ನವದೆಹಲಿ, ಫೆ.27: ಮಹಾತ್ಮಾ ಗಾಂಧಿ ಹಂತಕ ನಾಥರಾಮ್ ಗೋಡ್ಸೆಯನ್ನು ಹಾಡಿ ಹೊಗಳಿರುವ ಮಹಿಳೆಯೊಬ್ಬರಿಗೆ ಡೀನ್ ಸ್ಥಾನ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಗಾಂಧಿ ವಿರೋಧಿ ಎನ್‌ಐಟಿ-ಕ್ಯಾಲಿಕಟ್ ಪ್ರೊಫೆಸರ್ ಒಬ್ಬರನ್ನು ಡೀನ್ ಆಗಿ ನೇಮಕ ಮಾಡಿರುವುದಕ್ಕೆ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಇದು ಗಾಂಧಿಯನ್ನು ಸೂಕ್ತವಾಗಿ ಬಳಸಿಕೊಳ್ಳುವ, ಗೋಡ್ಲೆ ಯನ್ನು ವೈಭವೀಕರಿಸುವ ಮನಸ್ಥಿತಿಯ ಭಾಗವಾಗಿದೆ ಎಂದು ಹೇಳಿದೆ.
ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ-ಕ್ಯಾಲಿಕಟ್ (ಎನ್‌ಐಟಿ) ನಿರ್ದೇಶಕರು ಹೊರಡಿಸಿದ ಆದೇಶದಲ್ಲಿ, ಡಾ.ಶೈಜಾ ಎ ಅವರನ್ನು ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಡೀನ್ ಆಗಿ ಮಾರ್ಚ್ 7 ರಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ.
ಮಹಾತ್ಮ ಗಾಂಧಿಯವರ ಹುತಾತ್ಮ ದಿನದಂದು ನಾಥೋರಾಮ್ ಗೋಡ್ಲೆ ಯನ್ನು ಹೊಗಳಿದ ಆರೋಪದ ಮೇಲೆ ಅವರ ವಿರುದ್ಧ ಪೊಲೀಸ್ ಪ್ರಕರಣ ಬಾಕಿ 2.
ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಲೆ ಬಗ್ಗೆ ಹೆಮ್ಮೆ ಇದೆ ಎಂದು ಸಾರ್ವಜನಿಕವಾಗಿ ಹೇಳುವ ಕೇರಳದ ಪ್ರೊಫೆಸರ್ ಒಬ್ಬರನ್ನು ಮೋದಿ ಸರ್ಕಾರ ಎನ್‌ಐಟಿ-ಕ್ಯಾಲಿಕಟ್ ನಲ್ಲಿ ಡೀನ್ ಆಗಿ ಮಾಡಿದೆ.
ಕಲ್ಕತ್ತಾ ಹೈಕೋರ್ಟ್ ಮಾಜಿ ನ್ಯಾಯಾಧೀಶರು ಮಹಾತ್ಮ ಗಾಂಧಿ ಮತ್ತು ನಾಥೋರಾಮ್ ಗೋಡ್ಲೆ ನಡುವೆ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ ಮತ್ತು ಅವರು ಈಗ ಬಿಜೆಪಿ ಸಂಸದರಾಗಿದ್ದಾರೆ ಎಂದು ಅವರು ಹೇಳಿದರು. ಇದೆಲ್ಲವೂ ಮೋದಿ ಮನಸ್ಥಿತಿಯ ಒಂದು ಭಾಗವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.