ನವದೆಹಲಿ, ಜ.8– ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ತಮ ಆಲ್ ರೌಂಡ್ ಪ್ರದರ್ಶನದಿಂದ ಗಮನ ಸೆಳೆದಿದ್ದ ಆಂಧ್ರಪ್ರದೇಶದ ನಿತೀಶ್ ಕುಮಾರ್ ರೆಡ್ಡಿ ಅವರು ರಣಜಿ ಟೂರ್ನಿ ಆಡಲು ಸಜ್ಜಾಗಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಮೂಲಕ ಆಂಧ್ರಪ್ರದೇಶ ಪರ ರಣಜಿ ಟೂರ್ನಿಯಲ್ಲಿ ತಮ ಆಲ್ ರೌಂಡರ್ಝಲಕ್ ಪ್ರದರ್ಶಿಸಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ನಿತೀಶ್ ಕುಮಾರ್ ರೆಡ್ಡಿ , ಮೆಲ್ಬೋರ್ನ್ ನಲ್ಲಿ ಟೆಸ್ಟ್ ನಲ್ಲಿ ಚೊಚ್ಚಲ ಶತಕ ಸಂಭ್ರಮ ಕಂಡಿದ್ದಾರೆ.
ರಣಜಿ ಟೂರ್ನಿಯ ದ್ವಿತೀಯ ಹಂತದಲ್ಲಿ ಜನವರಿ 23 ರಿಂದ ಪುದುಚೇರಿ ಹಾಗೂ ಜನವರಿ 30 ರಿಂದ ರಾಜಸ್ಥಾನ ವಿರುದ್ಧ ಆಂಧ್ರಪ್ರದೇಶ ಪೈಪೋಟಿ ನಡೆಸಲಿದ್ದು , ಈ ಪಂದ್ಯಗಳಲ್ಲಿ ನಿತೀಶ್ ಕುಮಾರ್ ರೆಡ್ಡಿ ಆಡಲು ಸಜ್ಜಾಗಿದ್ದಾರೆ.
ವಿಜಯ್ ಹಜಾರೆ ಟ್ರೋಫಿಗೆ ಸ್ಟಾರ್ ಆಟಗಾರರ ಕಮ್ಬ್ಯಾಕ್: ಪ್ರಸಕ್ತ ನಡೆಯುತ್ತಿರುವ ಪ್ರತಿಷ್ಠಿತ ದೇಶಿ ಕ್ರಿಕೆಟ್ ವಿಜಯ್ ಹಜಾರೆಗೆ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ವೇಗಿ ಪ್ರಸಿದ್‌್ಧ ಕೃಷ್ಣ , ದೇವದತ್ ಪಡಿಕ್ಕಲ್, ತಮಿಳುನಾಡಿನ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಮರಳಿ ಸ್ಥಾನ ಪಡೆದಿದ್ದಾರೆ.