ನವದೆಹಲಿ, ಮೇ 17 – ತಮ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ದಾಳಿಯ ವಿಷಯದ ಬಗ್ಗೆ ಮಾತನಾಡದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕಟುವಾಗಿ ಟೀಕಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಅವರು ನಾಚಿಕೆಯಿಲ್ಲದೆ ಆರೋಪಿ ಬಿಭವ್ ಕುಮಾರ್ ಅವರೊಂದಿಗೆ ತಿರುಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಎಪಿ ಸಂಚಾಲಕರು ಈ ವಿಷಯದ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.ಕೇಜ್ರಿವಾಲ್ ಅವರು ತಮ ಪಕ್ಷದ ಮಹಿಳಾ ಸಂಸದರ ಮೇಲಿನ ದಾಳಿಯ ಬಗ್ಗೆ ಒಂದು ಮಾತನ್ನೂ ಆಡದಿರುವುದು ನಂಬಲಾಗದ ಮತ್ತು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಬಿಜೆಪಿಯ ಹಿರಿಯ ನಾಯಕಿ, ದೆಹಲಿಯ ಲೋಕಸಭಾ ಅಭ್ಯರ್ಥಿ ಸೋಮನಾಥ್ ಭಾರ್ತಿ ಸೇರಿದಂತೆ ಹಲವು ಎಎಪಿ ನಾಯಕರ ವಿರುದ್ಧ ಮಹಿಳೆಯರ ಮೇಲಿನ ದಾಳಿಯ ಆರೋಪಗಳನ್ನು ಉಲ್ಲೇಖಿಸಿ, ಆಮ್ ಆದಿ ಪಾರ್ಟಿ ಮಹಿಳಾ ವಿರೋಧಿ ಪಕ್ಷವಾಗಿದೆ ಎಂದಿದ್ದಾರೆ.
ಎಎಪಿ ಸಂಸದ ಸಂಜಯ್ ಸಿಂಗ್ ಮಲಿವಾಲ್ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಒಂದು ದಿನದ ನಂತರ, ಆರೋಪಿ ಬಿಭವ್‌ಕುಮಾರ್ ಅವರು ಲಕ್ನೋದಲ್ಲಿ ಕೇಜ್ರಿವಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ ಎಂದು ಅವರು ಗಮನ ಸೆಳೆದರು.ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸೀತಾರಾಮನ್, ತಮ ಗರ್ಭಿಣಿ ಪತ್ನಿಯ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವ ಭಾರ್ತಿಗೆ ಗಾಂಧಿ ಕುಟುಂಬ ಸದಸ್ಯರು ಮತ ಹಾಕುತ್ತಾರೆ ಎಂದಿದ್ದಾರೆ.
ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್ ಅವರ ವೈಯಕ್ತಿಕ ಸಿಬ್ಬಂದಿಯೊಬ್ಬರು ತಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಲಿವಾಲ್ ಆರೋಪಿಸಿದ್ದು, ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಪ್ರಕರಣದಲ್ಲಿ ಕುಮಾರ್ ಅವರನ್ನು ಆರೋಪಿ ಎಂದು ಹೆಸರಿಸಿದ್ದಾರೆ.