Wednesday, July 23, 2025
Homeರಾಜ್ಯಜಿಎಸ್‌ಟಿ ಟ್ಯಾಕ್ಸ್ ನೋಟೀಸ್ ಹಿನ್ನೆಲೆಯಲ್ಲಿ ನೋ ಕಾಫಿ, ನೋ ಟೀ ನಾಮಫಲಕ

ಜಿಎಸ್‌ಟಿ ಟ್ಯಾಕ್ಸ್ ನೋಟೀಸ್ ಹಿನ್ನೆಲೆಯಲ್ಲಿ ನೋ ಕಾಫಿ, ನೋ ಟೀ ನಾಮಫಲಕ

No Coffee, No Tea Signboard in the wake of GST Tax Notice

ಬೆಂಗಳೂರು,ಜು.23- ಮೋಡ ಕವಿದ ವಾತಾವರಣ, ಚುಮು ಚುಮು ಚಳಿ ಎಂದು ಟೀ ಕುಡಿಯಲು ಕಾಂಡಿಮೆಂಟ್‌ ಗೆ ಹೋದರೆ ನೋ ಕಾಫಿ, ಟೀ…. ಓಗ್ಲಿ ಬ್ಲಾಕ್ ಟೀ, ಲೆಮೆನ್ ಟೀ ಎಂದು ಕಾಂಡಿಮೆಂಟ್ಸ್ ಮಾಲೀಕರು ಬೋರ್ಡ್ ಹಾಕಿ ಜಿಎಸ್‌ಟಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಜಿಎಸ್‌ಟಿ ಟ್ಯಾಕ್ಸ್ ನೋಟೀಸ್‌ಗೆ ದಿಗ್ವಾಂತಗೊಂಡ ಸಣ್ಣ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದು, ಇಂದು ಮತ್ತು ನಾಳೆ ಹಾಲು ಮಾರಾಟ ನಿಲ್ಲಿಸಿದ್ದಾರೆ.ವಾಣಿಜ್ಯ ತೆರಿಗೆ ನೋಟೀಸ್ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಅಂಗಡಿ ಮಾಲೀಕರು, ನಂದಿನಿ ಬೂತ್ ಮಾಲೀಕರು, ಬೇಕರಿ, ಕಾಂಡಿಮೆಂಟ್ಸ್ ಟೀ ಅಂಗಡಿ ವ್ಯಾಪಾರಿಗಳು ಇದನ್ನು ವಿರೋಧಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.

25 ರಂದು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದು, ಅದಕ್ಕೂ ಮುಂಚಿತವಾಗಿ ಇಂದಿನಿಂದ ಮೂರು ದಿನಗಳ ಕಾಲ ಹಾಲು ಮಾರಾಟ ಬಂದ್ ಮಾಡುವ ವರ್ತಕರ ನಿರ್ಧಾರಕ್ಕೆ ಕೆಲ ನಂದಿನಿ ಬೂತ್ ಮಾಲೀಕರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾಂಡಿಮೆಂಟ್ಸ್ ಮಾಲೀಕರು ಕೂಡ ಕೈಜೋಡಿಸಿದ್ದು, ನಾವೂ ಕೂಡ ಕಾಫಿ, ಟೀ ಮಾರುವುದಿಲ್ಲ, ಲೆಮೆನ್ ಟೀ, ಬ್ಲಾಕ್ ಟೀ ಅಷ್ಟನ್ನೇ ಮಾರುತ್ತೇವೆ ಎಂದು ನಾಮಫಲಕ ಅಂಟಿಸಿದ್ದ ದೃಶ್ಯ ಕಂಡುಬಂದವು.ಇಂದು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಿದ್ದು, 25 ರಂದು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಣ್ಣ ವ್ಯಾಪಾರಿಗಳು ತಿಳಿಸಿದ್ದಾರೆ.

ನಮಗೆ ಎರಡು ದಿನ ನಷ್ಟವಾದರೂ ತೊಂದರೆಯಿಲ್ಲ, ಜಿಎಸ್‌ಟಿಯಿಂದ ವರ್ಷಪೂರ್ತಿ ಕಷ್ಟಪಟ್ಟು ದುಡಿದ ಹಣ ತೆರಿಗೆಗೆ ಹೋಗುವುದರಿಂದ ಬಡ ವ್ಯಾಪಾರಿಗಳಿಗೆ ಹೊಡೆತ ಬಿದ್ದಂತಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.ಕೆಲವೆಡೆ ಎಂದಿನಂತೆ ಹಾಲು, ಮೊಸರು ಮಾರಾಟ ನಡೆಯುತ್ತಿದೆ.

RELATED ARTICLES

Latest News