Saturday, July 19, 2025
Homeರಾಜ್ಯಭೈರತಿ ಬಸವರಾಜ್‌ ವಿರುದ್ಧ ರಾಜಕೀಯ ಪ್ರೇರಿತವಾಗಿ ಕ್ರಮ ಕೈಗೊಂಡಿಲ್ಲ : ಪರಮೇಶ್ವರ್‌

ಭೈರತಿ ಬಸವರಾಜ್‌ ವಿರುದ್ಧ ರಾಜಕೀಯ ಪ್ರೇರಿತವಾಗಿ ಕ್ರಮ ಕೈಗೊಂಡಿಲ್ಲ : ಪರಮೇಶ್ವರ್‌

No politically motivated action taken against Bhairati Basavaraj: Parameshwar

ಬೆಂಗಳೂರು,ಜು.19- ಕೆ.ಆರ್‌.ಪುರಂನ ಕ್ಷೇತ್ರದ ಶಾಸಕ ಬೈರತಿ ಬಸವರಾಜ್‌ ಅವರ ವಿರುದ್ಧ ರಾಜಕೀಯ ಪ್ರೇರಿತವಾಗಿ ಕ್ರಮ ಕೈಗೊಂಡಿಲ್ಲ, ಹೆಣ್ಣುಮಗಳು ಕೊಲೆ ಪ್ರಕರಣದಲ್ಲಿ ಶಾಸಕರ ಹೆಸರು ಹೇಳಿದ್ದರಿಂದಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆ ನೋಟಿಸ್‌‍ ಕೊಟ್ಟಿದ್ದಾರೆ. ಹೇಳಿಕೆಯನ್ನು ದಾಖಲಿಸಿದ್ದಾರೆ. ತನಿಖೆ ದುವರೆಯುತ್ತದೆ. ಕೊಲೆ ಪ್ರಕರಣದಲ್ಲಿರುವ ಆರೋಪಿಗಳಿಗೂ, ಶಾಸಕರಿಗೂ ಸಂಬಂಧ ಇದೆಯೇ?, ಅನುಯಾಯಿಗಳ ನಡುವೆ ಬೇರೆ ರೀತಿಯ ಸಂಪರ್ಕ ಇರಬಹುದು. ಆದರೆ ಕೊಲೆ ಪ್ರಕರಣದಲ್ಲಿ ಅವರ ಸಂಪರ್ಕವಿದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದರು.

ನಮ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿವೆ. ರಾಜಕೀಯಪ್ರೇರಿತವಾಗಿ ನಾವು ಯಾವ ಪ್ರಕರಣವನ್ನೂ ದಾಖಲಿಸಿಲ್ಲ. ಬಸವರಾಜ್‌ ಪ್ರಕರಣದಲ್ಲಿ ಯಾವುದೇ ರಾಜಕೀಯ ಇಲ್ಲ. ಕೊಲೆಗೆ ಸಂಬಂಧಪಟ್ಟಂತೆ ದೂರು ನೀಡಿರುವ ಮಹಿಳೆಯೊಬ್ಬರು ಶಾಸಕರ ಹೆಸರು ಹೇಳಿದ್ದಾರೆ. ಹೀಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅದನ್ನು ಯಾವ ರೀತಿ ರಾಜಕೀಯ ಪ್ರೇರಿತ ಎಂದು ಹೇಳಲು ಸಾಧ್ಯ ಎಂದರು.

ಶಾಸಕರ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಅವರ ಪಕ್ಷದ ಶಾಸಕರಿಗೆ 50 ಕೋಟಿ ನೀಡಿದ್ದರೆ, ನಮ ಪಕ್ಷದ ಶಾಸಕರಿಗೆ 12 ಕೋಟಿ ಮಾತ್ರ ಕೊಡುತ್ತಿದ್ದರು. ನಾವು ಅದನ್ನೇ ಅನುಸರಿಸುತ್ತಿದ್ದೇವೆ. ಕೆಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿರುತ್ತದೆ, ಆ ಕ್ಷೇತ್ರಕ್ಕೆ ಕಡಿಮೆ ಹಣ ಕೊಡುತ್ತಾರೆ. ಅಭಿವೃದ್ಧಿಯಲ್ಲಿ ಹಿಂದುಳಿದವರ ಕ್ಷೇತ್ರಕ್ಕೆ ಹೆಚ್ಚಿನ ಹಣ ನೀಡುವ ಮಾನದಂಡವನ್ನು ಅನುಸರಿಸಲಾಗುವುದು. ಪೂರ್ತಿ ಪ್ರಮಾಣದ ಹಣ ನೀಡುವುದಿಲ್ಲ ಎಂದು ಹೇಳಿಲ್ಲ ಮತ್ತು ಯಾವುದೇ ದ್ವೇಷದ ರಾಜಕೀಯ ಮಾಡಿಲ್ಲ ಎಂದು ತಿಳಿಸಿದರು.

ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ತನಿಖೆ ನಡೆಯುತ್ತಿದೆ. ಇದು ಠಾಣೆಗೆ ಸೀಮಿತ ಪಟ್ಟಂತಹ ವಿಚಾರ. ಒಬ್ಬ ವ್ಯಕ್ತಿ ಹೇಳಿಕೆ ನೀಡಿ ನಂತರ ದೂರು ದಾಖಲಿಸಿದ್ದಾನೆ. ಅದರಲ್ಲಿನ ಸತ್ಯಾಸತ್ಯತೆಗಳನ್ನು ಸ್ಥಳಿಯ ಠಾಣಾ ಹಂತದಲ್ಲಿಯೇ ಪರಿಶೀಲಿಸಲಾಗುತ್ತಿದೆ. ಹೆಚ್ಚಿನ ತನಿಖೆ ಅಗತ್ಯ ಇದೆ ಎಂದಾದರೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು. ಪ್ರಾಥಮಿಕ ಹಂತದಲ್ಲೇ ಎಸ್‌‍ಐಟಿ ತನಿಖೆ ಮಾಡಿ ಎಂದು ಒತ್ತಾಯಿಸುವುದಾದರೆ ನಮ ಪೊಲೀಸ್‌‍ ಇಲಾಖೆ ಇರುವುದಾದರೆ ಏಕೆ ಎಂದು ಪ್ರಶ್ನಿಸಿದರು.

ವಕೀಲರ ತಂಡ ತಮ ಬಳಿ ಹಾಗೂ ಮುಖ್ಯಮಂತ್ರಿಯವರ ಬಳಿ ಚರ್ಚೆ ನಡೆಸಿದೆ. ತಾವೂ ಕೂಡ ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡಿದ್ದೇವೆ. ಅಗತ್ಯ ಬಿದ್ದರೆ ಎಸ್‌‍ಐಟಿ ಮಾಡುತ್ತೇವೆ. ಯಾರೋ ಹೇಳಿದರು ಎಂಬ ಕಾರಣಕ್ಕೆ ಎಸ್‌‍ಐಟಿ ಮಾಡುವುದು ಪೊಲೀಸರ ಸಂಪ್ರದಾಯವಲ್ಲ ಎಂದರು.

RELATED ARTICLES

Latest News