Tuesday, April 15, 2025
Homeರಾಜ್ಯಯಾರ ಹಕ್ಕು ಕಸಿಯುವ ಉದ್ದೇಶ ಇಲ್ಲ : ಡಾ.ಮಹದೇವಪ್ಪ

ಯಾರ ಹಕ್ಕು ಕಸಿಯುವ ಉದ್ದೇಶ ಇಲ್ಲ : ಡಾ.ಮಹದೇವಪ್ಪ

Dr. H.C. Mahadevappa

ಬೆಂಗಳೂರು, ಏ.13- ಹಿಂದುಳಿದ ವರ್ಗಗಳ ಕಾಶ್ವತ ಆಯೋಗದ ವರದಿ ಆಧರಿಸಿ ಯಾರ ಹಕ್ಕುಗಳನ್ನೂ ಕಸಿಯುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೀಸಲಾತಿ ಪರಿಷ್ಕರಣೆ ಮಾಡಬೇಕು ಎಂದು ವರದಿಯಲ್ಲಿ ಶಿಫಾರಸು ನೀಡಿದರೆ ಅದನ್ನು ಅಧ್ಯಯನ ನಡೆಸಲಾಗುವುದು, ಸದ್ಯದ ಪರಿಸ್ಥಿತಿಯಲ್ಲಿ ಜನಸಂಖ್ಯೆ ಸ್ಫೋಟವಾಗುತ್ತಿದೆ. ಹೀಗಾಗಿ ಎಲ್ಲರಿಗೂ ಅವಕಾಶಗಳು ಸಿಗಬೇಕು. ಆ ನಿಟ್ಟಿನಲ್ಲಿ ವೈಜ್ಞಾನಿಕ ಕ್ರಮದಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

2015 ರಲ್ಲಿ ಸುಮಾರು 200 ಕೋಟಿ ರೂ. ಖರ್ಚು ಮಾಡಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ ಜಾತಿಯ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸಮಾಜದ ಬದಲಾವಣೆ ಕುರಿತು ಈ ಸಮೀಕ್ಷೆ ನಡೆಸಿದ್ದು, ಅದನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಬದ್ಧವಾಗಿದೆ ಎಂದರು.

ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದಲ್ಲಿ ಜಾತಿ ಜನಗಣತಿ ಆಗಬೇಕೆಂದು ಹೇಳಿತ್ತು. ಭಾರತದ ಜನಗಣತಿಯಲ್ಲಿ ಜಾತಿ ಮಾಹಿತಿ ಸಂಗ್ರಹಿಸಲು ಪ್ರಯತ್ನಗಳಾಗಿತ್ತು. ಅದನ್ನು ಪಟ್ಟಭದ್ರ ಹಿತಾಸಕ್ತಿಗಳು ಎಂದು ಆರೋಪಿಸಿದ್ದರು.

ಎಸ್‌ಸಿ/ಎಸ್‌ಟಿಗೆ ರಾಜ್ಯಾಂಗ ಬದ್ಧವಾಗಿ ಮೀಸಲಾತಿ ಇದೆ. ಪ್ರವರ್ಗಗಳಿಗೆ ಮೀಸಲಾತಿ ನೀಡುವ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿ ಜನಗಣತಿಯಾಗಿತ್ತು. ಸ್ವಾತಂತ್ರ್ಯ ಬಂದ ನಂತರ ದೇಶದ ಜನಸಂಖ್ಯೆ 35 ಕೋಟಿ ಇತ್ತು. ಈಗ 140 ಕೋಟಿಯಾಗಿದೆ. ಅದಕ್ಕೆ ಅನುಗುಣವಾಗಿ ಅಸಮಾನತೆಯನ್ನು ತೊಡೆದುಹಾಕಿ ಸಮಸಮಾಜ ನಿರ್ಮಾಣ ಮಾಡಲು ಈ ರೀತಿಯ ಅಧ್ಯಯನ ಅಗತ್ಯವಿತ್ತು ಎಂದರು.

ಕೇಂದ್ರ ಮತ್ತು ರಾಜ್ಯಸರ್ಕಾರಗಳು ಹಿಂದುಳಿದ ಸಮುದಾಯಗಳ ಸುಧಾರಣೆಗಾಗಿ ಅಗತ್ಯ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಹಿಂದುಳಿದ ವರ್ಗಗಳ ವರದಿ ಯಾರ ಪರ ಅಥವಾ ವಿರುದ್ಧವೂ ಇಲ್ಲ. ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಲಾಗಿದೆ. ಇದು ಅತ್ಯಂತ ಪ್ರಗತಿಪರವಾದ ವರದಿ ಆಯೋಗದ ವರದಿಯಲ್ಲಿ ಹಲವಾರು ಶಿಫಾರಸುಗಳನ್ನು ನೀಡಲಾಗಿದೆ. ಜನಸಂಖ್ಯೆ ಹೆಚ್ಚಳ, ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಯಲಿದೆ ಎಂದು ಹೇಳಿದರು.

ಇದೇ 11 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯ ಕುರಿತು ಸಮಗ್ರ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವ ದು. ಕೆಲ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಮರು ಸಮೀಕ್ಷೆಯ ಆಗ್ರಹ ಮಾಡುತ್ತಿವೆ. ಇದೆಲ್ಲವನ್ನೂ ಸರ್ಕಾರ ಪರಿಶೀಲಿಸಲಿದೆ పందరు.

ಬಿಜೆಪಿ ಟೀಕೆ ಮಾಡುವುದು ಸಹಜ. ಆ ಪಕ್ಷ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿಲ್ಲ, ಈ ಹಿಂದೆ ಮಂಡಲ ವರದಿ ಜಾರಿಯಾದಾಗ ಕಮಂಡಲ ಹಿಡಿದು ಯಾತ್ರೆ ನಡೆಸಿದರು. ಹೀಗಾಗಿ ಬಿಜೆಪಿ ವರದಿ ಟೀಕೆ ರಾಜಕೀಯ ಪ್ರೇರಿತ ಎಂದು ತಿಳಿಸಿದರು.

ದೇಶದಲ್ಲಿ ಸಾವಿರಾರು ಜಾತಿಗಳಿವೆ. ಎಲ್ಲರಿಗೂ ಸಂಪತ್ತಿನ ಸಮಾನ ಹಂಚಿಕೆಯಾಗಿದೆಯೇ?, ಸಾರ್ವಜನಿಕ ಜೀವನದಲ್ಲಿರುವವರು ಸಮಸಮಾಜದ ಬಗ್ಗೆ ಯೋಚಿಸಬೇಕೇ ಹೊರತು ಟೀಕೆ ಮಾಡುವುದನ್ನೇ ವೃತ್ತಿ ಮಾಡಿಕೊಳ್ಳಬಾರದು ಎಂದರು.

ಈ ವರದಿಗೂ, ರಾಜಕೀಯಕ್ಕೂ ಸಂಬಂಧ ಇಲ್ಲ. ವಿಜ್ಞಾನವನ್ನೇ ತಿಳಿಯದೆ ಕೆಲವರು ಅವೈಜ್ಞಾನಿಕ ಎಂದು ಟೀಕೆ ಮಾಡುತ್ತಿದ್ದಾರೆ. ಅವರು ಇನ್ನೂ ವರದಿ ನೋಡಿಲ್ಲ. ಹಾಗಿದ್ದರೂ ಹೇಗೆ ಟೀಕೆ ಮಾಡಲು ಸಾಧ್ಯ?, ಈ ವರದಿ ಆಧರಿಸಿ ಯಾರ ಹಕ್ಕುಗಳನ್ನೂ ಕಸಿಯುವುದಿಲ್ಲ, ಮತ್ತಿನ್ಯಾರಿಗೋ ಹಕ್ಕು ನೀಡುವ ಉದ್ದೇಶವೂ ಇಲ್ಲ. ಒಬ್ಬರನ್ನು ಹಿಂದಿಡುವುದು, ಮತ್ತೊಬ್ಬರನ್ನು ಮುಂದೆ ತರುವ ಆಲೋಚನೆಗಳೂ ಇಲ್ಲ, ತುಂಬಿ ತುಳುಕುತ್ತಿದ್ದರೆ ಮಾತ್ರ ಅವರಿಂದ ಕಿತ್ತು ಇಲ್ಲದವರಿಗೆ ಸೌಲಭ್ಯ ಕೊಡಬಹುದು. ಸದ್ಯಕ್ಕೆ ಆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.

ತಮ್ಮ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚನೆಯಾಗುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.

RELATED ARTICLES

Latest News