ನವದೆಹಲಿ,ಫೆ.1- ಆದಾಯ ತೆರಿಗೆ, ವೃತ್ತಿ ತೆರಿಗೆ ಸೇರಿದಂತೆ ನೇರ ಹಾಗೂ ಪರೋಕ್ಷ ತೆರಿಗೆ ಪದ್ಧತಿಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಘೋಷಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನವೋದ್ಯಮಗಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಬಾಕಿ ಪ್ರಕರಣಗಳಿಗೆ ಮಹತ್ವದ ಕೊಡುಗೆಗಳನ್ನು ಘೋಷಿಸಿದ್ದಾರೆ. ಜೊತೆಗೆ ತೆರಿಗೆದಾರರ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ಭರವಸೆ ನೀಡಿದ್ದಾರೆ.
ಸಂಸತ್‍ನಲ್ಲಿ ಬಜೆಟ್ ಮಂಡಿಸಿದ ಅವರು, ಕಳೆದ 10 ವರ್ಷಗಳಲ್ಲಿ ನೇರ ತೆರಿಗೆ ಸಂಗ್ರಹಣೆ ಮೂರು ಪಟ್ಟು ಹೆಚ್ಚಾಗಿದೆ. ತೆರಿಗೆ ಪಾವತಿದಾರರು 2.4 ರಷ್ಟು ಹೆಚ್ಚಿದ್ದಾರೆ. ತೆರಿಗೆದಾರರ ಹಣವನ್ನು ಅತ್ಯಂತ ಬುದ್ಧಿವಂತಿಕೆಯಿಂದ ದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಬಳಕೆ ಮಾಡಲಾಗುತ್ತಿದೆ. ತೆರಿಗೆದಾರರ ಬೆಂಬಲವನ್ನು ನಾನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.
ಸರ್ಕಾರ ಈಗಾಗಲೇ ತೆರಿಗೆ ದರಗಳನ್ನು ಕಡಿಮೆ ಮಾಡಿದ್ದು ಮತ್ತು ತರ್ಕಬದ್ಧಗೊಳಿಸಿದೆ. ಹೊಸ ತೆರಿಗೆ ಯೋಜನೆಯಡಿ 7 ಲಕ್ಷದವರೆಗೂ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಇದನ್ನು 2013-14 ರಲ್ಲಿ 2.2 ಲಕ್ಷ ಮಿತಿಗೊಳಿಸಲಾಗಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.
ಚಿಲ್ಲರೆ ವ್ಯಾಪಾರಸ್ಥರ ತೆರಿಗೆ ಮಿತಿಯನ್ನು 2 ರಿಂದ 3 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ವೃತ್ತಿನಿರತರ ತೆರಿಗೆ ಮಿತಿಯನ್ನು 50 ರಿಂದ 70 ಲಕ್ಷ ರೂ.ಗಳಿಗೆ ಏರಿಸಿದರೆ ಕಾರ್ಪರೇಟ್ ತೆರಿಗೆಯನ್ನು ಶೇ.30 ರಿಂದ ಶೇ.22 ಕ್ಕೆ ಇಳಿಸಲಾಗಿದೆ. ಚಾಲ್ತಿಯಲ್ಲಿರುವ ದೇಶೀಯ ಕಂಪನಿಗಳು ಶೇ.15 ರಷ್ಟು ಅನುಕೂಲ ಪಡೆಯಲಿವೆ ಎಂದು ಹೇಳಿದ್ದಾರೆ.
ಕಳೆದ 5 ವರ್ಷಗಳಲ್ಲಿ ತೆರಿಗೆದಾರರಿಗೆ ನೀಡಲಾಗುವ ಸೇವೆಯನ್ನು ಉತ್ತಮಗೊಳಿಸಲು ಆದ್ಯತೆ ನೀಡಲಾಗಿದೆ. ವಯೋವೃದ್ಧರಿಗಾಗಿ ನ್ಯಾಯವ್ಯಾಪ್ತಿ ಆಧಾರಿತ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಹಿರಿಯ ನಾಗರಿಕರು ಖುದ್ದು ಹಾಜರಾತಿ ಇಲ್ಲದೆ ಮೇಲ್ಮನವಿಗಳ ಸಲ್ಲಿಕೆ ಹಾಗೂ ಮೌಲ್ಯಮಾಪನ ಮನವಿಗಳನ್ನು ಮಾಡಬಹುದು. ಇದು ತೆರಿಗೆ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಿದೆ. ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಸಿಂಧುಗೊಳಿಸಿದೆ ಎಂದು ತಿಳಿಸಿದ್ದಾರೆ.
40 ಸಾವಿರ ಸಾಮಾನ್ಯ ರೈಲು ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತನೆ
ಹೊಸದಾಗಿ ಪರಿಚಯಿಸಲಾದ 26 ಎಎಸ್ ಅರ್ಜಿ ನಮೂನೆ ತೆರಿಗೆ ಪಾವತಿಯ ಪೂರ್ವ ಭರ್ತಿಯನ್ನು ಸರಳೀಕರಣಗೊಳಿಸಿದೆ. 2013-14 ರಲ್ಲಿ ತೆರಿಗೆ ಮರುಪಾವತಿಯ ಅವ 93 ದಿನಗಳಷ್ಟಿತ್ತು. ಪ್ರಸ್ತುತ ಅದು 10 ದಿನಗಳಿಗೆ ಕಡಿತಗೊಂಡಿದ್ದು, ತೆರಿಗೆದಾರರಿಗೆ ಮರು ಪಾವತಿ ಸೌಲಭ್ಯ ಶೀಘ್ರವಾಗಿ ದೊರೆಯಲಿದೆ ಎಂದು ಹೇಳಿದ್ದಾರೆ.
ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ತಾವು ಹೊಸದಾಗಿ ಯಾವುದೇ ತೆರಿಗೆ ಪ್ರಸ್ತಾವನೆಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹೆಚ್ಚುವರಿ ತೆರಿಗೆಗಳಿಲ್ಲದೆ ಹಿಂದಿನ ತೆರಿಗೆ ಪದ್ಧತಿಗಳನ್ನೇ ಮುಂದುವರೆಸಲಾಗುತ್ತಿದೆ. ನೇರ ಹಾಗೂ ಪರೋಕ್ಷ ತೆರಿಗೆಗಳು, ಆಮದು ಶುಲ್ಕಗಳು ಎಂದಿನಂತೆ ಚಾಲ್ತಿಯಲ್ಲಿರಲಿವೆ ಎಂದು ಹೇಳಿದ್ದಾರೆ.
ಆದಾಗ್ಯೂ ನವೋದ್ಯಮಗಳಿಗೆ ನಿರ್ದಿಷ್ಟವಾದ ತೆರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಾರ್ವಭೌಮ ಸಂಪತ್ತಿನ ಹೂಡಿಕೆ ಮತ್ತು ಪಿಂಚಣಿ ನಿಗೆ ಹಾಗೂ ಸೀಮಿತ ಆದಾಯದಾರರಿಗೆ ದೊರೆಯುತ್ತಿದ್ದ ಐಎಫ್‍ಎಸ್‍ಸಿ ಆಧಾರಿತ ತೆರಿಗೆ ವಿನಾಯಿತಿ ಸೌಲಭ್ಯ ಈ ವರ್ಷದ 31 ಕ್ಕೆ ಮುಕ್ತಾಯಗೊಳ್ಳುತ್ತಿದೆ. ಅದನ್ನು ಮುಂದಿನ ವರ್ಷದ ಮಾರ್ಚ್ 31 ರವರೆಗೂ ವಿಸ್ತರಿಸುವುದಾಗಿ ಹೇಳಿದ್ದಾರೆ.
ನಮ್ಮ ಸರ್ಕಾರ ಜೀವನ ಮಟ್ಟ ಸುಧಾರಣೆ ಹಾಗೂ ವ್ಯವಹಾರಿಕ ಸರಳೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಹೀಗಾಗಿ ತೆರಿಗೆ ಪಾವತಿದಾರರ ಸೇವೆಗಳನ್ನು ಮತ್ತಷ್ಟು ಉತ್ತಮಗೊಳಿಸುವುದಾಗಿ ಘೋಷಿಸುತ್ತೇನೆ ಎಂದಿದ್ದಾರೆ. 1962 ರಿಂದಲೂ ಬಾಕಿ ಉಳಿದಿರುವ ಸಣ್ಣ, ಪರಿಶೀಲನೆಗೊಳಪಡದ, ಪರಿಗಣನೆಯಿಂದ ಹೊರತಾಗುಳಿದ ಹಾಗೂ ವಿವಾದಿತ ತೆರಿಗೆದಾರರ ಬೇಡಿಕೆಗಳನ್ನು ಪರಿಷ್ಕರಿಸಲಾಗಿದೆ. ಅತೀ ದೊಡ್ಡ ಸಂಖ್ಯೆಯಲ್ಲಿರುವ ಈ ವಲಯದ ಲೆಕ್ಕಪತ್ರಗಳನ್ನು ಮುಂದುವರೆಸುತ್ತಿರುವುದು ಅನಗತ್ಯವಾದ ಹೊರೆಯಾಗಿದೆ ಮತ್ತು ಪ್ರಾಮಾಣಿಕ ತೆರಿಗೆದಾರರ ಆತಂಕಕ್ಕೂ ಕಾರಣವಾಗಿದೆ. ನೂರಾರು ವರ್ಷಗಳ ಮರುಪಾವತಿಗೂ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ.
ವಿಕಸಿತ ಭಾರತ ನಿರ್ಮಿಸುವತ್ತ ಗಮನ ಹರಿಸಿದ್ದೇವೆ : ನಿರ್ಮಲಾ
ಈ ಹಿನ್ನೆಲೆಯಲ್ಲಿ ನೇರ ತೆರಿಗೆ ಬೇಡಿಕೆಗಳ ಪೈಕಿ 2009-10 ರವರೆಗಿನ ಬಾಕಿಗಳಲ್ಲಿ 25 ಸಾವಿರ ರೂ.ಗಳ ವಿನಾಯಿತಿ ನೀಡುವುದಾಗಿ ತಿಳಿಸಿದ್ದಾರೆ. 2010-11 ಮತ್ತು 2014-15 ನೇ ಆರ್ಥಿಕ ವರ್ಷದವರೆಗೆ 10 ಸಾವಿರ ರೂ.ಗಳವರೆಗೂ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಇದು 1 ಕೋಟಿಗೂ ಅಕ ತೆರಿಗೆದಾರರಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.