ಮುಂಬೈ, ಜ.30-ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿ ಪ್ರಜೆಗಳು ಮತ್ತು ರೋಹಿಂಗ್ಯಾಗಳು ಪ್ರಮುಖ ಭದ್ರತಾ ಕಾಳಜಿ ಎಂದು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೇಳಿದ್ದಾರೆ.
ಇವರು ಸಮಾಜವನ್ನು ಇಸ್ಲಾಮೀಕರಣಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ,ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೆ ಅಕ್ರಮ ವಲಸಿಗರನ್ನು ಭಾರತದಲ್ಲಿ ಉಳಿಯಲು ಬಿಡಬಾರದು ಎಂದು ಒತ್ತಾಯಿಸಿದ್ದಾರೆ.
ಇದು ಮುಂಬೈ ಮತ್ತು ದೇಶಕ್ಕೆ ಗಂಭೀರ ಬೆದರಿಕೆಯಾಗಿದೆ,ನಗರ ಅಥವಾ ರಾಜ್ಯದ ಮೇಲೆ ಹಿಡಿತ ಸಾಧಿಸುವ ಪ್ರಯತ್ನವಾಗಿದೆ ಎಂದು ರಾಣೆ ಸುದ್ದಿಗಾರರಿಗೆ ತಿಳಿಸಿದರು. ಅಕ್ರಮ ಕ್ರಿಮಿ ಕೀಟಗಳನ್ನು ಕೂಡಲೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲಿ ಒಡಿಸನಬೇಕು ಬೇಕು,ನಮಗೆ ಇಲ್ಲಿ ಅಂತಹ ಕೊಳಕು ಬೇಡ ಎಂದು ಎಚ್ಚರಿಸಿದ್ದಾರೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದದಲ್ಲಿ ಕಸದ ರಾಶಿಗಳಿವೆ. ಅಲ್ಲಿ ಅಂತಹ ಕೊಳಕನ್ನು ಸುರಿಯುವುದು ಉತ್ತಮ. ಒಬ್ಬ ಬಾಂಗ್ಲಾದೇಶಿ ಅಥವಾ ರೋಹಿಂಗ್ಯಾಗಳು ಇಲ್ಲಿ ಉಳಿಯಬಾರದು ಎಂದು ಅವರು ಹೇಳಿದರು.
ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆಯನ್ನು ಟೀಕಿಸಿದ ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಹಿಂದುತ್ವವನ್ನು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್‌ನ ವಸ್ತ್ರ ಸಂಹಿತೆಯ ನಿರ್ಧಾರವನ್ನು ರಾಣೆ ಶ್ಲಾಘಿಸಿದರು, ಈ ನಿರ್ಧಾರವನ್ನು ಇತರ ದೇವಾಲಯಗಳು ಮೆಚ್ಚಬೇಕು ಮತ್ತು ಅನುಸರಿಸಬೇಕು ಎಂದು ಬಿಜೆಪಿ ಮುಖಂಡರು ಹೇಳಿದರು.
ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಮುಸ್ಲಿಂ ಲೀಗ್‌ಗೆ ಸಮನಾಗಿದೆ ಎಂದು ಟೀಕಿಸಿದರು.