುರಿತ ಕುತೂಹಲಕಾರಿ ಹೈಲೈಟ್ಸ್:
1)ಸ್ವಾತಂತ್ರ್ಯ ನಂತರ ಭಾರತದಲ್ಲಿ ಮೊದಲ ಬಜೆಟ್ ಮಂಡನೆಯಾಗಿದ್ದು, 1947ರ ನವೆಂಬರ್ 26ರಂದು. ದೇಶದ ಪ್ರಥಮ ವಿತ್ತ ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅಂದು ಬಜೆಟ್ ಮಂಡಿಸಿದ್ದರು.
2)ಅತೀ ಹೆಚ್ಚು ಬಜೆಟ್ ಮಂಡನೆ:
ದೇಶದಲ್ಲಿ ಅತೀ ಹೆಚ್ಚು ಬಜೆಟ್ ಗಳನ್ನು ಮಂಡಿಸಿದ ದಾಖಲೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿದೆ. ಅವರು ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದಾಗ ಒಟ್ಟು 10 ಬಜೆಟ್ ಗಳನ್ನು ಮಂಡಿಸಿದ್ದರು. ಮೊರಾರ್ಜಿ ದೇಸಾಯಿ ಅವರು 1959 ಫೆ.28ರಂದು ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದ್ದರು.
3)2ನೇ ಅತೀ ಹೆಚ್ಚು ಬಜೆಟ್ ಮಂಡನೆ:
ಮೊರಾರ್ಜಿ ದೇಸಾಯಿ ಅತೀ ಹೆಚ್ಚು ಬಜೆಟ್ ಮಂಡಿಸಿದ ಮೊದಲ ಮಾಜಿ ವಿತ್ತ ಸಚಿವರಾಗಿದ್ದು, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ 9 ಬಜೆಟ್ ಗಳನ್ನು ಮಂಡಿಸಿದ್ದು, ಅತೀ ಹೆಚ್ಚು ಬಜೆಟ್ ಮಂಡಿಸಿದ 2ನೇ ವ್ಯಕ್ತಿಯಾಗಿದ್ದಾರೆ. 1996ರ ಮಾರ್ಚ್ 19ರಂದು ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಸಂಪುಟದಲ್ಲಿದ್ದ ಪಿ.ಚಿದಂಬರಂ ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದ್ದರು. ನಂತರ ಕಾಂಗ್ರೆಸ್ ಮೈತ್ರಿಯ ಯುಪಿಎ ಸರ್ಕಾರದಲ್ಲಿ ಉಳಿದ ಬಜೆಟ್ ಗಳನ್ನು ಮಂಡಿಸಿದ್ದರು.
4)ಪ್ರಣಬ್ ಮುಖರ್ಜಿ:
ಮಾಜಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಎಂಟು ಬಾರಿ ಬಜೆಟ್ ಮಂಡಿಸಿದ್ದರು. 1982, 1983 ಮತ್ತು 1984ರಲ್ಲಿ ಐದು ಪೂರ್ಣಾವಧಿ ಬಜೆಟ್ ಮಂಡಿಸಿದ್ದು, 2009ರ ಫೆಬ್ರವರಿ ಮತ್ತು 2012ರ ಮಾರ್ಚ್ ನಲ್ಲಿ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದಾಗ ಎರಡು ಬಾರಿ ಬಜೆಟ್ ಮಂಡಿಸಿದ್ದರು.
5) ಮನಮೋಹನ್ ಸಿಂಗ್:
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 1991 ಮತ್ತು 1995ರ ನಡುವೆ ಐದು ಬಾರಿ ಬಜೆಟ್ ಮಂಡಿಸಿದ್ದರು. ಪ್ರಧಾನಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ವೇಳೆ ಸಿಂಗ್ ಬಜೆಟ್ ಮಂಡಿಸಿದ್ದರು.
6)ಬಜೆಟ್ ನ ದೀರ್ಘ ಭಾಷಣ:
2020ರ ಫೆಬ್ರವರಿ 1ರಂದು 2ಗಂಟೆ 40 ನಿಮಿಷಗಳ ಕಾಲ ದೀರ್ಘಾವಧಿಯ ಬಜೆಟ್ ಭಾಷಣ ಮಾಡುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆ ಬರೆದಿದ್ದರು. ಭಾಷಣ ಅರ್ಧಕ್ಕೆ ನಿಲ್ಲಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು.
6)ಬಜೆಟ್ ನ ದೀರ್ಘ ಭಾಷಣ:
2020ರ ಫೆಬ್ರವರಿ 1ರಂದು 2ಗಂಟೆ 40 ನಿಮಿಷಗಳ ಕಾಲ ದೀರ್ಘಾವಧಿಯ ಬಜೆಟ್ ಭಾಷಣ ಮಾಡುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆ ಬರೆದಿದ್ದರು. ಭಾಷಣ ಅರ್ಧಕ್ಕೆ ನಿಲ್ಲಿಸುವ ಮೊದಲು ಇನ್ನೂ ಎರಡು ಪುಟಗಳಷ್ಟು ಭಾಷಣ ಬಾಕಿ ಉಳಿದಿತ್ತು.
7) ಅತೀ ಚಿಕ್ಕ ಬಜೆಟ್ ಭಾಷಣ:
1977ರಲ್ಲಿ ಹಿರುಭಾಯ್ ಮುಲ್ಟಿಭಾಯ್ ಪಟೇಲ್ ಅವರು ಮಂಡಿಸಿದ್ದ ಮಧ್ಯಂತರ ಬಜೆಟ್ ಭಾಷಣ ಕೇವಲ 800 ಶಬ್ದ ಮಾತ್ರ. ಇದು ಅತ್ಯಂತ ಚಿಕ್ಕ ಬಜೆಟ್ ಭಾಷಣವಾಗಿದೆ.